‘ಒತ್ತೆಯಾಳುಗಳ ಪಟ್ಟಿ ಮೊದಲು ಬಿಡುಗಡೆ ಮಾಡಿ…ಅಲ್ಲಿಯವರೆಗೂ ಕದನ ವಿರಾಮ ಇಲ್ಲ…’: ಹಮಾಸ್‌ ಗೆ ತಿಳಿಸಿದ ಇಸ್ರೇಲ್‌

ಹಮಾಸ್ ಮೊದಲ ಹಂತದಲ್ಲಿ ಬಿಡುಗಡೆ ಮಾಡಲಿರುವ 33 ಒತ್ತೆಯಾಳುಗಳ ಪಟ್ಟಿಯನ್ನುಬಿಡುಗಡೆ ಮಾಡುವ ವರೆಗೆ ಇಸ್ರೇಲ್ ಗಾಜಾ ಕದನ ವಿರಾಮ ಒಪ್ಪಂದ ಮುಂದುವರಿಸುವುದಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ಹೇಳಿದ್ದಾರೆ.
ಕದನ ವಿರಾಮ ಒಪ್ಪಂದವು ಜಾರಿಗೆ ಬರಲು ಕೆಲವು ಗಂಟೆಗಳ ಮೊದಲು ಅವರ ಈ ಹೇಳಿಕೆ ಬಂದಿದೆ. ಹಮಾಸ್ ಒತ್ತೆಯಾಳುಗಳ ಹೆಸರನ್ನು ಅವರ ಬಿಡುಗಡೆಗೆ ಕನಿಷ್ಠ 24 ಗಂಟೆಗಳ ಮುಂಚಿತವಾಗಿ ನೀಡುತ್ತದೆ ಎಂದು ಅದು ಹೇಳಿದೆ, ಅದು ಇನ್ನೂ ಬಿಡುಗಡೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
“ಒಪ್ಪಂದಂತೆ ಬಿಡುಗಡೆ ಮಾಡಲಾಗುವ ಒತ್ತೆಯಾಳುಗಳ ಪಟ್ಟಿಯನ್ನು ನಾವು ಸ್ವೀಕರಿಸುವವರೆಗೆ ನಾವು ಒಪ್ಪಂದ ಮುಂದುವರಿಸುವುದಿಲ್ಲ. ಒಪ್ಪಂದದ ಉಲ್ಲಂಘನೆಯನ್ನು ಇಸ್ರೇಲ್ ಸಹಿಸುವುದಿಲ್ಲ. ಈಗ ಸಂಪೂರ್ಣ ಜವಾಬ್ದಾರಿ ಹಮಾಸ್‌ನ ಮೇಲಿದೆ ಎಂದು ನೆತನ್ಯಾಹು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಗಾಜಾ ಕದನ ವಿರಾಮ ಒಪ್ಪಂದವನ್ನು ಅನುಮೋದಿಸಿದೆ, ಇದು ಇಸ್ರೇಲಿ ಜೈಲುಗಳಲ್ಲಿ ಪ್ಯಾಲೇಸ್ತಿನಿಯನ್ ಕೈದಿಗಳ ಬದಲಿಗೆ ಹಮಾಸ್ ಹಿಡಿದಿಟ್ಟುಕೊಂಡಿರುವ ಡಜನ್ಗಟ್ಟಲೆ ಒತ್ತೆಯಾಳುಗಳ ವಿನಿಮಯವನ್ನು ಒಳಗೊಂಡಿದೆ ಮತ್ತು 15 ತಿಂಗಳ ಸುದೀರ್ಘ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ನೀಡುವುದನ್ನು ಒಳಗೊಂಡಿದೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶುಕ್ರವಾರ ಹಮಾಸ್‌ ಜೊತೆಗಿನ ದೀರ್ಘಾವಧಿಯ ಕದನ ವಿರಾಮ ಒಪ್ಪಂದದ ಮೇಲೆ ಮತ ಚಲಾಯಿಸಲು ತಮ್ಮ ಭದ್ರತಾ ಕ್ಯಾಬಿನೆಟ್ ಅನ್ನು ಕರೆದ ನಂತರ ಬಹುನಿರೀಕ್ಷಿತ ನಿರ್ಧಾರವು ಬಂದಿದೆ.

ಒಪ್ಪಂದದ ಮೊದಲ ಹಂತದ ಅಡಿಯಲ್ಲಿ, 42 ದಿನಗಳವರೆಗೆ ಕದನ ವಿರಾಮ ಇರುತ್ತದೆ, ಹಮಾಸ್ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ, ಇದರಲ್ಲಿ ಮಕ್ಕಳು, ಮಹಿಳೆಯರು, ಮಹಿಳಾ ಸೈನಿಕರು-ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಸೇರಿದ್ದಾರೆ. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ಹಮಾಸ್‌ನಿಂದ ಬಿಡುಗಡೆಯಾದ ಪ್ರತಿ ಮಹಿಳಾ ಇಸ್ರೇಲಿ ಸೈನಿಕರಿಗೆ 50 ಪ್ಯಾಲೆಸ್ತೀನ್ ಕೈದಿಗಳನ್ನು ಮತ್ತು ಇತರ ಮಹಿಳಾ ಒತ್ತೆಯಾಳುಗಳಿಗಾಗಿ 30 ಕೈದಿಗಳನ್ನು ಬಿಡುಗಡೆ ಮಾಡುತ್ತದೆ.
7 ಅಕ್ಟೋಬರ್ 2023 ರ ಹಮಾಸ್ ಇಸ್ರೇಲ್‌ ಮೇಲೆ ದಾಳಿಯ ನಂತರ 1,200 ಕ್ಕೂ ಹೆಚ್ಚು ಜನರು, ಹೆಚ್ಚಾಗಿ ನಾಗರಿಕರು ಕೊಲ್ಲಲ್ಪಟ್ಟರು. ಅಲ್ಲದೆ, ಹಮಾಸ್‌ ಗುಂಪು 250 ಇಸ್ರೇಲಿಗಳನ್ನು ಒತ್ತೆಯಾಳುಗಳಾಗಿ ಕರೆದೊಯ್ದಿತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಸುಮಾರು 48,000 ಜನರು ಸಾವಿಗೀಡಾದರು.

ಪ್ರಮುಖ ಸುದ್ದಿ :-   ನೂತನ ಪೋಪ್ ಆಗಿ ಆಯ್ಕೆಯಾದ ರಾಬರ್ಟ್ ಪ್ರೇವೋಸ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement