ವೀಡಿಯೊ…| ಸೈಫ್ ಅಲಿ ಖಾನಗೆ ಚಾಕು ಇರಿತ ; ಮುಖ ಮುಚ್ಚಿಕೊಂಡು ಮೆಟ್ಟಿಲು ಏರುತ್ತಿರುವ ದಾಳಿಕೋರನ ಮತ್ತೊಂದು ವೀಡಿಯೊ ವೈರಲ್‌…

ಮುಂಬೈ: ಬಾಲಿವುಡ್‌ ನಟ ಸೈಫ್ ಅಲಿ ಖಾನ್‌ ಅವರಿಗೆ ಚಾಕುವಿನಿಂದ ಇರಿದ ವ್ಯಕ್ತಿ ಸೈಫ್ ಅಲಿ ಖಾನ್‌ ಅವರ ಮನೆಗೆ ಪ್ರವೇಶಿಸುವ ಮೊದಲು ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ತೋರಿಸುವ ಹೊಸ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ.
12-ಅಂತಸ್ತಿನ ಕಟ್ಟಡದ ಯಾವುದೇ ನಿವಾಸಿಗಳಿಗೆ ಎಚ್ಚರವಾಗದಂತೆ ಆರೋಪಿಯು ಜಾಗರೂಕತೆಯಿಂದ ಮೆಟ್ಟಿಲು ಹತ್ತುತ್ತಿರುವುದನ್ನು ಸುಮಾರು ರಾತ್ರಿ 1:37 ರ ಸಮಯದ ದೃಶ್ಯಾವಳಿ ತೋರಿಸುತ್ತದೆ. ಆತ ಮುಖಕ್ಕೆ ಬಟ್ಟೆಕೊಂಡು ಬೆನ್ನಿನ ಮೇಲೆ ಬ್ಯಾಗ್ ಹಾಕಿಕೊಂಡು ಮೆಟ್ಟಿಲು ಏರುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಗುರುವಾರ ಹೊರಹೊಮ್ಮಿದ್ದ ಕಟ್ಟಡದ ಆರನೇ ಮಹಡಿಯ ಮತ್ತೊಂದು ದೃಶ್ಯಾವಳಿಯಲ್ಲಿ, ಘಟನೆಯ ನಂತರ ಓಡಿಹೋಗುವಾಗ ಆತ ಮಟ್ಟಿಲುಗಳನ್ನು ಮೆಟ್ಟಿಲುಗಳನ್ನು ಬಳಸಿ ಹೋಗುತ್ತಿರುವುದು ಕಂಡುಬಂದಿದೆ. ಇದಾದ ಬಳಿಕ ಪರಾರಿಯಾಗಲು ಅಗ್ನಿಶಾಮಕ ದಳದ ಶಾಫ್ಟ್‌ ದಾರಿ ಬಳಸಿದ್ದ. ಮೇಲಕ್ಕೆ ಬರುವಾಗಲೇ ಅದೇ ದಾರಿ ಬಳಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ.

ಲಾಬಿ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಗಳಲ್ಲಿ ಆತ ಒಳಗೆ ಪ್ರವೇಶಿಸಿದ್ದರ ಬಗ್ಗೆ ಯಾವುದೇ ಸುಳಿವಿಲ್ಲ, ಆತ ಕಟ್ಟಡವನ್ನು ಪ್ರವೇಶಿಸಲು ಮತ್ತು ಹೊರಬರಲು ಮುಖ್ಯ ಗೇಟ್ ಅನ್ನು ಬಳಸಿಲ್ಲ ಎಂಬುದು ಇದರಿಂದ ಗೊತ್ತಾಗಿದೆ. ‘ಸದ್ಗುರು ಶರಣ’ ಕಟ್ಟಡದ ಕಾಂಪೌಂಡ್ ಪ್ರವೇಶಿಸಲು ಪಕ್ಕದ ಕಟ್ಟಡದ ಗೋಡೆಯನ್ನು ಏರಿದ್ದಾನೆ ಎಂದು ಹೇಳಲಾಗಿದೆ. ಐಷಾರಾಮಿ ಬಾಂದ್ರಾ ಪ್ರದೇಶದ ಕಟ್ಟಡದಲ್ಲಿ ನಟ ಸೈಫ್‌ ಮನೆ ನಾಲ್ಕು ಮಹಡಿಗಳಲ್ಲಿ ಹರಡಿಕೊಂಡಿದೆ.
ಸ್ಥಳದಿಂದ ಪರಾರಿಯಾಗುವಾಗ ಸಿಕ್ಕಿಬೀಳುವುದನ್ನು ತಪ್ಪಿಸಲು ಆತ ಬಟ್ಟೆ ಬದಲಾಯಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ನಂತರ ಆತ ಬಾಂದ್ರಾ ರೈಲು ನಿಲ್ದಾಣದ ಬಳಿ ಕಾಣಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಒಳಪ್ರವೇಶಿದವನನ್ನು ಸೈಫ್‌ ಅಲಿ ಖಾನ್‌ ಅವರ ಮೂರು ವರ್ಷದ ಮಗ ಜೆಹ್ ಕೋಣೆಯಲ್ಲಿ ಆತನ ದಾದಿ ಕಂಡಳು. ಅವಳು ಅವನನ್ನು ಎದುರಿಸಿದಳು, ಆದರೆ ಆತನನ್ನು ತಡೆಯಲು ಅವಳಿಗೆ ಸಾಧ್ಯವಾಗಲಿಲ್ಲ, ಆದರೆ ಅವರಿಬ್ಬರ ಜಗಳ ವೇಳೆ ಖಾನ್ ಅವರಿಗೆ ಎಚ್ಚರವಾಯಿತು. ನಂತರ ನಟ ಸೈಫ್‌ ಅಲಿ ಖಾನ್‌ ದರೋಡೆಕೋರನ ವಿರುದ್ಧ ಹೋರಾಡಿದರು. ಆಗ ಆತ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಒಂದು ಕತ್ತಿನ ಮೇಲೆ ಮತ್ತು ಇನ್ನೊಂದು ಬೆನ್ನುಮೂಳೆಯ ಬಳಿ ಸೇರಿದಂತೆ ಅವರಿಗೆ ಆರು ಇರಿತದ ಗಾಯಗಲಾಗಿವೆ. ಅವರನ್ನು ಹತ್ತಿರದ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಶಸ್ತ್ರಚಿಕಿತ್ಸೆ ಮಾಡಲಾಯಿತು.
ಆಸ್ಪತ್ರೆಯ ಹಿರಿಯ ವೈದ್ಯರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಟ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅವರನ್ನು ಐಸಿಯುನಿಂದ ಹೊರಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಚಾಕು 2 ಎಂಎಂ ಆಳಕ್ಕೆ ಹೋಗಿದ್ದರೆ ಅವರಿಗೆ ತೀವ್ರ ಗಾಯವಾಗುತ್ತಿತ್ತು ಎಂದು ಲೀಲಾವತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನೀರಜ್ ಉತ್ತಮನಿ ತಿಳಿಸಿದ್ದಾರೆ.
ಮುಂಬೈ ಪೊಲೀಸರು ದರೋಡೆ, ಅತಿಕ್ರಮ ಪ್ರವೇಶ ಮತ್ತು ಗಂಭೀರ ಗಾಯದ ಪ್ರಕರಣವನ್ನು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದಿಂದ ದೂರವಾಣಿ ಕರೆ ; ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ ; ಮಿಲಿಟರಿ ಕಾರ್ಯಾಚರಣೆಗಳು ಸ್ಥಗಿತ | ವಿದೇಶಾಂಗ ಸಚಿವಾಲಯ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement