ವೀಡಿಯೊ..| ಮಂಡ್ಯ ; ಅಪರೂಪದ ವಿದ್ಯಮಾನ : ಮೂರು ಕರುಗಳಿಗೆ ಜನ್ಮ ನೀಡಿದ ಹಸು…!

ಮಂಡ್ಯ: ಸಾಮಾನ್ಯವಾಗಿ ಹಸುಗಳು ಒಂದು ಸಲಕ್ಕೆ ಒಂದೇ ಕರುವಿಗೆ ಜನ್ಮವನ್ನು ನೀಡುತ್ತವೆ. ಆದರೆ ಅಪರೂಪದ ವಿದ್ಯಮಾನದಲ್ಲಿ ಕೆಲವು ಕಡೆಗಳಲ್ಲಿ ಅವಳಿ ಕರುಗಳಿಗೆ ಜನ್ಮ ನೀಡಿದ ಉದಾಹರಣೆಗಳೂ ಇವೆ. ಆದರೆ ಹಸು ಮೂರು ಕರುಗಳಿಗೆ ಜನ್ಮ ನೀಡಿದ ವಿದ್ಯಮಾನ ಅಪರದಲ್ಲಿ ಅಪರೂಪದ ವಿದ್ಯಮಾನ ಎಂದೇ ಹೇಳಬಹುದು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ನಿವಾಸಿ ಕಂಠಿ ಶಿವಣ್ಣ ಎಂಬುವರಿಗೆ ಸೇರಿದ ಹಸುವೊಂದು ಒಮ್ಮೆಗೆ ಮೂರು ಕರುಗಳಿಗೆ ಜನ್ಮ ನೀಡಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದು ಹೆಚ್.‌ಎಫ್‌ ತಳಿಯ ಹಸುವಾಗಿದ್ದು ತ್ರಿವಳಿ ಹೆಣ್ಣು ಕರುಗಳಿಗೆ ಜನ್ಮವನ್ನು ನೀಡಿದ್ದು, ಎಲ್ಲವೂ ಆರೋಗ್ಯವಾಗಿವೆ ಎಂದು ಹೇಳಲಾಗಿದೆ.

https://twitter.com/Parisara360/status/1862318948672577633?ref_src=twsrc%5Etfw%7Ctwcamp%5Etweetembed%7Ctwterm%5E1862318948672577633%7Ctwgr%5Ef432d262f636a268a173ab65efb61bb3efb85e3f%7Ctwcon%5Es1_&ref_url=https%3A%2F%2Fnudikarnataka.com%2Fcow-gives-birth-to-triplets%2F

ಈ ಕುರಿತ ವೀಡಿಯೊವನ್ನು ಪರಿಸರ ಪರಿವಾರ (Parisara360) ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಅದು ಭಾರಿ ವೈರಲ್‌ ಆಗಿದೆ.
ಈ ಹಸು ಐದನೇ ಬಾರಿಗೆ ಕರುವನ್ನು ಹಾಕಿದ್ದು, ಆದರೆ ತ್ರಿವಳಿ ಕರುಗಳಿಗೆ ಜನ್ಮ ನೀಡಿರುವುದು ಇದೇ ಮೊದಲು. ಎಲ್ಲವೂ ಹೆಣ್ಣು ಕರುಗಳಾಗಿವೆ. ಈ ಸುದ್ದಿಯು ಡಿಂಕಾ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಜನಸಮೂಹವನ್ನು ಸೆಳೆಯಿತು, ಎಲ್ಲರೂ ಹಸು ಮತ್ತು ಅದರ ಮೂರು ನವಜಾತ ಕರುಗಳ ಬಗ್ಗೆ ಕುತೂಹಲದಿಂದ ನೋಡಲು ಬರುತ್ತಿದ್ದಾರೆ. ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಕೂಡ ಗೋಶಾಲೆಗೆ ಭೇಟಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಡಿಸೆಂಬರ್ 17 ರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ : ಮುನ್ಸೂಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement