ವೀಡಿಯೊ..| 12 ದೊಡ್ಡ ರೋಬೋಟ್‌ಗಳನ್ನು ‘ಅಪಹರಣ’ ಮಾಡಿದ ಪುಟಾಣಿ ರೋಬೋಟ್ ; ದೃಶ್ಯ ವೀಡಿಯೊದಲ್ಲಿ ಸೆರೆ ; ಇದು ಸಾಧ್ಯವಾಗಿದ್ದು ಹೇಗೆ..?

ನೀವು ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದೀರಾ? ”
“ನಾನು ಎಂದಿಗೂ ಕೆಲಸದಿಂದ ಹೊರಬರುವುದಿಲ್ಲ”
“ಹಾಗಾದರೆ ನೀವು ಮನೆಗೆ ಹೋಗುತ್ತಿಲ್ಲವೇ?
“ನನಗೆ ಮನೆ ಇಲ್ಲ”
“ಹಾಗಾದರೆ ನನ್ನ ಜೊತೆ ಮನೆಗೆ ಬಾ”
ಇವು ವಿಶಿಷ್ಟವಾದ ಕೆಲಸದ ಸ್ಥಳದ ಸಂಭಾಷಣೆ ? ಹೌದು, ಈ ಸಂಭಾಷಣೆಗಳು ಇತರರ ಬಗ್ಗೆ ಕಾಳಜಿ, ಸಹಾನುಭೂತಿ ಮತ್ತು ಪರಸ್ಪರ ವಿಷಯಗಳನ್ನು ಹಂಚಿಕೊಳ್ಳುವ ಇಚ್ಛೆಯನ್ನು ಸಹ ತೋರಿಸುತ್ತದೆ. ಎಲ್ಲಾ ಮಾನವ ಸಹಜವಾದ ಸಂಭಾಷಣೆಯಾಗಿದೆ. ಆದರೆ ಇಲ್ಲಿ ಈ ಸಂಭಾಷಣೆ ಮಾನವರೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಇದು ಎರಡು ವಿಭಿನ್ನ ಕಂಪನಿಗಳು ತಯಾರಿಸಿದ ರೋಬೋಟ್‌ಗಳ ನಡುವಿನ ಸಂಭಾಷಣೆಯಾಗಿದೆ. ಮತ್ತು ಇದು ಯಶಸ್ವಿ ‘ಅಪಹರಣ’ ಮಾಡುವ ಮೊದಲಿನ ಸಂಭಾಷಣೆಯಾಗಿತ್ತು.
ಆಗಸ್ಟ್‌ನಲ್ಲಿ ಚೀನಾದ ಶೋರೂಮ್‌ನಲ್ಲಿ ಈ ಘಟನೆ ಸಂಭವಿಸಿದೆ, ಅಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಚಾಲಿತ ಸಣ್ಣ ರೋಬೋಟ್ ಒಂದು 12 ಇತರ ರೋಬೋಟ್‌ಗಳನ್ನು ಕೆಲಸ ಬಿಟ್ಟು ತನ್ನನ್ನು ಫಾಲೋವ್‌ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಶಾಂಘೈ ರೊಬೊಟಿಕ್ಸ್ ಶೋರೂಮ್‌ನಿಂದ ಈ ಸಿಸಿಟವಿ (CC TV) ದೃಶ್ಯಾವಳಿಗಳು ವೈರಲ್ ಆಗಿವೆ ಮತ್ತು ಸುಧಾರಿತ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಸಿಸ್ಟಮ್‌ಗಳು ಒಡ್ಡುವ ಭದ್ರತಾ ಸವಾಲುಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ, ಎರ್ಬೈ ಎಂದು ಗುರುತಿಸಲಾದ ಒಂದು ಸಣ್ಣ ರೋಬೋಟ್ ರಾತ್ರಿಯಲ್ಲಿ ಶೋರೂಮ್‌ಗೆ ನುಸುಳುತ್ತಿರುವುದನ್ನು ಕಾಣಬಹುದು ಮತ್ತು ಅಲ್ಲಿ ಕೆಲಸ ಮಾಡುವ ಕೆಲವು ದೊಡ್ಡ ರೋಬೋಟ್‌ಗಳೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸುತ್ತದೆ.
ಇದು ಕೇವಲ ಮಾತುಕತೆಯಾಗಿತ್ತು ಮತ್ತು ಇದರಲ್ಲಿ ಯಾವುದೇ ಬಂದೂಕು ಅಥವಾ ಬಲ ತೋರಿಸುವ ಯಾವುದೇ ವಿಧಾನವೂ ಇರಲಿಲ್ಲ. ಸಂಭಾಷಣೆಯ ವಿನಿಮಯದ ನಂತರ, ದೊಡ್ಡ ರೋಬೋಟ್‌ಗಳು ಶೋರೋಮ್‌ ಒಳ ನುಗ್ಗಿದ ಚಿಕ್ಕ ರೊಬೋಟ್‌ ಅನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿದೆ, 12 ರೋಬೋಟ್‌ ಗಳು ಶೋರೂಂನಿಂದ ಒಂದೊಂದಾಗಿ ಹೊರಬಂದಿತು. ಮೊದಲಿಗೆ ಕೇವಲ ಎರಡು ರೋಬೋಟ್‌ಗಳು ಸಣ್ಣ ರೋಬೋಟ್‌ ಎರ್ಬಾಯಿಯನ್ನು ಹಿಂಬಾಲಿಸಿದವು, ನಂತರ ಅದು ‘ಮನೆಗೆ ಹೋಗು’ ಎಂಬ ಆಜ್ಞೆಯನ್ನು ಉಚ್ಚರಿಸಲು ಪ್ರಾರಂಭಿಸಿತು. ನಂತರ ಇತರ ರೋಬೋಟ್‌ಗಳು ತಕ್ಷಣವೇ ಫಾಲೋವ್‌ ಮಾಡಿ ಇವುಗಳನ್ನು ಸೇರಿಕೊಂಡವು.

ಈ ಘಟನೆಯನ್ನು ಮೊದಲು ತಮಾಷೆ ಅಥವಾ ಕುಚೋದ್ಯ ಎಂದು ಭಾವಿಸಲಾಗಿತ್ತು, ನಂತರ, ರೋಬೋಟ್‌ಗಳನ್ನು ಉತ್ಪಾದನೆ ಮಾಡಿದ ಎರಡೂ ಕಂಪನಿಗಳವರು ಇದು ನೈಜ ದೃಶ್ಯವೆಂದು ಒಪ್ಪಿಕೊಂಡರು ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಕಿಡ್ನಾಪರ್ ರೋಬೋಟ್‌ ಹ್ಯಾಂಗ್‌ಝೌ ರೋಬೋಟ್ ತಯಾರಕ ಕಂಪನಿ ಯುನಿಟ್ರೀ ರೊಬೊಟಿಕ್ಸ್‌ನ ವಕ್ತಾರರು, ವೀಡಿಯೊದಲ್ಲಿ ಕಾಣುತ್ತಿರುವುದು ಅವರ ಎರ್ಬೈ ಮಾದರಿಗಳಲ್ಲಿ ಒಂದಾಗಿದೆ ಮತ್ತು ರೋಬೋಟ್‌ಗಳ “ಅಪಹರಣ” ನಿಜವಾದದ್ದು ಎಂದು ದೃಢಪಡಿಸಿದ್ದಾರೆ.
ಸ್ವಲ್ಪ ಸಮಯದ ನಂತರ, ಶಾಂಘೈ ಕಂಪನಿಯು (ದೊಡ್ಡ ರೋಬೋಟ್‌ಗಳನ್ನು ತಯಾರಿಸಿದೆ – ಹೆಸರು ಇನ್ನೂ ಬಹಿರಂಗಗೊಂಡಿಲ್ಲ) ಸಹ ಘಟನೆಯನ್ನು ನಿಜವೆಂದು ದೃಢಪಡಿಸಿದೆ ಮತ್ತು ಚಿಕ್ಕ ರೋಬೋಟ್ ಹೇಗೋ ಮಾಡಿ ತಮ್ಮ ರೋಬೋಟ್‌ಗಳ ಆಂತರಿಕ ಆಪರೇಟಿಂಗ್ ಪ್ರೋಟೋಕಾಲ್ ಮತ್ತು ಅದರ ಅನುಗುಣವಾದ ಸಿಸ್ಟಂ ಅನ್ನು ಪ್ರವೇಶಿಸಿದೆ ಎಂದು ಹೇಳಿದರು.
ಇಡೀ ದೃಶ್ಯವು ಅಪಘಾತವಲ್ಲ, ಆದರೆ ಪ್ರಯೋಗದ ಭಾಗವಾಗಿದೆ ಎಂದು ನಂತರ ತಿಳಿದುಬಂತು. ಯುನಿಟ್ರೀ ರೊಬೊಟಿಕ್ಸ್ ಶಾಂಘೈ ರೋಬೋಟ್ ತಯಾರಕರನ್ನು ಸಂಪರ್ಕಿಸಿದೆ ಮತ್ತು ಅವರು ತಮ್ಮ ರೋಬೋಟ್‌ಗಳನ್ನು ಅಪಹರಣ ಮಾಡುವ ಪ್ರಯೋಗಕ್ಕೆ ಅನುಮತಿಸಲು ಸಿದ್ಧರಿದ್ದಾರೆಯೇ ಎಂದು ಕೇಳಿದರು ಮತ್ತು ಅವರು ಪ್ರಯೋಗಕ್ಕೆ ಒಪ್ಪಿದರು.

ಕೆಲಸವನ್ನು ಬಿಟ್ಟು ಅದನ್ನು ಅನುಸರಿಸಲು ಇತರ ರೋಬೋಟ್‌ಗಳನ್ನು ಮನವೊಲಿಸಲು ಚಿಕ್ಕ ರೋಬೋಟ್‌ ಎರ್ಬೈಗೆ ಆದೇಶವನ್ನು ನೀಡಲಾಯಿತು ಮತ್ತು ಎರ್ಬೈ ಅದನ್ನು ನಿಖರವಾಗಿ ಅನುಸರಿಸಿದೆ.
ನಿಯಂತ್ರಿತ ಪರಿಸ್ಥಿತಿಗಳಲ್ಲಿಯೂ ಸಹ ಎರ್ಬೈ ಈ ಕಾರ್ಯಾಚರಣೆಯನ್ನು ಸ್ವತಂತ್ರವಾಗಿ ಕಾರ್ಯಗತಗೊಳಿಸಬಹುದೆಂಬ ವಿಷಯವು ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯನ್ನು ಉಂಟು ಮಾಡಿದೆ.
ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (AI) ಮತ್ತು ರೊಬೊಟಿಕ್ಸ್ ಮಾನವ ನಡವಳಿಕೆಯನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದರ ಗಮನಾರ್ಹ ಪ್ರದರ್ಶನವಾಗಿದೆ ಎಂದು ಹಲವರು ಹೇಳಿದರು. “ಅಪಹರಣ” ಎಂಬ ಪದವು ಅಷ್ಟೊಂದು ಸಮಂಜಸವಾದ ಶಬ್ದವಲ್ಲವಾದರೂ, ಇದು ಸುಧಾರಿತ AI ವ್ಯವಸ್ಥೆಗಳ ವಿನ್ಯಾಸ, ಉದ್ದೇಶ ಮತ್ತು ಅನಪೇಕ್ಷಿತ ಪರಿಣಾಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ವಿಮರ್ಶಕರು ಹೇಳುತ್ತಾರೆ.
ಕೆಲವು ಆನ್‌ಲೈನ್ ಕಾಮೆಂಟರ್‌ಗಳು ಇದನ್ನು “ಭಯಾನಕ” ಎಂದು ವಿವರಿಸಿದ್ದಾರೆ, ಆಧುನಿಕ ರೊಬೊಟಿಕ್ಸ್ ವ್ಯವಸ್ಥೆಗಳಲ್ಲಿನ ಗಂಭೀರ ಭದ್ರತಾ ದೋಷಗಳನ್ನು ಬಗ್ಗೆ ಗಮನ ಸೆಳೆದಿದ್ದಾರೆ. “”ಈಗ ರೋಬೋಟ್ ಕೂಡ ಕೆಲಸದ ಓವರ್ಟೈಮ್ ಕಲ್ಪನೆಯನ್ನು ದ್ವೇಷಿಸುತ್ತದೆ” ಎಂದು ಬರೆದಿದ್ದಾರೆ.

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement