ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಚಂದ್ರಘಟಗಿ ಗ್ರಾಮದಲ್ಲಿ ಭಾನುವಾರ ತಡ ರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ 7 ಹೋರಿಗಳು ಸಜೀವದಹನವಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಚಂದ್ರಘಟಗಿಯ ಮಹೇಶ ಗಣಪತಿ ಹೆಗಡೆ ಅವರ ಮನೆಯ ಹಿಂಭಾಗದಲ್ಲಿರುವ ಕೊಟ್ಟಿಗೆಗೆ ಭಾನುವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ 7 ಹೋರಿಗಳು ಜೀವಂತ ದಹನವಾಗಿವೆ. . ಅಲ್ಲದೆ ಸಿ ಸಿ ಕ್ಯಾಮೆರಾ, ಜಾನುವಾರುಗಳ ಧಾನ್ಯ, ಹುಲ್ಲು ಕಟ್ಟಿಗೆ ಸಾಮಗ್ರಿಗಳು ಸುಟ್ಟಿವೆ. ರಾತ್ರಿ ಸಮಯವಾಗಿದ್ದರಿಂದ ಯಾರಿಗೂ ಗೊತ್ತಾಗಿಲ್ಲ. ಹೀಗಾಗಿ ಹೋರಿಗಳು ಬೆಂಕಿಗೆ ಆಹುತಿಯಾಗಿವೆ, ಅಂದಾಜು ಹಾನಿ 2.40 ಲಕ್ಷ ರೂ.ಗಳಷ್ಟು ಹಾನಿ ಆಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಸೋಮವಾರ ತಹಶೀಲ್ದಾರ ಎಂ. ಆರ್. ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ