ವೀಡಿಯೊ…| ಎರಡನೇ ಮಹಡಿ ಮೇಲಿನ ಪಾರ್ಕಿಂಗ್‌ನಿಂದ ಕೆಳಕ್ಕೆ ಬಿದ್ದ ಕಾರು ; ಮುಂದಾಗಿದ್ದು…

ಪುಣೆಯ ಮಲ್ಟಿ ಲೆವೆಲ್ ಪಾರ್ಕಿಂಗ್ ಸೌಲಭ್ಯದ ಮಹಡಿಯಿಂದ ಕಾರು ಕೆಳಕ್ಕೆ ಬೀಳುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಇದು ಮೈ ಜುಂ ಎನ್ನಿಸುವಂತಿದೆ. ಚಾಲಕ ಆಕಸ್ಮಿಕವಾಗಿ ವಾಹನವನ್ನು ರಿವರ್ಸ್‌ ಓಡಿಸಿದಾಗ ಈ ಘಟನೆ ಸಂಭವಿಸಿದ್ದು, ಕಾರು ಗೋಡೆಯನ್ನು ಭೇದಿಸಿ ಮಹಡಿಯಿಂದ ನೆಲಕ್ಕೆ ಬಿದ್ದಿದೆ.
ಜನವರಿ 20 ರಂದು ರಾತ್ರಿ 10 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ವಾಹನ ಪಾರ್ಕಿಂಗ್ ಸೌಲಭ್ಯವು ಪುಣೆಯ ವಿಮಾನ ನಗರದಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿದೆ.
ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ, ಪುಣೆಯ ವಿಮಾನ ನಗರ ಸೊಸೈಟಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಕಾರು ಆಕಸ್ಮಿಕವಾಗಿ ರಿವರ್ಸ್ ಗೇರ್‌ನಲ್ಲಿ ಚಲಿಸತೊಡಗಿತು. ಮತ್ತು ಎರಡನೇ ಮಹಡಿಯಿಂದ ನೇರವಾಗಿ ಕೆಳಕ್ಕೆ ಧುಮುಕಿತು ಎಂದು ಎಕ್ಸ್‌ನಲ್ಲಿ ಬರೆಯಲಾಗಿದೆ.

ಮತ್ತೊಂದು ಕಾರ್ ಪಾರ್ಕಿಂಗ್ ಪ್ರದೇಶಕ್ಕೆ ಪ್ರವೇಶಿಸುತ್ತಿರವಾಗ ವೀಡಿಯೊ ಆರಂಭವಾಗುತ್ತದೆ. ಇದಾದ ಒಂದು ಸೆಕೆಂಡಿನಲ್ಲಿ, ಮತ್ತೊಂದು ಕಾರು ಹಿಮ್ಮುಖವಾಗಿ ಚಲಿಸಿ ಗೋಡೆಯನ್ನು ಭೇದಿಸಿ ಎರಡನೇ ಮಹಡಿಯಿಂದ ಕೆಳಗೆ ಬೀಳುತ್ತದೆ. ಈ ನಾಟಕೀಯ ಘಟನೆ ಕಣ್ಣೆದುರು ನಡೆದರೂ ಅಲ್ಲಿದ್ದವರಿಗೆ ಒಂದು ಕ್ಷಣ ಇದನ್ನು ನಂಬಲು ಸಾಧ್ಯವಾಗಲಿಲ್ಲ. ನಂತರ ಅವರು ನೆರವಿಗೆ ಧಾವಿಸಿದ್ದಾರೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲವಾದರೂ, ಕಾರು ಗೋಡೆಯನ್ನು ಅಷ್ಟು ಸುಲಭವಾಗಿ ಒಡೆದದ್ದು ಹೇಗೆ ಎಂದು ಗೋಡೆಯ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ್ದಾರೆ.
ಕಾರು ಕೆಳಗೆ ಬಿದ್ದ ಸ್ಥಳದಿಂದ ಕೆಲವೇ ಮೀಟರ್‌ಗಳ ದೂರದಲ್ಲಿ ಕೆಳಗೆ ನಿಂತಿದ್ದ ಭದ್ರತಾ ಸಿಬ್ಬಂದಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement