ಬೆಳಗಾವಿ | ಮಕ್ಕಳ ಮಾರಾಟ ಜಾಲ ಪತ್ತೆ ; 4.50 ಲಕ್ಷ ರೂ.ಗಳಿಗೆ ಮಾರಾಟವಾಗಿದ್ದ ಮಗುವಿನ ರಕ್ಷಣೆ

ಬೆಳಗಾವಿ: ಬೆಳಗಾವಿಯಲ್ಲಿ ಸುಮಾರು ಒಂದು ವರ್ಷ 10 ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಸಾಂಗ್ಲಿ ಮೂಲದ ದಂಪತಿ ಗೋವಾ ಮೂಲದ ವ್ಯಕ್ತಿಗೆ ಮಗುವನ್ನು ಸುಮಾರು 4.50 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು ಎಂದು  ಹೇಳಲಾಗಿದ್ದು, ಬೆಳಗಾವಿಯ ಮಕ್ಕಳ ರಕ್ಷಣಾ ಸಹಾಯವಾಣಿಗೆ ಬಂದ ಕರೆ ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಲ್ಲಿ ಮಗುವನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಬೆಳಗಾವಿಯ ಮಕ್ಕಳ ರಕ್ಷಣಾ ಸಹಾಯವಾಣಿಗೆ ಬಂದ ಕರೆ ಬಂದ ನಂತರ ಇಡೀ ಪ್ರಕರಣ ಬಯಲಾಗಿದೆ. ಮಗುವನ್ನು ಸ್ವಾಮಿ ವಿವೇಕಾನಂದ ಮಕ್ಕಳ ದತ್ತು ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಮಾರ್ಕೆಟ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ಈ ಸಂಬಂಧ ಮಹಾರಾಷ್ಟ್ರದ ಸಾಂಗ್ಲಿಯ ರಾಜೇಂದ್ರ ಮೇತ್ರಿ, ಶಿಲ್ಪಾ ಮೇತ್ರಿ, ಗೋವಾದ ಸ್ಮಿತಾ ವಾಡೀಕರ, ಬೆಳಗಾವಿಯ ವಂದನಾ ಸುರ್ವೆ, ಸೊಲ್ಲಾಪುರದ ರವಿ ರಾವುತ, ರಾಣಿ ರಾವುತ ದಂಪತಿ ಎಂಬವರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಲ್ಲಿ ಭಾಗಿಯಾಗಿರುವ ಮಧ್ಯವರ್ತಿಗಳು ಈ ಹಿಂದೆ ಇಂತಹ ಪ್ರಕರಣಗಳನ್ನು ನಡೆಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

ಸಾಂಗ್ಲಿಯ ಮೇತ್ರಿ ದಂಪತಿ ತಮ್ಮ ತಮ್ಮ ಮಗುವನ್ನು ಗೋವಾದ ಸ್ಮಿತಾ ವಾಡೀಕರ ಅವರಿಗೆ ಮಾರಾಟ ಮಾಡಿದ್ದರು. ಮಗು ಮಾರಾಟ ಮಾಡುವುದರಲ್ಲಿ ಬೆಳಗಾವಿಯ ವಂದನಾ, ಸೊಲ್ಲಾಪುರದ ರವಿ, ರಾಣಿ ಮಧ್ಯವರ್ತಿಗಳಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಮನಗರದ ಹೊಟೇಲ್‌ನಲ್ಲಿ ವ್ಯವಹಾರ ನಡೆಸಿ ನಂತರ ಮಗುವನ್ನು ಗೋವಾದ ದಂಪತಿಗೆ ಕೊಟ್ಟಿದ್ದರು.
ಫೋನ್‌ ಕರೆಯಿಂದಾಗಿ ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮಗುವನ್ನು ಖರೀದಿಸಿದ್ದ ಗೋವಾದ ಸ್ಮಿತಾ ಅವರಿಗೆ ಕರೆ ಮಾಡಿದ ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಅವರನ್ನು ಬೆಳಗಾವಿಗೆ ಕರೆಯಿಸಿಕೊಂಡಿದ್ದಾರೆ. ನಂತರ ಈ ಬಗ್ಗೆ ವಿಚಾರಣೆ ನಡೆಸಿದಾಗ ಮಗು ಖರೀದಿಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತಲೆಮರೆಸಿಕೊಂಡಿರುವ ಮಧ್ಯವರ್ತಿಗಳಾದ ವಂದನಾ, ರವಿ, ರಾಣಿ ಶೋಧ ಕಾರ್ಯ ನಡೆದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement