ವೀಡಿಯೊ..| ಸ್ಮಶಾನದ ಅಡಿಯಲ್ಲಿ ಹೆಜ್ಬೊಲ್ಲಾಗಳ ಬೃಹತ್‌ ಭೂಗತ ಸುರಂಗ ಪತ್ತೆ ; ಅದರಲ್ಲಿದ್ದವು ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರಗಳು, ರಾಕೆಟ್‌ಗಳು, ದ್ವಿಚಕ್ರವಾಹನಗಳು

ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸದಸ್ಯರು ಬಳಸುತ್ತಿದ್ದ ಅನೇಕ ಭೂಗತ ಸುರಂಗಗಳನ್ನು “ಕಿತ್ತುಹಾಕಲಾಗಿದೆ” ಎಂದು ಇಸ್ರೇಲಿ ಮಿಲಿಟರಿ ಭಾನುವಾರ ಹೇಳಿದೆ. ಇದರಲ್ಲಿ ಸ್ಮಶಾನದ ಅಡಿಯಲ್ಲಿ ಇರುವ ಭೂಗತ ಸುರಂಗವೂ ಸೇರಿದೆ ಎಂದು ಹೇಳಲಾಗಿದೆ.
X ನಲ್ಲಿನ ಪೋಸ್ಟ್‌ನಲ್ಲಿ, ಇಸ್ರೇಲಿ ರಕ್ಷಣಾ ಪಡೆಗಳು (IDF) ಹಂಚಿಕೊಂಡ ವೀಡಿಯೊದಲ್ಲಿ ಕಿಲೋಮೀಟರ್ ಗಟ್ಟಲೆ ಉದ್ದದ ಸುರಂಗವು ಕಮಾಂಡ್ ಮತ್ತು ಕಂಟ್ರೋಲ್ ರೂಂಗಳು, ಮಲಗುವ ಕೋಣೆಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಗಳು, ಐಷಾರಾಮಿ ಸೌಲಭ್ಯಗಳನ್ನು ಹೊಂದಿವೆ. ಸರಂಗದೊಳಗೆ ದ್ವಿಚಕ್ರ ವಾಹನಗಳು ಕಂಡುಬಂದಿವೆ. ಸುರಂಗದಲ್ಲಿ ಸಂಗ್ರಹಿಸಲಾದ ಡಜನ್ಗಟ್ಟಲೆ ಶಸ್ತ್ರಾಸ್ತ್ರಗಳು ಮತ್ತು ಇತರ ಮಿಲಿಟರಿ ಉಪಕರಣಗಳನ್ನು ತೋರಿಸುವ ವೀಡಿಯೊವನ್ನು ಇಸ್ರೇಲಿ ಸೇನೆ ಹಂಚಿಕೊಂಡಿದೆ.

“ಹೆಜ್ಬೊಲ್ಲಾ ಮಾನವ ಜೀವವನ್ನು ಗೌರವಿಸುವುದಿಲ್ಲ ಎಂದು ಐಡಿಎಫ್‌ (IDF) ಹೇಳಿದೆ. 4,500 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಅನ್ನು ಪಂಪ್ ಮಾಡುವ ಮೂಲಕ ಸುರಂಗವನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲಿ ಪಟ್ಟಣಗಳ ಮೇಲೆ ದಾಳಿ ಮಾಡಿದ ನಂತರ ಗಾಜಾದಲ್ಲಿ ಯುದ್ಧ ಭುಗಿಲೆದ್ದ ನಂತರ ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ಲೆಬನಾನಿನ ಗಡಿಯುದ್ದಕ್ಕೂ ಇಸ್ರೇಲ್‌ ಮೇಲೆ ದಾಳಿ ನಡೆಸುತ್ತಿದೆ.
ಸೆಪ್ಟೆಂಬರ್‌ನಲ್ಲಿ ಲೆಬನಾನ್‌ ನಲ್ಲಿ ಇರುವ ಹೆಜ್ಬೊಲ್ಲಾ ವಿರುದ್ಧ ಗಡಿಯಾಚೆಗಿನ ಭೂ ದಾಳಿಯನ್ನು ಪ್ರಾರಂಭಿಸಿದ ನಂತರ, ಇಸ್ರೇಲಿ ಮಿಲಿಟರಿಯು ಹಲವಾರು ಸುರಂಗ ದಂಡಗಳನ್ನು ಪತ್ತೆ ಹಚ್ಚಿದೆ ಎಂದು ಇಸ್ರೇಲಿ ಸೇನೆ ಹೇಳಿದೆ. ಅದರಲ್ಲಿ ಸುಮಾರು 25 ಮೀಟರ್ ಉದ್ದ ಇಸ್ರೇಲ್‌ ಗಡಿಯೊಳಗೂ ಬಂದಿದೆ ಎಂದು ಅದು ಹೇಳಿದೆ.
ಕಳೆದ ತಿಂಗಳು,ಇಸ್ರೇಲಿ ಸೇನೆ ಲೆಬನಾನಿನ ನಾಗರಿಕರ ಮನೆಯ ಅಡಿಯಲ್ಲಿ ಹೆಜ್ಬೊಲ್ಲಾ ಸದಸ್ಯರು ಬಳಸಿದ್ದಾರೆಂದು ಹೇಳಲಾದ ಸುರಂಗದ ವೀಡಿಯೊವನ್ನು ಬಿಡುಗಡೆ ಮಾಡಿತ್ತು.

ವೀಡಿಯೊದಲ್ಲಿ, ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್‌ನಲ್ಲಿ ಕಬ್ಬಿಣದ ಬಾಗಿಲುಗಳು, “ಕಾರ್ಯನಿರ್ವಹಿಸುವ” ಕೊಠಡಿಗಳು, AK-47 ರೈಫಲ್‌ಗಳು, ಒಂದು ಮಲಗುವ ಕೋಣೆ, ಸ್ನಾನಗೃಹ, ಜನರೇಟರ್‌ಗಳ ಸಂಗ್ರಹ ಕೊಠಡಿ, ನೀರಿನ ಟ್ಯಾಂಕ್‌ಗಳು, ದ್ವಿಚಕ್ರ ವಾಹನಗಳಿದ್ದ “ನೂರು ಮೀಟರ್” ಉದ್ದದ ಸುರಂಗವನ್ನು ತೋರಿಸುತ್ತಿರುವುದು ಕಂಡುಬಂದಿದೆ.
“ದಕ್ಷಿಣ ಲೆಬನಾನ್‌ನ ಹಳ್ಳಿಗಳಲ್ಲಿ ಹೆಜ್ಬೊಲ್ಲಾ ಏನು ಮಾಡುತ್ತಿದೆ ಎಂಬುದನ್ನು ನೋಡಲು ನಾವು ದಕ್ಷಿಣ ಲೆಬನಾನ್‌ಗೆ ಗಡಿಯನ್ನು ದಾಟುತ್ತಿದ್ದೇವೆ. ಉತ್ತರ ಇಸ್ರೇಲ್‌ನ ಮೇಲೆ ಅಕ್ಟೋಬರ್ 7-ಶೈಲಿಯ ದಾಳಿಗೆ ತಯಾರಿ ನಡೆಸುತ್ತಿರುವ ಹೆಜ್ಬೊಲ್ಲಾಗಳು ನಾಗರಿಕರ ಮನೆಗಳ ಕೆಳಗೆ ಬಂಕರ್‌ಗಳನ್ನು ನಿರ್ಮಿಸಿಕೊಂಡುಅಡಗುತಾಣವನ್ನಾಗಿ ಮಾಡಿಕೊಂಡಿದ್ದಾರೆ ” ಎಂದು ಇಸ್ರೇಲಿ ಸೇನೆಯವರು ಕ್ಲಿಪ್‌ನಲ್ಲಿ ಹೇಳುವುದನ್ನು ಕೇಳಬಹುದಾಗಿದೆ.
ಇರಾನ್ ಬೆಂಬಲಿತ ಹೆಜ್ಬೊಲ್ಲಾದ ಪ್ರಮುಖ ಣ್ಯ ಘಟಕಗಳನ್ನು ಉಲ್ಲೇಖಿಸುವಾಗ ವಿವರಣೆ ನೀಡುತ್ತಿರುವ ಸೈನಕರು ಭುಗತ ಸುರಂಗೊಳಗಿನ ವ್ಯವಸ್ಥೆ ಬಗ್ಗೆ ಹೇಳುತ್ತ “ಭಯೋತ್ಪಾದಕರು ವಾರಗಟ್ಟಲೆ ಇಲ್ಲಿ ಉಳಿಯಬಹುದು” ಎಂದು ಹೇಳಿದ್ದಾರೆ. “ಇದು ನಾವು ಗಾಜಾದಲ್ಲಿ ನೋಡಿದ ಸುರಂಗಗಳಂತೆ ಇಲ್ಲ” ಎಂದು ಅವರು ಹೇಳಿದ್ದಾರೆ.

ಇಸ್ರೇಲಿ ಮಿಲಿಟರಿ ಭಾನುವಾರ ಲೆಬನಾನ್ ಮತ್ತು ಗಾಜಾದಲ್ಲಿ ವೈಮಾನಿಕ ದಾಳಿಗಳನ್ನು ನಡೆಸಿತು. ಇಸ್ರೇಲಿ ದಾಳಿಯಿಂದ ಮೃತಪಟ್ಟ 30 ಜನರಲ್ಲಿ 13 ಮಕ್ಕಳು ಸೇರಿದ್ದಾರೆ ಎಂದು ಯುದ್ಧ ಪೀಡಿತ ಗಾಜಾ ಪಟ್ಟಿಯಲ್ಲಿರುವ ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.
ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಅಕ್ಟೋಬರ್ 7 ರ ದಾಳಿಯ ಪರಿಣಾಮವಾಗಿ ಇಸ್ರೇಲಿನಲ್ಲಿ 1,200 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ನಂತರ ಗಾಜಾದಲ್ಲಿ ಯುದ್ಧವು ಸ್ಫೋಟಗೊಂಡಿತು, ಇಸ್ರೇಲ್‌ನ ಪ್ರತೀಕಾರದ ಕಾರ್ಯಾಚರಣೆಯು ಅಂದಿನಿಂದ ಗಾಜಾದಲ್ಲಿ 43,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
ಲೆಬನಾನ್‌ನಲ್ಲಿ, ರಾಜಧಾನಿ ಬೈರುತ್‌ನ ಉತ್ತರಕ್ಕೆ ನಡೆದ ಭಾನುವಾರದ ದಾಳಿಯಲ್ಲಿ 23 ಜನ ಸೇರಿದಂತೆ ದೇಶಾದ್ಯಂತ ಇಸ್ರೇಲಿ ದಾಳಿಗಳಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈವರೆಗಿನ ಇಸ್ರೇಲ್‌ ದಾಳಿಯಲ್ಲಿ ಲೆಬನಾನ್‌ನಲ್ಲಿ 3,100 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ, ಸೆಪ್ಟೆಂಬರ್ 23 ರಂದು ಇರಾನ್ ಬೆಂಬಲಿತ ಗುಂಪಿನ ವಿರುದ್ಧ ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ನಂತರ ಇದು ಸಂಭವಿಸಿದೆ.ಇಸ್ರೇಲ್ ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಹೆಜ್ಬೊಲ್ಲಾಗೆ ಸೇರಿದ ಅಪಾರ್ಟ್‌ಮೆಂಟ್‌ನ ಮೇಲೆ ದಾಳಿ ನಡೆಸಿತು ಮತ್ತು ಹೆಜ್ಬೊಲ್ಲಾ ಕಮಾಂಡರ್ ಸೇರಿದಂತೆ ಒಂಬತ್ತು ಜನರು ದಾಳಿಯಲ್ಲಿ ಸಾವಿಗೀಡಾಗಿದ್ದಾರೆ.

ಪ್ರಮುಖ ಸುದ್ದಿ :-   ಆರ್‌.ಜಿ. ಕರ್ ಕಾಲೇಜ್‌ ವೈದ್ಯೆ ಅತ್ಯಚಾರ-ಕೊಲೆ ಪ್ರಕರಣ ; ಮಾಜಿ ಪ್ರಾಂಶುಪಾಲ ಸಂದೀಪ ಘೋಷ್‌ ಗೆ ಜಾಮೀನು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement