ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗಿ, ಡೊನಾಡ್ ಟ್ರಂಪ್ ನೇತೃತ್ವದ ಅಮೆರಿಕದ ಆಡಳಿತವು ಮರು ಮೌಲ್ಯಮಾಪನ ಮಾಡುವುದಕ್ಕಾಗಿ ಇಸ್ಲಾಮಾಬಾದ್‌ಗೆ ನೀಡುತ್ತಿದ್ದ ವಿದೇಶಿ ನೆರವನ್ನು ಸ್ಥಗಿತಗೊಳಿಸಿದೆ. ಅಧ್ಯಕ್ಷ ಟ್ರಂಪ್ ಹೊರಡಿಸಿದ ಕಾರ್ಯನಿರ್ವಾಹಕ ಆದೇಶವನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ನಿರ್ಧಾರವು ಪಾಕಿಸ್ತಾನದಲ್ಲಿ ಹಲವಾರು ಪ್ರಮುಖ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್ (USAID) ಯೋಜನೆಗಳನ್ನು ತಕ್ಷಣವೇ ನಿಲ್ಲಿಸಿದೆ ಎಂದು ಮಾಧ್ಯಮ ವರದಿಗಳು ಸೂಚಿಸಿವೆ. ಇದರಲ್ಲಿ ಸಾಂಸ್ಕೃತಿಕ ಸಂರಕ್ಷಣೆಗಾಗಿ ರಾಯಭಾರಿಗಳ ನಿಧಿ (AFCP) ಸಹ ಸೇರಿದೆ. ಎಎಫ್‌ಸಿಪಿ (AFCP) ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಉತ್ತೇಜಿಸುವ ಪ್ರಮುಖ ಕಾರ್ಯಕ್ರಮವಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಪ್ರಕಾರ, ಎಎಫ್‌ಸಿಪಿ ನಿಧಿಯು “ಐತಿಹಾಸಿಕ ಕಟ್ಟಡಗಳು, ಪುರಾತತ್ತ್ವ ಶಾಸ್ತ್ರದ ಸ್ಥಳಗಳು, ವಸ್ತುಸಂಗ್ರಹಾಲಯ ಸಂಗ್ರಹಣೆಗಳು ಮತ್ತು ಪ್ರಪಂಚದಾದ್ಯಂತದ ಸ್ಥಳೀಯ ಭಾಷೆಗಳು ಮತ್ತು ಕರಕುಶಲ ವಸ್ತುಗಳಂತಹ ಸಾಂಪ್ರದಾಯಿಕ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.
ಇಂಧನಕ್ಕೆ ಸಂಬಂಧಿಸಿದ ಐದು ಯೋಜನೆಗಳ ಮೇಲೆ ಪರಿಣಾಮ…
ಈ ನಿರ್ಧಾರದಿಂದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಐದು ಯೋಜನೆಗಳು ಕೂಡ ಸ್ಥಗಿತಗೊಂಡಿವೆ ಎಂದು ವರದಿ ತಿಳಿಸಿದೆ. ಪವರ್ ಸೆಕ್ಟರ್ ಇಂಪ್ರೂವ್‌ಮೆಂಟ್ ಆಕ್ಟಿವಿಟಿ, ಪಾಕಿಸ್ತಾನ್ ಪ್ರೈವೇಟ್ ಸೆಕ್ಟರ್ ಎನರ್ಜಿ ಆಕ್ಟಿವಿಟಿ, ಎನರ್ಜಿ ಸೆಕ್ಟರ್ ಅಡ್ವೈಸರಿ ಸರ್ವೀಸಸ್ ಪ್ರಾಜೆಕ್ಟ್, ಕ್ಲೀನ್ ಎನರ್ಜಿ ಲೋನ್ ಪೋರ್ಟ್ಫೋಲಿಯೋ ಗ್ಯಾರಂಟಿ ಪ್ರೋಗ್ರಾಂ ಮತ್ತು ಪಾಕಿಸ್ತಾನ್ ಕ್ಲೈಮೇಟ್ ಫೈನಾನ್ಸಿಂಗ್ ಆಕ್ಟಿವಿಟಿ ಈ ಐದು ಯೋಜನೆಗಳ ಮೇಲೆ ಪಾಕಿಸ್ತಾನಕ್ಕೆ ನೀಡುತ್ತಿದ್ದ ಅಮೆರಿಕದ ವಿದೇಶಿ ನೆರವಿನ ಸ್ಥಗಿತವು ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ನಾಲ್ಕು ಯೋಜನೆಗಳಿಗೂ ಹೊಡೆತ ಬಿದ್ದಿದೆ. ಅವುಗಳಲ್ಲಿ, ಸಾಮಾಜಿಕ ಸಂರಕ್ಷಣಾ ಚಟುವಟಿಕೆಯು 2025 ರಲ್ಲಿ ಕೊನೆಗೊಳ್ಳುವ ಏಕೈಕ ಕಾರ್ಯಕ್ರಮವಾಗಿದೆ. ಅಮೆರಿಕದ ಈ ಕ್ರಮವು ಆರೋಗ್ಯ, ಕೃಷಿ, ಜೀವನೋಪಾಯ ಮತ್ತು ಆಹಾರ ಭದ್ರತೆ, ಪ್ರವಾಹ, ಹವಾಮಾನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳ ಮೇಲೆ ಪರಿಣಾಮ ಬೀರಿದೆ.
ಜಿಯೋ ನ್ಯೂಸ್ ಪ್ರಕಾರ, ಈ ಕೆಲವು ಕಾರ್ಯಕ್ರಮಗಳು ಶಾಶ್ವತವಾಗಿ ಸ್ಥಗಿತಗೊಳ್ಳುತ್ತವೆ ಅಥವಾ ಗಮನಾರ್ಹವಾಗಿ ಕಡಿಮೆಯಾಗುತ್ತವೆ ಎಂಬ ಭಯವನ್ನು ವ್ಯಕ್ತಪಡಿಸಲಾಗುತ್ತಿದೆ. ಆದಾಗ್ಯೂ, ಅಮೆರಿಕದ ನೆರವು ಸ್ಥಗಿತದಿಂದ ಬಾಧಿತ ಯೋಜನೆಗಳ ಒಟ್ಟು ಮೌಲ್ಯವು ಎಷ್ಟು ಎಂಬುದು ತಿಳಿದಿಲ್ಲ, ಏಕೆಂದರೆ ಅಮೆರಿಕವು ಪ್ರಸ್ತುತ ಪಾಕಿಸ್ತಾನಕ್ಕೆ ಎಷ್ಟು ವಾರ್ಷಿಕ ನೆರವು ನೀಡುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಪಾಕಿಸ್ತಾನಕ್ಕೆ ನೆರವು ನಿಲುಗಡೆಯ ಪರಿಣಾಮವನ್ನು ಪಾಕಿಸ್ತಾನದ ಅಧಿಕಾರಿಗಳು ಇಲ್ಲಿಯವರೆಗೆ ದೃಢಪಡಿಸಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ