ಇನ್‌ಸ್ಟಾಗ್ರಾಂ ಪ್ರಿಯತಮನ ಜೊತೆ ಮದುವೆಗೆ ಅಡ್ಡಿ: ಮಗುವನ್ನೇ ಕತ್ತು ಹಿಸುಕಿ ಸಾಯಿಸಿದ ತಾಯಿ…!

ನವದೆಹಲಿ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಮಹಿಳೆಯೊಬ್ಬಳು ತನ್ನ ಐದು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಆಸ್ಪತ್ರೆಗೆ ಮಗುವನ್ನು ಕರೆತರುವಷ್ಟರಲ್ಲಿಯೇ ಅದು ಮೃತಪಟ್ಟಿರುವ ಬಗ್ಗೆ ದೀಪಚಂದ್ ಬಂಧು ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ಲಭಿಸಿದ ನಂತರ ಈ ಪ್ರಕಣ ಬೆಳಕಿಗೆ ಬಂದಿದೆ.
ಮಗುವಿನ ಕುತ್ತಿಗೆ ಬಳಿ ಕತ್ತು ಹಿಸುಕಿದ ಗುರುತುಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ತಕ್ಷಣವೇ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಾಯಿ ಸೇರಿದಂತೆ ಮಗುವಿನ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿರಂತರ ವಿಚಾರಣೆ ವೇಳೆ ತಾಯಿ ತನ್ನ ಮಗಳನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಬಹಿರಂಗಪಡಿಸಿದ್ದಾಳೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಚಾರಣೆಯ ಸಮಯದಲ್ಲಿ, ಮಹಿಳೆ ತನ್ನ ಮೊದಲ ಪತಿ ತನ್ನನ್ನು ತೊರೆದಿದ್ದಾನೆ ಎಂದು ಹೇಳಿದ್ದಾಳೆ. ನಂತರ ಅವಳು ಇನ್ಸ್ಟಾಗ್ರಾಮ್ ಮೂಲಕ ರಾಹುಲ್ ಎಂಬ ವ್ಯಕ್ತಿ ಜೊತೆ ಸಂಪರ್ಕಕ್ಕೆ ಬಂದಿದ್ದಾಳೆ. ನಂತರ ಆತನನ್ನು ಮದುವೆಯಾಗುವ ಉದ್ದೇಶದಿಂದ ದೆಹಲಿಗೆ ಬಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ರಾಹುಲ್ ಮತ್ತು ಆತನ ಕುಟುಂಬದವರು ಮಗುವನ್ನು ಸ್ವೀಕರಿಸಲಿಲ್ಲ ಮತ್ತು ರಾಹುಲ್‌ ಮದುವೆಯಾಗಲು ನಿರಾಕರಿಸಿದ್ದಾನೆ. ಮಗುವಿನ ಕಾರಣಕ್ಕೆ ತನ್ನ ಮದುವೆ ನಡೆಯಲಿಲ್ಲ ಎಂದು ಹತಾಶೆಯಿಂದ ತಾಯಿ ತನ್ನ ಮಗುವಿನ ಕತ್ತು ಹಿಸುಕಿ ಕೊಂದಿದ್ದಾಳೆ. ಮಹಿಳೆ ದೆಹಲಿಗೆ ಬರುವ ಮೊದಲು ಹಿಮಾಚಲ ಪ್ರದೇಶದಲ್ಲಿ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಬೆಳಗಾವಿ | ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಸುಟ್ಟು ಹಾಕಿದ ಕಿಡಿಗೇಡಿಗಳು ; ಪ್ರತಿಭಟನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement