ವೀಡಿಯೊ…| ಇಸ್ಪೀಟ್‌ ಕಾರ್ಡ್‌ ಎಸೆದು 1 ನಿಮಿಷದಲ್ಲಿ 41 ಸೌತೆ ಕಾಯಿಗಳನ್ನು ಕತ್ತರಿಸಿ ಗಿನ್ನಿಸ್‌ ದಾಖಲೆ ಸ್ಥಾಪಿಸಿದ ವ್ಯಕ್ತಿ ; ವೀಕ್ಷಿಸಿ

ಸೌತೆಕಾಯಿಗಳು ವಿಶ್ವ ದಾಖಲೆಯ ಭಾಗವಾಗಿದೆ. ಚೀನಾದ ಝಾಂಗ್ ಯಾಜೌ ಎಂಬವರು ಸೌತೆಕಾಯಿಗಳನ್ನು ಚಾಕು ಹಾಗು ತುಂಡರಿಸುವ ಇತರ ಸಾಧನೆಗಳನ್ನು ಬಳಸದೆ ಆದರೆ ಅವರು ಇಸ್ಪೀಟ್‌ ಎಲೆಯಲ್ಲಿ ಕೇವಲ ಒಂದು ನಿಮಿಷದಲ್ಲಿ 41 ಸೌತೆಕಾಯಿಗಳನ್ನು ತುಂಡು ಮಾಡುವ ಮೂಲಕ ಗಿನ್ನೆಸ್‌ ದಾಖಲೆ ಸ್ಥಾಪಿಸಿದ್ದಾರೆ.
ಇಸ್ಪೀಟ್‌ ಎಲೆಗಳನ್ನು ಎಸೆಯುವ ಕೌಶಲ್ಯಕ್ಕೆ ಹೆಸರುವಾಸಿಯಾದ ಝಾಂಗ್‌ ಅವರು ಈಗ ಸೌತೆಕಾಯಿಗಳನ್ನು ಇಸ್ಪೀಟ್‌ ಕಾರ್ಡ್‌ಗಳಲ್ಲಿ ಕತ್ತರಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇನ್ಸ್ಟಾಗ್ರಾಂ (Instagram)ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಝಾಂಗ್ ಯಾಜೌ ಅವರು ದೂರದಲ್ಲಿ ಸೌತೆಕಾಯಿಗಳನ್ನು ನೇತು ಹಾಕಿರುವ ಸಾಲಿನಿಂದ ಇಸ್ಟೀಟ್‌ ಎಲೆಯಿಂದ ಒಂದೇ ಸೌತೆಗಳನ್ನು ಮದ್ಯದಲ್ಲೇ ಕತ್ತರಿಸುವುದು ಕಂಡುಬಂದಿದೆ.

ಝಾಂಗ್‌ ಒಂದೊಂದೇ ಇಸ್ಪೀಟ್‌ ಎಲೆಗಳನ್ನು ಎಸೆಯುತ್ತಿದ್ದಂತೆಯೇ ಸಾಲಾಗಿ ನೇತು ಹಾಕಿದ ಒಂದೊಂದೇ ಸೌತೆಕಾಯಿಗಳು ತುಂಡಾಗಿ ಬೀಳುತ್ತವೆ. ಆತ ಇಸ್ಪೀಟ್‌ ಕಾರ್ಡ್‌ಗಳನ್ನು ಎಸೆಯುವುದು ಸಮರ ಕಲೆಗಳ ಚಲನಚಿತ್ರದ ದೃಶ್ಯದಂತೆ ಭಾಸವಾಗುತ್ತದೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಝಾಂಗ್‌ ತನ್ನ ಇಸ್ಪೀಟ್‌ ಕಾರ್ಡ್‌ಗಳ ಎಸೆತವನ್ನು ಪರಿಪೂರ್ಣಗೊಳಿಸಲು ಮತ್ತು ಅದನ್ನು ದಾಖಲೆ ಪುಸ್ತಕಗಳಲ್ಲಿ ಸೇರಿಸಲು 20 ದಿನಗಳ ಕಾಲ ಕಠಿಣ ಅಭ್ಯಾಸ ನಡೆಸಿದ್ದಾರೆ. ಜಾಂಗ್ ಯಾಝೌ ಅವರು ಇಸ್ಪೀಟ್‌ ಎಲೆಯಲ್ಲಿ ಕೇವಲ ಒಂದು ನಿಮಿಷದಲ್ಲಿ 41 ಸೌತೆಕಾಯಿಗಳನ್ನು ತುಂಡರಿಸಿದ್ದಾರೆ.
ಈ ವಿಧಾನಗಳು ಸೌತೆಕಾಯಿಗಳನ್ನು ಕತ್ತರಿಸುವ ಅತ್ಯಂತ ಪ್ರಾಯೋಗಿಕ ಮಾರ್ಗವಲ್ಲದಿದ್ದರೂ, ಅವರು ಖಂಡಿತವಾಗಿಯೂ ಅತ್ಯಂತ ವಿಲಕ್ಷಣವಾದ ಈ ಗಿನ್ನಿಸ್ ವಿಶ್ವ ದಾಖಲೆಗಳ ಹಿಂದೆ ಸೃಜನಶೀಲತೆ ಮತ್ತು ಕೌಶಲ್ಯವನ್ನು ಪ್ರದರ್ಶನವಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement