40 ವರ್ಷದಲ್ಲಿ ಬರೋಬ್ಬರಿ 12 ಸಲ ಡೈವೋರ್ಸ್‌; 12 ಬಾರಿ ಮರುಮದುವೆಯಾದ ಅದೇ ದಂಪತಿ..! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ…

ಈ ದಂಪತಿ 40 ವರ್ಷಗಳಲ್ಲಿ ಬರೋಬ್ಬರಿ 12 ಬಾರಿ ಡಿವೋರ್ಸ್‌ ನೀಡಿ 12 ಸಲ ಮರುಮದುವೆಯಾಗಿದ್ದಾರೆ. ಇದೀಗ ಈ ದಂಪತಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಈ ದಂಪತಿಯ ಡೈವೋರ್ಸ್‌ ಸುದ್ದಿ ಭಾರೀ ವೈರಲ್‌ ಆಗುತ್ತಿದೆ.
ಆಸ್ಟ್ರಿಯನ್ ದಂಪತಿ ಸರ್ಕಾರದಿಂದ ಕೊಡುವ ಪಿಂಚಣಿಯ ಲಾಭ ಪಡೆಯುವ ಸಲುವಾಗಿ 73 ವರ್ಷ ವಯಸ್ಸಿನ ಮಹಿಳೆಯು ಪಿಂಚಣಿ ಪಡೆಯಲು ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗಿದೆ. ] 1981 ರಲ್ಲಿ ತನ್ನ ಮೊದಲ ಗಂಡನ ಮರಣದ ನಂತರ ಈ ವರೆಗೆ ಆಕೆ ವಿಧವಾ ಪಿಂಚಣಿಯ ರೂಪದಲ್ಲಿ ಆಕೆ ಸರ್ಕಾರದಿಂದ ಈವರೆಗೆ $3,42,000 (ಅಂದಾಜು ₹ 29.05 ಕೋಟಿ) ಹಣ ಪಡೆದಿದ್ದಾಳೆ. ಮತ್ತೊಬ್ಬರನ್ನು ಮದುವೆಯಾದ ನಂತರ ಈ ದಂಪತಿಯ ಡೈವೋರ್ಸ್‌ ಪ್ರಹಸನ ಆರಂಭವಾಗುತ್ತದೆ. ಪಂಚಣಿ ಹಣಕ್ಕಾಗಿ ಈಕೆ ಒಬ್ಬ ವ್ಯಕ್ತಿಗೆ 12 ಸಲ ಡೈವೋರ್ಸ್‌ ನೀಡಿ 12 ಸಲ ಮರುಮದುವೆಯಾಗಿದ್ದಾಳೆ..!

ಇದು ಪಿಂಚಣಿ ಕಾನೂನಿನ ಲೋಪದೋಷ ಬಳಸಿಕೊಂಡು ಹಣ ಪಡೆಯಲು ಮಾಡಿದ ನಾಟಕ ಎಂದು ಹಲವರು ಆರೋಪಿಸುತ್ತಾರೆ. ಇವರ ಸಂಬಂಧಿಕರು ಮತ್ತು ನೆರೆಹೊರೆಯವರು ಸೇರಿದಂತೆ ಅನೇಕ ಸಾಕ್ಷಿಗಳು, ದಂಪತಿ ಎಂದಿಗೂ ಬೇರೆಯಾಗಿಲ್ಲ ಎಂದು ಪ್ರತಿಪಾದಿಸುತ್ತಾರೆ, ಅವರು ಒಟ್ಟಿಗೆ ವಾಸಿಸುತ್ತಿದ್ದರೂ ತೋರಿಕೆಯಲ್ಲಿ ಡೈವೋರ್ಸ್‌ ಹಾಗೂ ಮರುಮದುವೆ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸುದ್ದಿ ಈಗ ಅಂತಾರಾಷ್ಟ್ರೀಯ ಗಮನ ಸೆಳೆದಿದೆ.
ಆರಂಭದಲ್ಲಿ ಜರ್ಮನ್ ವಾರ್ತಾಪತ್ರಿಕೆ ಬಿಲ್ಡ್ ವರದಿ ಮಾಡಿದಂತೆ, ಈಗ 73 ವರ್ಷ ವಯಸ್ಸಿನ ಮಹಿಳೆಯೊಬ್ಬರು ವರ್ಷಗಳಲ್ಲಿ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ವಿಧವೆಯ ಪಿಂಚಣಿ $3,42,000 (ಸುಮಾರು 29.05 ಕೋಟಿ ರೂ.)ಕ್ಕಿಂತ ಹೆಚ್ಚು ಹಣವನ್ನು ಹೇಗೆ ಪಡೆದರು ಎಂಬುದನ್ನು ವಿವರಿಸುತ್ತದೆ. ಇದು 1981 ರಲ್ಲಿ ಅವರ ಮೊದಲ ಗಂಡನ ಮರಣದ ನಂತರ ಆರಂಭವಾಗಿದೆ. ಈ ಮಹಿಳೆ 1982 ರಲ್ಲಿ ಮರುಮದುವೆಯಾದರು.

ಪ್ರಮುಖ ಸುದ್ದಿ :-   ಇರಾನಿನ 400 ಕೆಜಿ ಯುರೇನಿಯಂ ಕಾಣೆಯಾದ ಬಗ್ಗೆ ಅಮೆರಿಕಕ್ಕೆ ಭಯ ? ಯಾಕಂದ್ರೆ ಇದ್ರಿಂದ 10 ಪರಮಾಣು ಬಾಂಬ್‌ ತಯಾರಿಸಬಹುದಂತೆ...

ಮರುಮದುವೆಯಾದ ನಂತರ ಆಕೆಯ ವಿಧವೆಯ ಪಿಂಚಣಿ ಸಿಗುವುದಿಲ್ಲ ;ಅದು ನಿಂತಿತು. ಆದರೆ ಸರ್ಕಾರ ನೀಡುವ ಈ ಪಿಂಚಣಿಯ ಲಾಭ ಕಳೆದುಕೊಳ್ಳುವುದು ಈ ಮಹಿಳೆಗೆ ಇಷ್ಟವಿರಲಿಲ್ಲ. ಹೀಗಾಗಿ ಮಹಿಳೆಯ ಮೊದಲ ವಿಚ್ಛೇದನವು 1988 ರಲ್ಲಿ ಆಯಿತು. ಪತಿಯಿಂದ ಡೈವೋರ್ಸ್‌ ಪಡೆದ ನಂತರ ಮಹಿಳೆ ವಿಧವೆ ಅಥವಾ ವಿಚ್ಛೇದಿತ ಮಹಿಳೆಗೆ ಸರ್ಕಾರ ನೀಡುತ್ತಿದ್ದ $28,405 ಪರಿಹಾರ ಪಡೆದಿದ್ದಾಳೆ. ಇದಾದ ನಂತರ ಮತ್ತೆ ಮದುವೆಯಾಗಿದ್ದಾಳೆ. ಕೆಲ ವರ್ಷಗಳ ನಂತರ ಮತ್ತೆ ಪಿಂಚಣಿ ಪಡೆಯಲು ಮತ್ತೆ ಡೈವೋರ್ಸ್‌ ಪಡೆದಿದ್ದಾಳೆ. ಡೈವೋರ್ಸ್‌ ಪಡೆಯುವುದು, ನಂತರ ಮರುಮದುವೆಯಾಗುವುದು ಹೀಗೆಯೇ ಮುಂದುವರಿದಿದೆ. ಹೀಗೆ ಈ ಮಹಿಳೆ ಸರ್ಕಾರದಿಂದ ವಿಚ್ಛೇದಿತ ಮಹಿಳೆಗೆ ಸಿಗುವ ಪಿಂಚಣಿ ಹಣ ಪಡೆಯುತ್ತಲೇ ಇದ್ದಳು.

ಕಳೆದ 40 ವರ್ಷಗಳಲ್ಲಿ 12 ಬಾರಿ ವಿಚ್ಛೇದನ ಪಡೆದ ದಂಪತಿ ನಂತರ ಮರುವಿವಾಹವಾಗಿದ್ದಾರೆ. ಅವರ ಪ್ರತಿಯೊಂದು ಮದುವೆಯು ಸರಾಸರಿ ಅವಧಿ ಮೂರು ವರ್ಷ. ನಂತರ ಡೈವೋರ್ಸ್‌, ಮತ್ತೆ ಮರುಮದುವೆ. ಹೀಗೆ ಮಹಿಳೆ 13 ಬಾರಿ ಮದುವೆಯಾಗಿದ್ದಾಳೆ, ಆಕೆಯ ಗಂಡ 12 ಸಲ ಅದೇ ಮಹಿಳೆಯನ್ನೇ ಮರುಮದುವೆಯಾಗಿದ್ದಾನೆ…! ವಾಸ್ತವದಲ್ಲಿ ಡೈವೋರ್ಸ್‌ ಆಗಿಯೇ ಇಲ್ಲ. ಇದೆಲ್ಲ ನಡೆದದ್ದು ಕೇವಲ ಕಾಗದ ಪತ್ರದಲ್ಲಿ ಮಾತ್ರ. ಸರ್ಕಾರ ನೀಡುತ್ತಿದ್ದ ಸಹಾಯಧನ ಪಡೆಯಲು ಇವರು ಮಾಡಿದ ದೊಡ್ಡ ನಾಟಕವಾಗಿತ್ತು.
ಈ ಬೃಹನ್‌ ನಾಟಕವು ದಶಕಗಳವರೆಗೆ ಮುಂದುವರೆಯಿತು. ಮೇ 2022 ರಲ್ಲಿ ಪತ್ನಿ ವಿಚ್ಛೇದನ ಪಡೆದ ನಂತರ ಇವರ ಪಿಂಚಣಿ ಹಗರಣ ಬಯಲಿಗೆ ಬಂತು.

ಪ್ರಮುಖ ಸುದ್ದಿ :-   ವೀಡಿಯೊ...| ಹಾಸಿಗೆ, ಶೌಚಾಲಯ, ಮೈಕ್ರೋವೇವ್ ಒಲೆ, ಆಹಾರ ತಯಾರಿಕೆ...: ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ ಹಾರುವ ಹೋಟೆಲ್ ಕೂಡ ಹೌದು..!

ಅವರ ಮದುವೆ ಇತಿಹಾಸದ ಬಗ್ಗೆ ತಿಳಿದ ಪಿಂಚಣಿ ಅಧಿಕಾರಿಗಳು ಅವರಿಗೆ ಪಿಂಚಣಿ ನೀಡಲು ನಿರಾಕರಿಸಿದರು. ಹೀಗಾಗಿ ಪಿಂಚಣಿ ನಿಧಿಯ ವಿರುದ್ಧ ದಂಪತಿ ಮೊಕದ್ದಮೆ ಹೂಡಿದರು. ನಂತರ ಕಾನೂನು ಪ್ರಕ್ರಿಯೆ ತೆರೆದುಕೊಂಡಿತು. ಆಗ ಇವರ ಈ ಡೈವೋರ್ಸ್‌ ಹಾಗೂ ಮರುಮದುವೆಯ ನಾಟಕ ಬಯಲಾಯಿತು.
ಮಾರ್ಚ್ 2023 ರಲ್ಲಿ, ವಿಯೆನ್ನಾದಲ್ಲಿನ ಆಸ್ಟ್ರಿಯಾದ ಸುಪ್ರೀಂ ಕೋರ್ಟ್ ಅವರ ಪ್ರಕರಣವನ್ನು ವಜಾಗೊಳಿಸಿತು. ಈ ಪ್ರಕರಣದಲ್ಲಿ ವಿಚ್ಛೇದನದ ದುರುಪಯೋಗ ಎಂದು ಅದು ತೀರ್ಪು ನೀಡಿತು.
ನ್ಯಾಯಾಲಯದ ತೀರ್ಪಿನ ನಂತರ, ಸ್ಟೈರಿಯನ್ ಪೊಲೀಸ್ ನಿರ್ದೇಶನಾಲಯವು ಈ ದಂಪತಿಯ ವಿರುದ್ಧ ಕಳೆದ ಮಂಗಳವಾರ ಅಧಿಕೃತವಾಗಿ ವಂಚನೆ ತನಿಖೆಯನ್ನು ಪ್ರಾರಂಭಿಸಿತು.

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement