ಟೆಕ್ ದೈತ್ಯ ಗೂಗಲ್ ವಿರುದ್ಧದ 15 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಉದ್ಯಮಿಗಳಾದ ಶಿವೌನ್ ರಾಫ್ ಮತ್ತು ಆಡಂ ರಾಫ್ ದಂಪತಿ ಗೆದ್ದಿದ್ದಾರೆ. ಯುರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ (ECJ) ಎತ್ತಿಹಿಡಿದ ತೀರ್ಪಿನ ಪ್ರಕಾರ, ಗೂಗಲ್ (Google) ಈಗ € 2.4 ಶತಕೋಟಿ ( ಸುಮಾರು 26,000 ಕೋಟಿ ರೂಪಾಯಿ) ಮೌಲ್ಯದ ದಂಡವನ್ನು ಪಾವತಿಸಬೇಕಾಗುತ್ತದೆ.
ಬ್ರಿಟನ್ನಿನ ಶಿವೌನ್ ಮತ್ತು ಆಡಮ್ ದಂಪತಿ 2006ರಲ್ಲಿ “ಫೌಂಡಮ್” ಹೆಸರಿನ ವೆಬ್‌ಸೈಟ್ ಆರಂಭಿಸಿದ್ದರು. ಇದೊಂದು ಬೆಲೆ ಹೋಲಿಕೆಯ (Price Comparison) ವೆಬ್‌ಸೈಟ್ ಆಗಿದ್ದು, ಲೈವ್ ಹೋಗುತ್ತಿದ್ದಂತೆ ಇದರ ವಿಸಿಬಿಲಿಟಿ ಸತತವಾಗಿ ಕುಸಿತ ಕಾಣಲಾರಂಭಿಸಿತು. ಬೆಲೆ ಹೋಲಿಕೆ ವೆಬ್‌ಸೈಟ್ ಸ್ಥಾಪಕರಾದ ಇವರು ತಮ್ಮ ಸೇವೆಗಳನ್ನು ಸರ್ಚ್ ಇಂಜಿನ್‌ನ ಅಲ್ಗಾರಿದಮ್‌ಗಳಿಂದ ನೀಡಲಾದ ಕಡಿಮೆ ಶ್ರೇಯಾಂಕಗಳಿಂದ ನಷ್ಟಕ್ಕೆ ಒಗೊಳಗಾದರು.
ವಿಶೇಷವಾಗಿ ಗೂಗಲ್ ನಲ್ಲಿ ಬೆಲೆ ಹೋಲಿಕೆ (Price Comparison) ಮತ್ತು ಶಾಪ್ಪಿಂಗ್ (shopping) ಪದಗಳಲ್ಲಿ ವೆಬ್‌ಸೈಟ್ ಸರ್ಚ್ ಮಾಡಲಾಗುತ್ತಿತ್ತು. ನಂತರ ಗೂಗಲ್‌ನ ಆಟೋಮೆಟಿಕ್ ಸ್ಪ್ಯಾಮ್ ಫಿಲ್ಟರ್‌ನ ಸರ್ಚ್ ಪೆನಾಲ್ಟಿಯಿಂದಾಗಿ ವೆಬ್‌ಸೈಟ್ ವಿಸಿಬಿಲಿಟಿ ಕಡಿಮೆಯಾಗುತ್ತಿದೆ ಎಂಬುದು ದಂಪತಿಯ ಅರಿವಿಗೆ ಬಂತು.
2006 ಮತ್ತು 2008 ರ ನಡುವೆ ಗೂಗಲ್ (Google)ನಲ್ಲಿ ಫೌಂಡಮ್‌ನ ಶ್ರೇಯಾಂಕದ ಕುಸಿತವನ್ನು ರಾಫ್‌ಗಳು ಗಮನಿಸಿದರು, ಇತರ ಸರ್ಚ್ ಇಂಜಿನ್‌ಗಳು “ಫೌಂಡಮ್”ಗೆ ಹೆಚ್ಚು ಅನುಕೂಲಕರ ನಿಯೋಜನೆಗಳನ್ನು ಒದಗಿಸಿವೆ ಎಂಬುದನ್ನೂ ಅವರು ಗಮನಿಸಿದರು. ಡಿಸೆಂಬರ್ 2008 ರಲ್ಲಿ ಗಮನಾರ್ಹವಾದ ಟೆಕ್ ಶೋ ಮೂಲಕ ಯುನೈಟೆಡ್ ಕಿಂಗ್ಡಂನಲ್ಲಿ “ಫೌಂಡಮ್” ಅತ್ಯುತ್ತಮ ಬೆಲೆ ಹೋಲಿಕೆ ವೆಬ್‌ಸೈಟ್ ಎಂದು ಗುರುತಿಸಲ್ಪಟ್ಟಿದ್ದರೂ, ಇದು Googleನ ಕಡಿಮೆ ಶ್ರೇಯಾಂಕದ ಕಾರಣದಿಂದಾಗಿ ಟ್ರಾಫಿಕ್‌ನಲ್ಲಿನ ಉಲ್ಬಣವನ್ನು ನಿರ್ವಹಿಸಲು ಹೆಣಗಾಡಿತು.
ಫೌಂಡಮ್ ವೆಬ್‌ಸೈಟ್ ಸ್ಥಾಪಕರು ಹೇಳುವ ಪ್ರಕಾರ, ಗೂಗಲ್‌ನ ಆಟೋಮೆಟಿಕ್ ಸ್ಪ್ಯಾಮ್ ಫಿಲ್ಟರ್‌ನ ಸರ್ಚ್ ಪೆನಾಲ್ಟಿಯಿಂದಾಗಿ ಬಳಕೆದಾರರು ನಮ್ಮನ್ನು ತಲುಪುವುದು ಕಷ್ಟವಾಯಿತು. ಬಳಕೆದಾರರು ನಮ್ಮ ವೆಬ್‌ಸೈಟ್‌ಗೆ ಬರಲು ಅಸಮರ್ಥರಾಗಿದ್ದರು. ಈ ಕಾರಣದಿಂದ ಹಣಕಾಸಿನ ಉತ್ಪಾದನೆ ಕಷ್ಟವಾಯಿತು. ಆರಂಭದಲ್ಲಿ ವೆಬ್‌ಸೈಟ್ ವಿಸಿಬಿಲಿಟಿ ಕಡಿಮೆಯಾಗಲು ತಾಂತ್ರಿಕದೋಷ ಕಾರಣ ಎಂದು ಭಾವಿಸಿದ್ದರಂತೆ. ಇದಕ್ಕಾಗಿ ಗೂಗಲ್ ಗೆ ಮನವಿ ಸಲ್ಲಿಸಿದರೂ ಸರಿಯಾದ ಪ್ರತಿಕ್ರಿಯೆ ಬಾರದ ಕಾರಣ ರಾಫ್ ದಂಪತಿ ಯುನೈಟೆಡ್ ಕಿಂಗ್ಡಂ (UK) ನಿಯಂತ್ರಕರು, ಅಮೆರಿಕ ಅಧಿಕಾರಿಗಳು ಮತ್ತು ಅಂತಿಮವಾಗಿ ಯುರೋಪಿಯನ್ ಒಕ್ಕೂಟಕ್ಕೆ ತಮ್ಮ ದೂರು ಸಲ್ಲಿಸಿದರು.
ಕೊನೆಗೆ ಆಡಂ 2010ರಲ್ಲಿ ಯುರೋಪಿಯನ್ ಕಮಿಷನ್ ಸಂಪರ್ಕಿಸಿದ ನಂತರ ಪ್ರಕರಣದ ವೇಗ ಪಡೆದುಕೊಂಡಿತು.
ಫೌಂಡಮ್ ಸ್ಪರ್ಧೆಗೆ ಹೋಲಿಸಿದರೆ ಗೂಗಲ್ ತನ್ನದೇ ಶಾಪಿಂಗ್ ಸೇವೆಯನ್ನು ಉತ್ತೇಜಿಸುತ್ತಿದೆ ಎಂಬುದು ಎಂಟಿಟ್ರಸ್ಟ್ ತನಿಖೆಯಲ್ಲಿ ತಿಳಿದು ಬಂತು. ಅದರ ತನಿಖಾ ವರದಿಯನ್ನು ಆಧರಿಸಿ 2017ರಲ್ಲಿ ತೀರ್ಪು ನೀಡಿದ ಯುರೋಪಿಯನ್ ಕಮಿಷನ್, ಗೂಗಲ್ ಮಾರುಕಟ್ಟೆಯ ಮೇಲಿನ ತನ್ನ ನಿಯಂತ್ರಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿತು. ಹಾಗೂ ಗೂಗಲ್‌ಗೆ 2.4 ಬಿಲಿಯನ್ ಪೌಂಡ್ ( ಸುಮಾರು 26,172 ಕೋಟಿ ರೂ.) ದಂಡ ವಿಧಿಸಿತು.
ಯುರೋಪಿಯನ್ ಕಮಿಷನ್ ತೀರ್ಪು ಪ್ರಶ್ನಿಸಿ ಗೂಗಲ್ ಯುರೋಪಿಯನ್ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿತು.
ಕೋರ್ಟ್‌ನಲ್ಲಿ ಏಳು ವರ್ಷಗಳ ಪ್ರಕರಣದ ವಿಚಾರಣೆ ನಡೆಯಿತು. ಅಂತಿಮವಾಗಿ ಈಗ ಯುರೋಪಿಯನ್ ಕಮಿಷನ್ ತೀರ್ಪನ್ನು ಯುರೋಪಿಯನ್ ಕೋರ್ಟ್ ಎತ್ತಿ ಹಿಡಿದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆಡಂ ಪತ್ನಿ ಶಿವೌನ್, ನಾವಿಬ್ಬರೂ ಬಹುಶಃ ಬದಲಾವಣೆಯನ್ನು ತರಬಹುದು ಎಂಬ ಭ್ರಮೆಯಲ್ಲಿ ಬೆಳೆದಿದ್ದೇವೆ. ನಾವು ನಿಜವಾಗಿಯೂ ಕಿಡಿಗೇಡಿಗಳನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.
ಈ ದಂಪತಿ ಗೂಗಲ್ ವಿರುದ್ಧ ನಾಗರಿಕ ಹಾನಿಯ ಪರಿಹಾರದ ಅರ್ಜಿಯನ್ನು ಸಹ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆಯು 2026 ರಲ್ಲಿ ನಡೆಯಲಿದೆ. 2016ರಲ್ಲಿ ಫೌಂಡಮ್ ವೆಬ್‌ಸೈಟ್ ಬಂದ್ ಮಾಡುವ ನಿರ್ಧಾರಕ್ಕೂ ದಂಪತಿ ಬಂದಿದ್ದರಂತೆ. ಕೊನೆಗೆ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದರು ಎಂದು ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ