ಚಾಂಪಿಯನ್ಸ್ ಟ್ರೋಫಿ | “ಹೈಬ್ರಿಡ್ ಮಾದರಿ ಒಪ್ಪಿಕೊಳ್ಳಿ ಅಥವಾ…” : ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಂತಿಮ ಅವಕಾಶ ನೀಡಿದ ಐಸಿಸಿ…!

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಪಾಕಿಸ್ತಾನಕ್ಕೆ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿಯನ್ನು ನಡೆಸಲು ಗಡುವು ನೀಡಿದೆ ಎಂದು ವರದಿಯಾಗಿದೆ. ಭಾರತದ ಆಟಗಳನ್ನು ಬೇರೆಡೆ ನಡೆಸಲಾಗುವುದು ಅಥವಾ ಇದಕ್ಕೆ ಒಪ್ಪದಿದ್ದರೆ ನೀವು ಮುಂಬರುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವಿರಿ ಎಂದು ಐಸಿಸಿ ಎಚ್ಚರಿಸಿದೆ ಎಂದು ವರದಿ ಹೇಳಿದೆ. ಭಾರತದ ತಂಡವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಬಿಸಿಸಿಐ (BCCI) ಸ್ಪಷ್ಟವಾಗಿ ಹೇಳಿದೆ.
ಹೈಬ್ರಿಡ್‌ ಮಾದರಿ ಪಂದ್ಯಗಳಿಗೆ ಒಪ್ಪದೆ ಪಾಕಿಸ್ತಾನದಲ್ಲಿ ಮಾತ್ರ ಚಾಂಪಿಯನ್ಸ್‌ ಟ್ರೋಫಿ ಪಂದ್ಯಗಳನ್ನು ಆಯೋಜಿಸುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂಟಿಕೊಂಡಿದ್ದರಿಂದ ಐಸಿಸಿಯ ಶುಕ್ರವಾರದ ತುರ್ತು ಸಭೆ ಮುಂದಕ್ಕೆ ಹೋಗಿದೆ. ಅದು ಶನಿವಾರ ನಡೆಯಲಿದ್ದು, ಅಲ್ಲಿ ಮತ್ತಷ್ಟು ಚರ್ಚೆಯಾಗಲಿದೆ.

ತುರ್ತು ಸಭೆಯು ಮುಂದಿನ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ಕಾರ್ಯಕ್ರಮದ ವೇಳಾಪಟ್ಟಿಯನ್ನು ಹೊರತರಲು ಉದ್ದೇಶಿಸಿತ್ತು. ಆದರೆ ಭದ್ರತಾ ಕಾರಣಗಳಿಂದಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ದೃಢವಾಗಿ ನಿರಾಕರಿಸಿದರೂ ಪಾಕಿಸ್ತಾನವು ‘ಹೈಬ್ರಿಡ್’ ಮಾದರಿ ನಡೆಸಲು ಪಾಕಿಸ್ತಾನ ಒಪ್ಪದ ಕಾರಣ ಈ ಬಗ್ಗೆ ಒಮ್ಮತ ಸಾಧಿಸಲು ಸಾಧ್ಯವಾಗಲಿಲ್ಲ.
ಪಾಕಿಸ್ತಾನದ ಸ್ಥಿತಿಯ ಬಗ್ಗೆ ಐಸಿಸಿ ಸಹಾನುಭೂತಿ ಹೊಂದಿದ್ದರೂ ಭಾರತವು ಪಾಕಿಸ್ತಾನದ ಹೊರಗೆ ಬಹುಶಃ ಯುಎಇಯಲ್ಲಿ ತಮ್ಮ ಪಂದ್ಯಗಳನ್ನು ಆಡುವ ಹೈಬ್ರಿಡ್ ಮಾದರಿ ಬಗ್ಗೆ ಒಪ್ಪಿಕೊಳ್ಳುವಂತೆ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಸೂಚಿಸಲಾಗಿದೆ ಎಂದು ವರದಿಗಳು ಸೂಚಿಸುತ್ತವೆ,

ಪ್ರಮುಖ ಸುದ್ದಿ :-   ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಆಸ್ಪತ್ರೆಗೆ ದಾಖಲು

ಮೊಹ್ಸಿನ್ ನಖ್ವಿ ಅವರು ‘ಹೈಬ್ರಿಡ್ ಮಾಡೆಲ್’ಗೆ ಒಪ್ಪಿದರೆ ಮಾತ್ರ ಶನಿವಾರದ ಐಸಿಸಿ ಸಭೆ ನಡೆಯುತ್ತದೆ” ಎಂದು ಐಸಿಸಿ ಮಂಡಳಿಯ ಮೂಲಗಳು ತಿಳಿಸಿವೆ.
“ಇದಕ್ಕೆ ಒಪ್ಪದಿದ್ದರೆ, ಐಸಿಸಿ ಮಂಡಳಿಯು ಪಂದ್ಯಾವಳಿಯನ್ನು ಸಂಪೂರ್ಣವಾಗಿ ಬೇರೆ ದೇಶಕ್ಕೆ ಬದಲಾಯಿಸಬೇಕಾಗಬಹುದು. ಹಾಗೂ ಅದು ಪಾಕಿಸ್ತಾನವಿಲ್ಲದೆಯೂ ನಡೆಯಲಿದೆ” ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಭಾರತ ತಂಡವು ಪಂದ್ಯಾವಳಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಬಿಸಿಸಿಐ ನಿರ್ಧಾರವನ್ನು ಪುನರುಚ್ಚರಿಸಿದೆ.
”ಬಿಸಿಸಿಐ ಹೇಳಿಕೆ ನೀಡಿದೆ. ಅಲ್ಲಿ ಭದ್ರತಾ ಕಾಳಜಿಗಳಿವೆ ಮತ್ತು ತಂಡವು ಅಲ್ಲಿಗೆ ಹೋಗುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement