ವೀಡಿಯೊ…| ನಡುಬೀದಿಯಲ್ಲೇ ದೊಣ್ಣೆಗಳಿಂದ ಪರಸ್ಪರ ಬಡಿದಾಡಿಕೊಂಡ ಮಹಿಳೆಯರ ಗುಂಪು…; ಸುತ್ತಲಿನ ಜನ ಕಂಗಾಲು

ಉತ್ತರ ಪ್ರದೇಶದ ಬಾಗ್‌ಪತ್ ಪಟ್ಟಣದಲ್ಲಿ ಮಹಿಳೆಯರ ಎರಡು ಗುಂಪುಗಳ ನಡುವಿನ ಬಡಿದಾಟದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಮಹಿಳೆಯರು ದೊಣ್ಣೆ ದೊಣ್ಣೆಗಳಲ್ಲಿ ಬಡಿದಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಬಾಗ್‌ಪತ್‌ನ ದೋಘಾಟ್ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಮಹಿಳೆಯರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮಹಿಳೆಯರು ಪರಸ್ಪರ ಬಡಿದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಗುರುವಾರ ಉತ್ತರ ಪ್ರದೇಶದ ದೋಘಾಟ್‌ನಲ್ಲಿ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದ ವಿವಾದವು ಎರಡು ಗುಂಪುಗಳ ಮಹಿಳೆಯರ ನಡುವೆ ಗೊಂದಲದ ಘರ್ಷಣೆಗೆ ತಿರುಗಿತು.
ವರದಿಗಳ ಪ್ರಕಾರ, ಹಾಡುಗಳನ್ನು ಹಾಕುವ ವಿಷಯದಲ್ಲಿ ವಾಗ್ವಾದ ಪ್ರಾರಂಭವಾಯಿತು. ನಂತರ ಇದು ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ಮಹಿಳೆಯರು ದೊಣ್ಣೆಗಳು ಮತ್ತು ಕೈಗೆ ಸಿಕ್ಕ ವಸ್ತುಗಳಿಂದ ಪರಸ್ಪರ ಥಳಿಸಿದ್ದಾರೆ. ನಂತರ ಆ ಪ್ರದೇಶದಲ್ಲಿ ಉದ್ವಿಗ್ನತೆ ತೀವ್ರಗೊಂಡಿತು.

ಇಂಟರ್ನೆಟ್ ಬಳಕೆದಾರರು ಇದನ್ನು ‘ಬಾಗ್‌ಪತ್ ಫೈಟ್ 2.0’ ಎಂದು ಕರೆದಿದ್ದಾರೆ. ಈ ವೀಡಿಯೊವನ್ನು ಬಾಲ್ಕನಿಯಿಂದ ಯಾರೋ ರೆಕಾರ್ಡ್ ಮಾಡಿದ್ದಾರೆ. ವೀಡಿಯೋದಲ್ಲಿ ಯುವತಿಯರಿಂದ ಹಿಡಿದು ಮಧ್ಯವಯಸ್ಸಿನವರೆಗಿನ ಮಹಿಳೆಯರು ಒಬ್ಬರಿಗೊಬ್ಬರು ದೊಣ್ಣೆಯಿಂದ ಹೊಡೆದಾಡುತ್ತಿರುವುದನ್ನು ಕಾಣಬಹುದು. ಆದರೆ, ಹೊಡೆದಾಟ ತಡೆಯಲು ತಕ್ಷಣವೇ ಯಾರೂ ಬಂದಿಲ್ಲ. ಘಟನೆಯ ವೀಡಿಯೊ, ಜನನಿಬಿಡ ಬೀದಿಯಲ್ಲಿ ಸುಮಾರು ಎಂಟರಿಂದ ಹತ್ತು ಮಹಿಳೆಯರು ದೊಣ್ಣೆಗಳಿಂದ ಬಡಿದಾಡುವುದನ್ನು ತೋರಿಸುತ್ತದೆ. ನೋಡುಗರು ಆಘಾತದಿಂದ ನೋಡುವುದನ್ನು ಕಾಣಬಹುದು, ಕೆಲವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಹೊಡೆದಾಟದ ತೀವ್ರತೆಯಿಂದಾಗಿ ಹಿಂದಕ್ಕೆ ಸರಿದರು. ವೀಡಿಯೊದಲ್ಲಿ ಮಹಿಳೆಯೊಬ್ಬರು ಮಗುವಿಗೆ ಥಳಿಸಿದ ದೃಶ್ಯವೂ ಇದೆ.

ಪ್ರಮುಖ ಸುದ್ದಿ :-   ಮಹಾಕುಂಭ 2025 : ತಲೆ ಮೇಲೆ 45 ಕಿಲೋ ತೂಕದ ರದ್ರಾಕ್ಷಿ ಸರ ಹೊತ್ತ ಸನ್ಯಾಸಿ....!
https://twitter.com/i/status/1854483207019766075

ಎಕ್ಸ್‌ನಲ್ಲಿ ವೈರಲ್ ಆಗಿರುವ ವೀಡಿಯೊ ಕುರಿತು ಬಾಗ್‌ಪತ್ ಪೊಲೀಸರು ಪ್ರತಿಕ್ರಿಯಿಸಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. “ದೋಘಾಟ್ ಪಟ್ಟಣದಲ್ಲಿ ಮಹಿಳೆಯರ ಗುಂಪುಗಳ ನಡುವಿನ ಹೊಡೆದಾಟದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಎಂದು ತಿಳಿಸಬೇಕಾಗಿದೆ. ಈ ಸಂಬಂಧ ದೋಘಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement