ಕಂಪ್ಯೂಟರ್ ಆಪರೇಟರ್ ಕೆಲಸದಿಂದ ತಪ್ಪಿಸಿಕೊಳ್ಳಲು ತನ್ನ ಬೆರಳುಗಳನ್ನು ತಾನೇ ಕತ್ತರಿಸಿಕೊಂಡ ವ್ಯಕ್ತಿ…!

ಸೂರತ್ : ತನ್ನ ಸಂಬಂಧಿಕರ ವಜ್ರ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುವುದಕ್ಕೆ ಅನರ್ಹಗೊಳ್ಳಳು ವ್ಯಕ್ತಿಯೊಬ್ಬ ತನ್ನ ಎಡಗೈಯ ನಾಲ್ಕು ಬೆರಳುಗಳನ್ನು ಹರಿತವಾದ ಚಾಕುವಿನಿಂದ ಕತ್ತರಿಸಿಕೊಂಡಿರುವ ವಿಲಕ್ಷಣ ಘಟನೆ ಗುಜರಾತಿನ ಸೂರತ್ ನಗರದಲ್ಲಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ಮಯೂರ ತಾರಾಪರಾ (32) ಈ ಹಿಂದೆ ರಸ್ತೆಯ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ನಂತರ ತನ್ನ ಬೆರಳುಗಳನ್ನು ಯಾರೀ ಕತ್ತರಿಸಿಕೊಂಡು ಹೋದ ಬಗ್ಗೆ ಪೊಲೀಸರಿಗೆ ಹೇಳಿದ್ದ. ಆದರೂ ಘಟನೆಗಳ ತನಿಖೆಯಿಂದ ಕೈಬೆರಳುಗಳನ್ನು ಆತನೇ ಕತ್ತರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
ಸೂರತ್ ಕ್ರೈಂ ಬ್ರಾಂಚ್ ಹೇಳಿಕೆಯಲ್ಲಿ, ತಾರಾಪರಾ ಅವರು ವರಚಾ ಮಿನಿ ಬಜಾರ್‌ನಲ್ಲಿರುವ ತಮ್ಮ ಸಂಸ್ಥೆ ಅನಭ ಜೆಮ್ಸ್‌ನಲ್ಲಿ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ತಮ್ಮ ಸಂಬಂಧಿಕರಿಗೆ ಹೇಳುವ ಧೈರ್ಯವಿಲ್ಲದ ಕಾರಣ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಹೇಳಿದರು.

ಆತ ಈ ಸಂಸ್ಥೆಯಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಕೈಬೆರಳುಗಳಿಗೆ ಹಾನಿಯಾದರೆ ಆತನಿಗೆ ಆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆತನನ್ನು ಕೆಲಸಕ್ಕೆ ಅನರ್ಹಗೊಳಿಸಲಾಗಿತ್ತದೆ ಎಂದು ಯೋಚಿಸಿ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಮುನ್ನ ತಾರಾಪರಾ ಅವರು ಡಿ.8ರಂದು ದ್ವಿಚಕ್ರವಾಹನದಲ್ಲಿ ಸ್ನೇಹಿತರೊಬ್ಬರ ಮನೆಗೆ ತೆರಳುತ್ತಿದ್ದಾಗ ಅಮ್ರೋಲಿಯ ವೇದಾಂತ ವೃತ್ತದ ಬಳಿ ರಿಂಗ್ ರೋಡ್‌ನಲ್ಲಿ ತಲೆ ಸುತ್ತು ಬಂದು ಬಿದ್ದಿದ್ದಾಗಿ ಪೊಲೀಸರಿಗೆ ತಿಳಿಸಿದ್ದ. ತನಗೆ 10 ನಿಮಿಷದ ನಂತರ ಪ್ರಜ್ಞೆ ಬಂದಾಗ ತನ್ನ ಎಡಗೈಯ ನಾಲ್ಕು ಬೆರಳುಗಳು ತುಂಡಾಗಿದ್ದವು ಎಂದು ತಾರಾಪರಾ ಪೊಲೀಸರಿಗೆ ತಿಳಿಸಿದ್ದ. ಮಾಟಮಂತ್ರಕ್ಕಾಗಿ ಬೆರಳುಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿರಬಹುದು ಎಂದು ಪೊಲೀಸರು ಆಗ ಶಂಕಿಸಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

ಈ ಕುರಿತು ಅಮ್ರೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಗರದ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತಾಂತ್ರಿಕ ಕಣ್ಗಾವಲು ಹಾಗೂ ಮಾನವನ ಬುದ್ಧಿಮತ್ತೆಯನ್ನು ಬಳಕೆ ಮಾಡಿದ ನಂತರ ತಾರಾಪರಾ ಈ ಕೃತ್ಯವನ್ನು ತಾನೇ ಮಾಡಿಕೊಂಡಿರುವುದು ಗೊತ್ತಾಗಿದೆ.
ಸಿಂಗನ್‌ಪೋರ್‌ನ ಚಾರ್ ರಸ್ತಾ ಬಳಿಯ ಅಂಗಡಿಯೊಂದರಿಂದ ಹರಿತವಾದ ಚಾಕು ಖರೀದಿಸಿರುವುದಾಗಿ ತಾರಾಪರಾ ತಪ್ಪೊಪ್ಪಿಕೊಂಡಿದ್ದಾನೆ. ನಾಲ್ಕು ದಿನಗಳ ನಂತರ ಭಾನುವಾರ ರಾತ್ರಿ ಅಮ್ರೋಲಿ ರಿಂಗ್ ರೋಡ್‌ಗೆ ಹೋಗಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ರಾತ್ರಿ 10 ಗಂಟೆ ಸುಮಾರಿಗೆ ಚಾಕುವಿನಿಂದ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ. ಮತ್ತು ರಕ್ತದ ಹರಿಯುವುದನ್ನು ತಡೆಯಲು ಮೊಣಕೈ ಬಳಿ ಹಗ್ಗವನ್ನು ಬಿಗಿಯಾಗಿ ಕಟ್ಟಿದ್ದಾನೆ. ನಂತರ ಚಾಕು ಮತ್ತು ಬೆರಳುಗಳನ್ನು ಚೀಲದಲ್ಲಿ ಹಾಕಿ ದೂರ ಎಸೆದಿದ್ದಾನೆ ದೂರ ಎಂದು ಅಧಿಕಾರಿ ಹೇಳಿದ್ದಾರೆ.
ಆತನ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು, ಆತ ಎಸೆದ ಜಾಗದಲ್ಲಿ ಒಂದು ಚೀಲದಲ್ಲಿದ್ದ ಮೂರು ಬೆರಳುಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೂಮತ್ತೊಂದು ಚೀಲದಲ್ಲಿ ಚಾಕು ಪತ್ತೆಯಾಗಿದೆ. ಅಮ್ರೋಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement