ವೀಡಿಯೊ..| ಮರದ ಕೊಂಬೆಯಲ್ಲಿ ನೇತಾಡುತ್ತಿದ್ದ ಹಾವನ್ನು ನೀರಿನಿಂದ ಜಿಗಿದು ಕಚ್ಚಿ ಹಿಡಿದು ಮೀನು ; ಮತ್ತೊಂದು ಮೀನಿನ ಎಂಟ್ರಿ : ಮುಂದೇನಾಯ್ತು…ಅಚ್ಚರಿ !

ಪ್ರತಿಯೊಂದು ಜೀವಿಗೂ ಪ್ರಕೃತಿ ವಿಶೇಷತೆಯನ್ನು ನೀಡಿದೆ. ಇದರಿಂದಾಗಿಯೇ ಪ್ರತಿಯೊಂದು ಜೀವಿಯು ಇನ್ನೊಂದಕ್ಕಿಂತ ಭಿನ್ನವಾಗಿ ಕಾಣುತ್ತದೆ. ಒಂದು ಪ್ರಾಣಿಗೆ ಬೇಟೆಗಾರನಾಗಿ ಪರಿಣಮಿಸುವ ಪ್ರಾಣಿ ಮತ್ತೊಂದು ಪ್ರಾಣಿಯ ಬೇಟೆಗೆ ತಾನೇ ಬಲಿಯಾಗುತ್ತದೆ. ಇದು ಪ್ರಕೃತಿಯ ನಿಯಮವಾಗಿದೆ. ಇದರಲ್ಲಿ ಕೇವಲ ಬಲಶಾಲಿ ಮಾತ್ರವಾದರೆ ಸಾಲದು. ಬಲದ ಜೊತೆಗೆ ಬುದ್ಧಿವಂತಿಕೆಯೂ ಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಅದರ ಮೂಲಕ ಈ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಈ ವೀಡಿಯೊದಲ್ಲಿ ಹಾವು ಮತ್ತು ಮೀನಿನ ನಡುವಿನ ಸಂಘರ್ಷವನ್ನು ತೋರಿಸಲಾಗಿದೆ. ಮೀನೊಂದು ಹಾವಿನ ಮೇಲೆ ದಾಳಿ ಮಾಡುತ್ತದೆ. ಅಂದರೆ ಇಲ್ಲಿ ಬೇಟೆಗಾರ ಪ್ರಾಣಿಯೇ ಬೇಟೆಗೆ ಈಡಾಗುತ್ತದೆ. ಇಲ್ಲಿ ಮೀನು ತನ್ನ ಆಹಾರಕ್ಕಾಗಿ ನೀರಿನ ಅಂಚಿಗೆ ಬಾಗಿದ್ದ ಮರದ ಕೊಂಬೆಯ ಮೇಲಿದ್ದ ಹಾವಿನ ಮೇಲೆ ದಾಳಿ ಮಾಡಲು ನೀರಿನಿಂದ ಮೇಲಕ್ಕೆ ಜಿಗಿಯುತ್ತದೆ. ಆದರೆ ನಂತರ ಏನಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಏಕೆಂದರೆ ಮುಂದಿನ ದೃಶ್ಯವು ಬಹಳ ಆಶ್ಚರ್ಯಕರವಾಗಿದೆ.

@TheFigen_ ಟ್ವಿಟರ್ ಖಾತೆಯಲ್ಲಿ ಈ ಅಚ್ಚರಿಯ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಮೀನು ಹಾವನ್ನು ಬೇಟೆಯಾಡುತ್ತಿರುವುದನ್ನು ಕಾಣಬಹುದು. ಸಾಮಾನ್ಯವಾಗಿ ಹಾವುಗಳು ಮೀನುಗಳನ್ನು ಬೇಟೆಯಾಡುತ್ತವೆ, ಆದರೆ ಈ ವೀಡಿಯೊದಲ್ಲಿ ಇದಕ್ಕೆ ವಿರುದ್ಧವಾಗಿ ಕಂಡುಬರುತ್ತದೆ. ವೈರಲ್ ವೀಡಿಯೊದಲ್ಲಿ ಕೊಳವೊಂದು ಗೋಚರಿಸುತ್ತದೆ. ಅದರ ಮೇಲೆ ಮರದ ಟೊಂಗೆ ನೀರಿನ ಕಡೆಗೆ ನೇತಾಡುತ್ತಿದೆ. ಟೊಂಗೆಯನ್ನು ತೆಳ್ಳಗಿನ ಹಾವು ಸುತ್ತಿಕೊಂಡಿದೆ. ಅದು ನೀರಿನ ಕಡೆ ನೋಡುತ್ತಿರುವಂತೆ ಭಾಸವಾಗುತ್ತದೆ. ಆದರೆ ನೀರಿನೊಳಗಿದ್ದ ಮೀನು ಆ ಹಾವನ್ನು ತನ್ನ ಆಹಾರವೆಂದು ಪರಿಗಣಿಸುತ್ತದೆ. ನಂತರ ಅದು ನೀರಿನಿಂದ ಹೊರಬಂದು ಮೇಲಕ್ಕೆ ಜಿಗಿದು ಹಾವನ್ನು ಕಚ್ಚಿ ಹಿಡಿಯುತ್ತದೆ.

ಆದರೆ ಹಾವು ಕೂಡ ಆ ಸುಲಭದಲ್ಲಿ ಸೋಲುವುದಿಲ್ಲ. ಹಾವು ಮರದ ಸುತ್ತಲೂ ತನ್ನನ್ನು ಸುತ್ತಿಕೊಳ್ಳುತ್ತದೆ. ಇದರಿಂದಾಗಿ ಮೀನಿಗೆ ಅದನ್ನು ನೀರಿಗೆ ಎಳೆದೊಯ್ಯಲು ಸಾಧ್ಯವಾಗುವುದಿಲ್ಲ. ಅದೇ ಸಮಯದಲ್ಲಿ, ಮತ್ತೊಂದು ಮೀನು ನೀರಿನಿಂದ ಹೊರಬರುತ್ತದೆ ಮತ್ತು ಮೊದಲನೆಯ ಮೀನನ್ನು ಕೆಳಕ್ಕೆ ಎಳೆಯುತ್ತದೆ. ಇದನ್ನು ನೋಡಿದರೆ ಮತ್ತೊಂದು ಮೀನು ಹಾವಿನ ಮೇಲೆ ದಾಳಿ ಮಾಡಿದ್ದ ಮೀನಿನ ರಕ್ಷಣೆಗೆ ಬಂದಂತೆ ಭಾಸವಾಗುತ್ತದೆ. ಈ ಮೀನು ಹಾವನ್ನು ಹಿಡಿದ ಮೀನಿಗೆ ಮುತ್ತಿಕ್ಕಿ ಏನೋ ಸಂದೇಶ ನೀಡುವಂತೆ ತೋರುತ್ತದೆ. ಆಗ ತಕ್ಷಣವೇ ಹಾವನ್ನು ಕಚ್ಚಿ ಹಿಡಿದಿದ್ದ ಮೀನು ಹಾವನ್ನು ಬಿಟ್ಟು ನೀರಿಗೆ ಧುಮುಕುತ್ತದೆ.
ಈ ವೀಡಿಯೊ 1 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಹಲವರು ಈ ವಿಡಿಯೋವನ್ನು ನಕಲಿ ಎಂದೂ ಕರೆಯುತ್ತಿದ್ದಾರೆ.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement