ಮಸ್ಕ್ ಪ್ರಮಾಣ ವಚನದ ನಂತರ ಸೋಮವಾರ ವಾಷಿಂಗ್ಟನ್ ಡಿಸಿಯಲ್ಲಿರುವ ಕ್ಯಾಪಿಟಲ್ ಒನ್ ಅರೆನಾದಲ್ಲಿ ಎಲೋನ್ ಮಸ್ಕ್ ಉತ್ಸಾಹಭರಿತ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿ ಸಂಭ್ರಮಿಸಿದರು. ಟೆಸ್ಲಾ ಮುಖ್ಯಸ್ಥ ಮಸ್ಕ್ ಕುಣಿಯುತ್ತ ವೇದಿಕೆಯನ್ನು ಪ್ರವೇಶಿಸಿದರು, ಕುಪ್ಪಳಿಸಿದರು, ಬಿಗಿಮುಷ್ಟಿ ಹಿಡಿದು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.
SpaceX ಸಿಇಒ (CEO) ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ನಂತರ ವೇದಿಕೆಯ ಸುತ್ತಲೂ ಜಿಗಿಯುತ್ತ ವೇದಿಕೆಯ ಮೇಲೆ ಒಂದು ಸುತ್ತು ಹಾಕಿ ಡ್ಯಾನ್ಸ್ ಮಾಡುತ್ತ ಮುಷ್ಟಿ ಬಿಗಿ ಹಿಡಿದು ಕೈಮೇಲೆತ್ತಿ ಹರ್ಷೋದ್ಗಾರ ಮಾಡಿದರು. ನಂತರ ತನ್ನ ತೋಳುಗಳನ್ನು ಚಾಚಿ ಸಂಭ್ರಮಪಟ್ಟರು.
ನಂತರ ಮಾತನಾಡಿದ ಅವರು, ‘ನಾನು ಭವಿಷ್ಯಕ್ಕಾಗಿ ಉತ್ಸುಕನಾಗಿದ್ದೇನೆ’ ಎಂದು ಹೇಳಿದರು. “ಇದು ವಿಜಯದ ಭಾವನೆಯಾಗಿದೆ. ಮತ್ತು ಇದು ಸಾಮಾನ್ಯ ವಿಜಯವಾಗಿರಲಿಲ್ಲ. ಇದು ಮಾನವ ನಾಗರಿಕತೆಯ ಹಾದಿಯಲ್ಲಿ ಕವಲೊಡೆಯಿತು. ನಿಮಗೆ ಗೊತ್ತು ಎಂದರು.
“ಚುನಾವಣೆಗಳು ಬರುತ್ತವೆ ಮತ್ತು ಹೋಗುತ್ತವೆ. ಕೆಲವು ಚುನಾವಣೆಗಳು ಮುಖ್ಯವಾದವು, ಕೆಲವು ಅಲ್ಲ. ಆದರೆ ಈ ಚುನಾವಣೆ ನಿಜವಾಗಿಯೂ ಮುಖ್ಯವಾದುದು, ಮತ್ತು ಈ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿದ್ದಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.
“ನಾಗರಿಕತೆಯ ಭವಿಷ್ಯವು ಸುರಕ್ಷಿತವಾಗಿರಲಿದೆ. ನಾವು ಅಂತಿಮವಾಗಿ ಸುರಕ್ಷಿತ ನಗರಗಳನ್ನು ಹೊಂದಲಿದ್ದೇವೆ. ಸುರಕ್ಷಿತ ನಗರಗಳು, ಸುರಕ್ಷಿತ ಗಡಿಗಳು ಇರಲಿವೆ ಎಂದರು. ಸಂವೇದನಾಶೀಲ ಖರ್ಚು. ಮೂಲಭೂತ ಗಗನಯಅತ್ರಿಗಳನ್ನು ಮಂಗಳಗ್ರಹಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದ ಟ್ರಂಪ್ ಅವರಿಗೆ ಧನ್ಯವಾದ ಹೇಳಿದರು.
ಮಸ್ಕ್ ಅವರ ಉತ್ಸಾಹವು ಸ್ಪಷ್ಟವಾಗಿತ್ತು. “ನಾನು ಭವಿಷ್ಯಕ್ಕಾಗಿ ತುಂಬಾ ಉತ್ಸುಕನಾಗಿದ್ದೇನೆ. ಇದು ತುಂಬಾ ರೋಮಾಂಚನಕಾರಿಯಾಗಲಿದೆ. ಅಧ್ಯಕ್ಷರು ಹೇಳಿದಂತೆ, ನಾವು ಸುವರ್ಣ ಯುಗವನ್ನು ಹೊಂದಲಿದ್ದೇವೆ. ಇದು ಅದ್ಭುತವಾಗಿರುತ್ತದೆ. ಮತ್ತು ಮೂಲಭೂತ ವಿಷಯಗಳಲ್ಲಿ ಒಂದು ಹಾಗೂ ನಾನು ಪ್ರೀತಿಸುವ ಅತ್ಯಂತ ಅಮೇರಿಕನ್ ಮೌಲ್ಯಗಳಲ್ಲಿ ಒಂದಾಗಿದೆ. ನಾವು ಭವಿಷ್ಯವನ್ನು ಉತ್ತಮಗೊಳಿಸುತ್ತೇವೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ