ಜನವರಿಯಿಂದ 1ರಿಂದ ನೌಕರರ ಪಿಂಚಣಿ ಯೋಜನೆ(EPS)ಯಲ್ಲಿ ಮಹತ್ವದ ಬದಲಾವಣೆ

ನವದೆಹಲಿ: ನೂತನ ವರ್ಷ 2025ರ ಜನವರಿ 1ರಿಂದ ದೇಶದಾದ್ಯಂತದ ಜನರ ಮೇಲೆ ಪರಿಣಾಮ ಬೀರುವ ಹಣಕಾಸಿನ ಬದಲಾವಣೆಗಳು ಜಾರಿಗೆ ಬರಲಿವೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕಾರ್ಯವಿಧಾನಗಳಲ್ಲಿನ ಬದಲಾವಣೆಗಳಿಂದ ಹಿಡಿದು ಎಲ್‌ಪಿಜಿ ಬೆಲೆ ಮತ್ತು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವರೆಗೆ ಹೊಸ ವರ್ಷವು ಪರಿಣಾಮ ಬೀರಬಹುದು.
ಇಪಿಎಫ್‌ಒ (EPFO) ಹೊಸ ನಿಯಮ
ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯ (CPPS) ಭಾಗವಾಗಿಪಿಂಚಣಿ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ನೌಕರರ ಪಿಂಚಣಿ ಯೋಜನೆ(EPS) ಬದಲಾವಣೆಗೆ ನವೆಂಬರ್ 10 ರಂದು ಕಾರ್ಮಿಕ ಸಚಿವಾಲಯ ಅನುಮೋದನೆ ನೀಡಿತ್ತು. ಇದೀಗ ಜನವರಿ 1 ರಿಂದ ಜಾರಿಯಾಗುತ್ತಿದೆ. ಹೊಸ ನಿಯಮದ ಪ್ರಕಾರ ನೌಕರರ ತಮ್ಮ ಪಿಂಚಣಿ ಹಣವನ್ನು ದೇಶದ ಯಾವುದೇ ಭಾಗದಲ್ಲಿ, ತಮ್ಮ ಬ್ಯಾಂಕ್‌‌ಗಳ ಇತರ ಶಾಖೆಯಿಂದ ಪಡೆಯಲು ಸಾಧ್ಯವಾಗಲಿದೆ. ಈ ಮೂಲಕ ಭಾರಿ ಸಮಸ್ಯೆ ಎದುರಿಸುತ್ತಿದ್ದ ಹಲವು ಹಿರಿಯ ನೌಕರರು, ಸ್ಥಳಾಂತರಗೊಂಡಿರುವ ನೌಕರರಿಗೆ ಅನುಕೂಲವಾಗಲಿದೆ. ನಿಯಮ ಬದಲಾವಣೆಯಿಂದ ಬರೋಬ್ಬರಿ 7 ಕೋಟಿ ಫಲಾನುಭವಿಗಳಿಗೆ ಉಪಯೋಗವಾಗಲಿದೆ.

ಮುಖ್ಯವಾಗಿ ನೌಕರರ ಪಿಂಚಣಿ ಯೋಜನೆಯ ಫಲಾನುಭವಿಗಳು ತಮ್ಮ ಬ್ಯಾಂಕ್ ಶಾಖೆಗೆ ತೆರಳಿ ಪಿಂಚಣಿ ಹಣ ಪಡೆಯಬೇಕಿತ್ತು. ಪ್ರತಿ ತಿಂಗಳು ಸ್ಥಳಾಂತರ ಗೊಂಡಿರುವ ನೌಕರರು, ಬೇರೆಡೆ ನಿವೃತ್ತ ನೌಕರರು, ತಮ್ಮ ಮೂಲ ಶಾಖೆಗೆ ತೆರಳಿ ಪ್ರತಿ ತಿಂಗಳು ಹಣ ಪಡೆಯಬೇಕಿತ್ತು. ಆದರೆ ಹೊಸ ನಿಯಮದ ಅಡಿಯಲ್ಲಿ ಫಲಾನುಭವಿಗಳು ತಾವಿದ್ದಲ್ಲೇ ಹತ್ತಿರದ ಬ್ಯಾಂಕ್‌ಗೆ ತೆರಳಿ ತಮ್ಮ ತಿಂಗಳ ಪಿಂಚಣಿ ಹಣವನ್ನು ಪಡೆಯಬಹುದು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಶೀಘ್ರದಲ್ಲೇ ಎಟಿಎಂ (ATM) ಕಾರ್ಡ್ ಅನ್ನು ವಿತರಿಸಲಿದೆ ಎಂಬ ವರದಿಗಳಿವೆ. ಅಲ್ಲದೆ, ಇಪಿಎಫ್ ಕೊಡುಗೆ ಮಿತಿಯನ್ನು ಈ ವರ್ಷವೂ ತೆಗೆದುಹಾಕುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಬೆಟ್ಟಿಂಗ್ ಆ್ಯಪ್‌ ಪ್ರಚಾರ : ನಟರಾದ ರಾಣಾ ದಗ್ಗುಬಾಟಿ, ವಿಜಯ ದೇವರಕೊಂಡ, ಪ್ರಕಾಶರಾಜ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು

ಆರ್‌ಬಿಐ (RBI)ನಿಂದ ರೈತರ ಸಾಲದಲ್ಲಿ ಸುಧಾರಣೆ
ರೈತರಿಗೆ ಸಾಲ ನೀಡಲು ಮತ್ತು ಕೃಷಿ ಉತ್ಪಾದಕತೆ ಮತ್ತು ಆರ್ಥಿಕ ಸ್ಥಿರತೆಯನ್ನು ಸುಧಾರಿಸಲು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೃಷಿ ಹಣಕಾಸುದಲ್ಲಿ ಗಮನಾರ್ಹ ಬದಲಾವಣೆಯನ್ನು ಪರಿಚಯಿಸಿದೆ, ರೈತರು ಅಡಮಾನ ಖಾತರಿಗಳ ಅಗತ್ಯತೆ ಇಲ್ಲದೆ ಈಗ ₹ 2 ಲಕ್ಷದವರೆಗೆ (ಹಿಂದೆ ₹ 1.6 ಲಕ್ಷ) ಅಸುರಕ್ಷಿತ ಸಾಲಗಳಿಗೆ ಅರ್ಹರಾಗಿದ್ದಾರೆ. ಈ ಕ್ರಮವು 2 ಲಕ್ಷ ರೂ.ವರೆಗಿನ ಕೃಷಿ ಸಾಲಗಳಿಗೆ ಮೇಲಾಧಾರ ಮತ್ತು ಮಾರ್ಜಿನ್ ಅವಶ್ಯಕತೆಗಳನ್ನು ಮನ್ನಾ ಮಾಡುವ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಅನುಕೂಲ ಒದಗಿಸುವ ಗುರಿಯನ್ನು ಹೊಂದಿದೆ.

ಯುಪಿಐ (UPI) ಪಾವತಿ ಮಿತಿ ಹೆಚ್ಚಳ:
ಭಾರತೀಯ ರಿಸರ್ವ್ ಬ್ಯಾಂಕ್ (RBI) ಯುಪಿಐ (UPI) 123Pay ಮತ್ತು ಯಪಿಐ (UPI) ಲೈಟ್‌ಗೆ ವಹಿವಾಟು ಮಿತಿಗಳನ್ನು ಹೆಚ್ಚಿಸಿದೆ. ಯುಪಿಐ (UPI) 123Payಗಾಗಿ ಪ್ರತಿ ವಹಿವಾಟಿನ ಮಿತಿಯನ್ನು ₹ 5,000 ರಿಂದ ₹ 10,000 ಕ್ಕೆ ಏರಿಸಲಾಗಿದೆ, ಯುಪಿಐ ಲೈಟ್‌ನ ಮಿತಿಯನ್ನು ₹ 500 ರಿಂದ ₹ 1,000 ಕ್ಕೆ ಹೆಚ್ಚಿಸಲಾಗಿದೆ. ಈ ಬದಲಾವಣೆಗಳು ಜನವರಿ 1ರಿಂದ ಜಾರಿಗೆ ಬರುತ್ತವೆ. ಉದ್ಯಮದ ತಜ್ಞರು ಇದನ್ನು ಸಕಾರಾತ್ಮಕ ಕ್ರಮವೆಂದು ನೋಡುತ್ತಾರೆ, ವಿಶೇಷವಾಗಿ ಡಿಜಿಟಲ್ ಪಾವತಿ ವಿಧಾನಗಳಿಗೆ ಸೀಮಿತ ಪ್ರವೇಶವನ್ನು ಹೊಂದಿರುವ ಹಿರಿಯ ನಾಗರಿಕರು ಮತ್ತು ಗ್ರಾಮೀಣ ಬಳಕೆದಾರರಂತಹವರಿಗೆ ಇದು ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪ್ರಮುಖ ಸುದ್ದಿ :-   ಕ್ರಿಕೆಟರ್‌ ಯುಜ್ವೇಂದ್ರ ಚಾಹಲ್- ಧನಶ್ರೀ ವರ್ಮಾ ವಿಚ್ಛೇದನ ಈಗ ಅಧಿಕೃತ

 

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement