ವೀಡಿಯೊ..| ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅತ್ಯದ್ಭುತ ಕ್ಯಾಚ್‌ ಹಿಡಿದ ಗ್ಲೆನ್ ಫಿಲಿಪ್ಸ್ ; ‘ಕ್ರಿಕೆಟ್‌ ಸೂಪರ್‌ಮ್ಯಾನ್’ ಎಂದ ಅಭಿಮಾನಿಗಳು..!

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರ ಗ್ಲೆನ್ ಫಿಲಿಪ್ಸ್ ಹಿಡಿದ ಕ್ಯಾಚ್ ಎಲ್ಲರನ್ನೂ ಬೆರಗಾಗಿಸಿದೆ. ಕ್ರೈಸ್ಟ್ ಚರ್ಸ್​​ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್​​ನಲ್ಲಿ 348 ರನ್ ಕಲೆಹಾಕಿದೆ.
ನಂತರ ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಒಲೀ ಪೋಪ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. 77 ರನ್ ಬಾರಿಸಿದ್ದ ಪೋಪ್ ಅವರು ಗ್ಲೆನ್ ಫಿಲಿಪ್ಸ್ ಅತ್ಯದ್ಭುತ ಕ್ಯಾಚ್‌ ಹಿಡಿದ ನಂತರ ಪೆವಿಲಿಯನ್‌ಗೆ ಮರಳಬೇಕಾಯಿತು.

ಟಿಮ್ ಸೌಥಿ ಎಸೆದ 53ನೇ ಓವರ್​​ನ 2ನೇ ಎಸೆತದಲ್ಲಿ ಒಲೀ ಪೋಪ್ ಸ್ಕ್ವೇರ್‌ ಕಟ್ ಶಾಟ್ ಹೊಡೆದಿದ್ದರು. ಆದರೆ ಸ್ಲಿಪ್-ಗಲ್ಲಿ ನಡುವೆ ಫೀಲ್ಡಿಂಗ್​​ನಲ್ಲಿದ್ದ ಗ್ಲೆನ್ ಫಿಲಿಪ್ಸ್ ಜಿಗಿದು ಅತ್ಯದ್ಭುತವಾಗಿ ಚೆಂಡನ್ನು ಹಿಡಿದರು. ತನ್ನ ಬಲಕ್ಕೆ ಡೈವ್‌ ಹೊಡೆದ ಫಿಲಿಪ್ಸ್ ಒಂದು ಸೆಕೆಂಡಿನಲ್ಲೇ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದರು. ಹಾಗೂ ಪೋಪ್ ಮತ್ತು ಹ್ಯಾರಿ ಬ್ರೂಕ್ಸ್ ನಡುವಿನ 151 ರನ್ ಜೊತೆಯಾಟವನ್ನು ಕೊನೆಗೊಳಿಸಿದರು. ಈ ಅತ್ಯದ್ಭುತ ಕ್ಯಾಚ್ ನೋಡಿ ಪ್ರೇಕ್ಷಕರಷ್ಟೇ ಅಲ್ಲ, ಸಹ ಆಟಗಾರರು ನಿಬ್ಬೆರಗಾಗಿದ್ದಾರೆ.

ಫಿಲಿಪ್ಸ್ ಅವರ ಅದ್ಭುತ ಕ್ಯಾಚ್ ನೋಡಿ ಕ್ರಿಕೆಟ್‌ ಅಭಿಮಾನಿಗಳು ಈಗ ಅವರನ್ನು “ಕ್ರಿಕೆಟ್‌ನ ಸೂಪರ್‌ಮ್ಯಾನ್” ಎಂದು ಹೇಳುತ್ತಿದ್ದಾರೆ. ಈ ಅತ್ಯುತ್ತಮ ಕ್ಯಾಚ್ ಅನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದ ಅದ್ಭುತ ಕ್ಯಾಚ್​​ಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಪ್ರಥಮ ಇನಿಂಗ್ಸ್​​ನಲ್ಲಿ 348 ರನ್ ಕಲೆಹಾಕಿದರೆ, ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​​ನಲ್ಲಿ 499 ರನ್ ಪೇರಿಸಿದೆ. ದ್ವಿತೀಯ ಇನಿಂಗ್ಸ್ ಆಡುತ್ತಿರುವ ನ್ಯೂಝಿಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 155 ರನ್​ಗಳಿಸಿದೆ.

ಪ್ರಮುಖ ಸುದ್ದಿ :-   ಯುದ್ಧ, ವಿನಾಶ, ವೈದ್ಯಕೀಯ ಅನ್ವೇಷಣೆ, ಏಲಿಯನ್ ಜೊತೆ ಮುಖಾಮುಖಿ.... ; 2025ಕ್ಕೆ ಬಾಬಾ ವಂಗಾ ಭಯಾನಕ ಭವಿಷ್ಯವಾಣಿಗಳು...

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement