
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಂಗಳವಾರ (ಡಿಸೆಂಬರ್ 24) ಚಾಂಪಿಯನ್ಸ್ ಟ್ರೋಫಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಭಾರತಕ್ಕೆ ಅವಕಾಶ ಕಲ್ಪಿಸಲು ಪಿಸಿಬಿ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆಗೆ ಪಾಕಿಸ್ತಾನವು ಪಂದ್ಯಾವಳಿಯನ್ನು ಆಯೋಜಿಸುತ್ತದೆ ಎಂದು ಐಸಿಸಿ (ICC) ಪ್ರಕಟಿಸಿದ ನಂತರ ಪಂದ್ಯಗಳು ನಡೆಯುವ ಸ್ಥಳಗಳು ಸೇರಿದಂತೆ ಎಲ್ಲಾ ತಂಡಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. ಪಂದ್ಯಾವಳಿಯು ಫೆಬ್ರವರಿ 19 ರಂದು ಕರಾಚಿಯಲ್ಲಿ ಪಾಕಿಸ್ತಾನ vs ನ್ಯೂಜಿಲೆಂಡ್‌ನೊಂದಿಗೆ ಪ್ರಾರಂಭವಾಗಲಿದೆ ಮತ್ತು ಮಾರ್ಚ್ 9 ರವರೆಗೆ ಪಂದ್ಯಾವಳಿ ನಡೆಯಲಿದೆ. ಸೆಮಿ-ಫೈನಲ್ ಮತ್ತು ಫೈನಲ್ ಎರಡೂ ಪಂದಗ್ಯಗಳು ಕಾಯ್ದಿಟ್ಟ ದಿನಗಳನ್ನು ಹೊಂದಿದೆ.
ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಅಪರಾಹ್ನ 2:30ಕ್ಕೆ ಪ್ರಾರಂಭವಾಗುತ್ತವೆ. ಸ್ಟಾರ್ ಸ್ಪೋರ್ಟ್ಸ್ ಭಾರತದಲ್ಲಿನ ಎಲ್ಲಾ ಆಟಗಳನ್ನು ಪ್ರಸಾರ ಮಾಡುತ್ತದೆ.
ಪಾಕಿಸ್ತಾನವು 10 ಪಂದ್ಯಗಳನ್ನು ಆಯೋಜಿಸುತ್ತದೆ, ಆದರೆ ಪಾಕಿಸ್ತಾನದ ವಿರುದ್ಧ ಪಂದ್ಯ ಸೇರಿದಂತೆ ಭಾರತದ ಮೂರು ಲೀಗ್-ಹಂತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಒಂದು ಸೆಮಿಫೈನಲ್ ಮತ್ತು ಫೈನಲ್ ಕೂಡ ದುಬೈನಲ್ಲಿ ನಡೆಯಲಿದೆ. ಭಾರತ ಫೈನಲ್ ತಲುಪದಿದ್ದರೆ, ಲಾಹೋರ್‌ನಲ್ಲಿ ಹಣಾಹಣಿ ನಡೆಯಲಿದೆ.
ಚಾಂಪಿಯನ್ಸ್ ಟ್ರೋಫಿ ಗ್ರುಪ್
ಗುಂಪು ಎ: ಬಾಂಗ್ಲಾದೇಶ, ಭಾರತ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ
ಗುಂಪು ಬಿ: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ

ಚಾಂಪಿಯನ್ಸ್ ಟ್ರೋಫಿ 2025: ವೇಳಾಪಟ್ಟಿ
ಫೆಬ್ರವರಿ 19 – ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್, ನ್ಯಾಷನಲ್ ಸ್ಟೇಡಿಯಂ, ಕರಾಚಿ
ಫೆಬ್ರವರಿ 20 – ಬಾಂಗ್ಲಾದೇಶ ವಿರುದ್ಧ ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಫೆಬ್ರವರಿ 21 – ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ, ನ್ಯಾಷನಲ್ ಸ್ಟೇಡಿಯಂ, ಕರಾಚಿ
ಫೆಬ್ರವರಿ 22 – ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್, ಗಡಾಫಿ ಸ್ಟೇಡಿಯಂ, ಲಾಹೋರ್
ಫೆಬ್ರವರಿ 23 – ಪಾಕಿಸ್ತಾನ ವಿರುದ್ಧ ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಫೆಬ್ರವರಿ 24 – ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ
ಫೆಬ್ರವರಿ 25 – ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ
ಫೆಬ್ರವರಿ 26 – ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್, ಗಡಾಫಿ ಸ್ಟೇಡಿಯಂ, ಲಾಹೋರ್
ಫೆಬ್ರವರಿ 27 – ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ
ಫೆಬ್ರವರಿ 28 – ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ, ಗಡಾಫಿ ಕ್ರೀಡಾಂಗಣ, ಲಾಹೋರ್
ಮಾರ್ಚ್ 1 – ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್, ನ್ಯಾಷನಲ್ ಸ್ಟೇಡಿಯಂ, ಕರಾಚಿ
ಮಾರ್ಚ್ 2- ನ್ಯೂಜಿಲೆಂಡ್ ವಿರುದ್ಧ ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಮಾರ್ಚ್ 4 – ಸೆಮಿಫೈನಲ್ 1, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ*
5 ಮಾರ್ಚ್ – ಸೆಮಿಫೈನಲ್ 2, ಗಡಾಫಿ ಸ್ಟೇಡಿಯಂ, ಲಾಹೋರ್**
9 ಮಾರ್ಚ್ -ಫೈನಲ್ – ಗಡಾಫಿ ಕ್ರೀಡಾಂಗಣ, ಲಾಹೋರ್ (ಭಾರತ ಫೈನಲ್ ಪ್ರವೇಶಿಸದಿದ್ದರೆ ಮಾತ್ರ)
ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುತ್ತವೆ


ನಿಮ್ಮ ಕಾಮೆಂಟ್ ಬರೆಯಿರಿ