ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಅಪಹರಿಸಿ ‘ಪಕಡುವಾ ವಿವಾಹ’ ಎಂಬ ಪದ್ಧತಿಯಂತೆ ಗನ್ ತೋರಿಸಿ ಯುವತಿಯೊಬ್ಬಳ ಜೊತೆ ಬಲವಂತವಾಗಿ ಮದುವೆ ಮಾಡಿದ ಘಟನೆ ಬಿಹಾರದ ಬೇಗುಸರಾಯ್ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಗಂಡಸರ ಗುಂಪೊಂದು ತನ್ನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ಶಿಕ್ಷಕ ಅವ್ನಿಶ್ ಆರೋಪಿಸಿದ್ದಾರೆ.
ಆದರೆ ವಧು ಗುಂಜನ್ ಎಂಬವಳು ನಾವಿಬ್ಬರು ನಾಲ್ಕು ವರ್ಷಗಳಿಂದ ಪ್ರೇಮ ಸಂಬಂಧ ಹೊದಿದ್ದು ಮತ್ತು ತನ್ನನ್ನು ಮದುವೆಯಾಗಲು ಅವ್ನಿಶ್ ನಿರಾಕರಿಸಿದ್ದರಿಂದ ತನ್ನ ಕುಟುಂಬವು ಮಧ್ಯಪ್ರವೇಶಿಸಿ ಮದುವೆ ಮಾಡಿಸಿದೆ ಎಂದು ಹೇಳಿಕೊಂಡಿದ್ದಾಳೆ.
ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ (ಬಿಪಿಎಸ್‌ಸಿ) ಶಿಕ್ಷಕರ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅವ್ನಿಶ್ ಅವರು ಸರ್ಕಾರಿ ಶಾಲೆ ಶಿಕ್ಷಕರಾಗಿ ನೇಮಕವಾಗಿದ್ದರು. ತಾನು ಕೆಲಸಕ್ಕೆ ಹೋಗುತ್ತಿದ್ದಾಗ ಎರಡು ಎಸ್‌ಯುವಿಗಳಲ್ಲಿ ಬಂದಿದ್ದ ವ್ಯಕ್ತಿಗಳ ಗುಂಪು ತನ್ನನ್ನು ಅಡ್ಡಗಟ್ಟಿ ಅಪಹರಿಸಿದೆ ಎಂದು ಆರೋಪಿಸಿದ್ದಾರೆ. ತನ್ನನ್ನು ದೇವಸ್ಥಾನಕ್ಕೆ ಕರೆದೊಯ್ದು ಬಲವಂತದಲ್ಲಿ ಮದುವೆಯ ವಿಧಿವಿಧಾನಗಳನ್ನು ಮಾಡಿಸಲಾಯಿತು. ಮಹಿಳೆಯ ಹಣೆಗೆ ಸಿಂಧೂರವನ್ನು ಹಚ್ಚಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಬಲವಂತದ ಮದುವೆಯ ವೀಡಿಯೋ ವೈರಲ್ ಆದ ನಂತರ ಈ ಘಟನೆ ವ್ಯಾಪಕ ಗಮನ ಸೆಳೆಯಿತು, ವಿರೋಧದ ಹೊರತಾಗಿಯೂ ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಅವ್ನಿಶ್ ಅವರಿಗೆ ಬಲವಂತ ಮಾಡಲಾಯಿತು. ಈ ವೇಳೆ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವ್ನಿಶ್ ಆರೋಪಿಸಿದ್ದು, ಯಾವುದೇ ಕಾರಣಕ್ಕೂ ಮದುವೆಯನ್ನು ತಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ವಧು ಗುಂಜನ್ ಬೇರೆಯದನ್ನೇ ಹೇಳಿದ್ದಾಳೆ. ತಾನು ಮತ್ತು ಅವ್ನಿಶ್ ನಾಲ್ಕು ವರ್ಷಗಳ ಕಾಲ ಪ್ರೇಮ ಸಂಬಂಧದಲ್ಲಿದ್ದೆವು ಎಂದು ಅವಳು ಹೇಳಿಕೊಂಡಿದ್ದಾಳೆ. ತಾನು ಅಧ್ಯಯನವನ್ನು ಮುಂದುವರಿಸಲು ರಾಜೌರಾದಲ್ಲಿ ತಂಗಿದ್ದಾಗ ಇದು ಪ್ರಾರಂಭವಾಯಿತು. ಅವ್ನಿಶ್ ತನ್ನನ್ನು ಕತಿಹಾರ್‌ಗೆ ಆಹ್ವಾನಿಸಿದ್ದ. ಅಲ್ಲಿ ಅವನು ಆರಂಭದಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದ ಮತ್ತು ಅಲ್ಲಿ ನಾವಿಬ್ಬರು ಆಗಾಗ್ಗೆ ಭೇಟಿಯಾಗುತ್ತಿದ್ದೆವು. ನಮ್ಮಿಬ್ಬರ ಪ್ರೇಮ ಸಂಬಂಧದ ಹೊರತಾಗಿಯೂ ಅವ್ನಿಶ್ ನನ್ನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ನನ್ನ ಕುಟುಂಬವು ಮಧ್ಯಪ್ರವೇಶಿಸಿ ಮದುವೆಯನ್ನು ಮಾಡಿಸಿತು ಎಂದು ಗುಂಜನ್ ಹೇಳಿದ್ದಾಳೆ.
ಗುಂಜನ್ ಅವರ ಸಹೋದರಿ ಮತ್ತು ಅವನೀಶ್ ಅಕ್ಕಪಕ್ಕದ ನಿವಾಸಿಗಳು ಎಂದು ಹೇಳಲಾಗಿದೆ. ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ (ಬಿಪಿಎಸ್‌ಸಿ ಟಿಆರ್‌ಇ-2) ಮೂಲಕ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಳ್ಳುವ ಮೊದಲು ಆತ ತನ್ನ ಅಕ್ಕನ ಮನೆಯಲ್ಲಿ ಟ್ಯುಶನ್ ನೀಡುತ್ತಿದ್ದ, ಆಗ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಮತ್ತು ಕತಿಹಾರ್‌ನಲ್ಲಿ ಪೋಸ್ಟ್ ಮಾಡಿದ ನಂತರ ಅವ್ನಿಶ್ ತನ್ನನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ ಎಂದು ಗುಂಜನ್ ಪೊಲೀಸರಿಗೆ ತಿಳಿಸಿದ್ದಾಳೆ.
ಬಲವಂತದ ಮದುವೆಯ ನಂತರ, ಗುಂಜನ್ ಅವ್ನಿಶ್ ಅವರ ಮನೆಗೆ ಹೋಗಿದ್ದಾಳೆ, ಆದರೆ ಅವ್ನಿಶ್ ಕುಟುಂಬವು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿತು ಮತ್ತು ತನ್ನನ್ನು ಸ್ವೀಕರಿಸಲು ನಿರಾಕರಿಸಿತು ಆಕೆ ಪೊಲೀಸ್ ದೂರು ದಾಖಲಿಸಿದ್ದಾಳೆ.
ದಂಪತಿ ಬೇಗುಸರಾಯ್ ಜಿಲ್ಲೆಯ ಅವನೀಶ್ ಅವರ ಸ್ಥಳೀಯ ಗ್ರಾಮಕ್ಕೆ ತೆರಳುವಾಗ ಬೇಗುಸರಾಯ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಜೌರಾ ಸಿಕಂದರ್‌ಪುರ ಎಂಬ ಗ್ರಾಮಕ್ಕೆ ಹೋಗುವ ಮೊದಲು ವಾಹನ ನಿಲ್ಲಿಸಿದಾಗ ಅವ್ನಿಶ್ ಪರಾರಿಯಾಗಿದ್ದಾರೆ. ನಂತರ ಯುವತಿ ಮತ್ತು ಆಕೆಯ ಸಂಬಂಧಿಕರು ಅವ್ನಿಶ್ ಅವರ ಮನೆಗೆ ತಲುಪಿದರು, ಅಲ್ಲಿ ಕುಟುಂಬ ಸದಸ್ಯರು ಅವಳನ್ನು ಸೊಸೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದರು ಎಂದು ಯುವತಿ ಹೇಳಿದ್ದಾಳೆ.
ಆದರೆ, ಅವ್ನಿಶ್ ಅವರು ತನಗೆ ಗುಂಜನ್ ಜೊತೆ ಯಾವುದೇ ಪ್ರೇಮ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ನಮ್ಮ ಮಾತುಕತೆಯು ಗುಂಜನ್ ಅವರ ಸಹೋದರಿಯ ಮನೆಯಲ್ಲಿ ಖಾಸಗಿ ಬೋಧಕನಾಗಿದ್ದ ಸಮಯಕ್ಕೆ ಸೀಮಿತವಾಗಿತ್ತು ಎಂದು ಹೇಳಿದ್ದಾರೆ. ತಾನು ಆಕೆಯ ನಂಬರ್ ಬ್ಲಾಕ್ ಮಾಡಿದ ನಂತರವೂ ಗುಂಜನ್ ಪದೇ ಪದೇ ಫೋನ್ ಕರೆಗಳ ಮೂಲಕ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಿದ್ದಾರೆ.
ತನ್ನ ಅಪಹರಣ ಮತ್ತು ನಂತರದ ಬಲವಂತದ ಮದುವೆಯ ಬಗ್ಗೆ ಕತಿಹಾರ್ ಪೊಲೀಸ್ ವರಿಷ್ಠಾಧಿಕಾರಿಗೆ ಈಗಾಗಲೇ ತಿಳಿಸಿದ್ದೇನೆ ಎಂದು ಅವ್ನಿಶ್ ನಂತರ ಮಾಧ್ಯಮಗಳಿಗೆ ತಿಳಿಸಿದರು. “ನನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯನ್ನು ನಡೆಸಲಾಯಿತು ಮತ್ತು ಬೆದರಿಕೆ ಹಾಕಿ ಮದುವೆ ಆಚರಣೆಗಳನ್ನು ನಡೆಸಲಾಯಿತು” ಎಂದು ಅವರು ಹೇಳಿದರು. ಮದುವೆಗಾಗಿ ಅಪಹರಣ ಮತ್ತು ದೈಹಿಕ ಹಲ್ಲೆ ಪ್ರಕರಣವನ್ನು ಕತಿಹಾರ್‌ನಲ್ಲಿ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಳ್ಳುವ ಮೊದಲು ಗುಂಜನ್ ಅವರ ಸಹೋದರಿಯ ಮನೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗ ಆಕೆಯ ಪರಿಚಯವಾಗಿತ್ತು ಎಂದು ಹೇಳಿದ್ದಾರೆ.
ಬಿಪಿಎಸ್‌ಸಿಯಿಂದ ಶಿಕ್ಷಕನಾಗಿ ಆಯ್ಕೆಯಾದ ನಂತರ ಗುಂಜನ್ ಒಂದಲ್ಲ ಒಂದು ನೆಪದಲ್ಲಿ ತನಗೆ ಕರೆ ಮಾಡುತ್ತಿದ್ದಳು ಎಂದು ಆರೋಪಿಸಿದರು. “ನಾನು ಅವಳ ಮೊಬೈಲ್ ಫೋನ್‌ಗಳನ್ನು ಸಹ ಬ್ಲಾಕ್ ಮಾಡಿದೆ. ಆದರೆ ಅವಳು ತನ್ನ ಸಂಖ್ಯೆಗಳನ್ನು ಬದಲಾಯಿಸುವ ಮೂಲಕ ನನಗೆ ಕರೆ ಮಾಡುತ್ತಿದ್ದಳು” ಎಂದು ಅವರು ಹೇಳಿದರು.
‘ಪಕಡುವಾ ವಿವಾಹ’ ಎಂಬುದು ಬಿಹಾರದ ಹಳೆಯ, ವಿಲಕ್ಷಣ ಸಂಪ್ರದಾಯವಾಗಿದ್ದು, ಇದರಲ್ಲಿ ವಧುವಿನ ಕುಟುಂಬವು ಅವಿವಾಹಿತ ವ್ಯಕ್ತಿಯನ್ನು ಅಪಹರಿಸಿ ಬಂದೂಕು ತೋರಿಸಿ ಮದುವೆಯಾಗುವಂತೆ ಒತ್ತಾಯಿಸುತ್ತದೆ. ಶ್ರೀಮಂತ ಕುಟುಂಬಗಳಲ್ಲಿ ವರದಕ್ಷಿಣೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮದುವೆಗಾಗಿ ಅಪಹರಣದ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಹಲವು ಪಟ್ಟು ಹೆಚ್ಚಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ, ಕಳೆದ 30 ವರ್ಷಗಳಲ್ಲಿ 2024ರಲ್ಲಿ ಅತಿ ಹೆಚ್ಚು ‘ಅಪಹರಣ’ ಅಥವಾ ಬಲವಂತದ ಮದುವೆ ಪ್ರಕರಣಗಳು ದಾಖಲಾಗಿವೆ. ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಇದೇ ರೀತಿಯ ಪ್ರಕರಣವೊಂದು ವರದಿಯಾಗಿದ್ದು, ಪತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಶಾಲಾ ಶಿಕ್ಷಕರೊಬ್ಬರನ್ನು ಗನ್‌ಪಾಯಿಂಟ್‌ನಲ್ಲಿ ಅಪಹರಿಸಿ ಮದುವೆಯಾದ ಘಟನೆ ನಡೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ