ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್‌ನಲ್ಲಿ ಶ್ವೇತಭವನದಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ಬುಧವಾರ ರಾತ್ರಿ 64 ಜನರಿದ್ದ ಅಮೆರಿಕನ್ ಏರ್‌ಲೈನ್ಸ್ ಪ್ರಾದೇಶಿಕ ಜೆಟ್ ಆಕಾಶದಲ್ಲಿ ಮಿಲಿಟರಿ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ನಂತರ ಕನಿಷ್ಠ ಪೊಟೊಮ್ಯಾಕ್ ನದಿಯಲ್ಲಿ ಬಿದ್ದಿದ್ದು, ನದಿಯಿಂದ 18 ಮಂದಿ ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿಯಾಗಿದೆ.
ವಿಮಾನ ಮತ್ತು ಹೆಲಿಕಾಪ್ಟರ್ ವಾಷಿಂಗ್ಟನ್‌ನ ಪೊಟೊಮ್ಯಾಕ್ ನದಿಗೆ ಅಪ್ಪಳಿಸುತ್ತಿದ್ದಂತೆ ರಾತ್ರಿಯ ಆಕಾಶವು ಬೃಹತ್ ಪಟಾಕಿ ಸಿಡಿದ ಬೆಳಕಿನಂತೆ ಕಾಣಿಸಿಕೊಂಡಿದ್ದನ್ನು ದೃಶ್ಯಗಳು ತೋರಿಸಿವೆ.
ಅಮೆರಿಕನ್ ಈಗಲ್ ಫ್ಲೈಟ್ 5342 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯೊಂದಿಗೆ ಕಾನ್ಸಾಸ್‌ನಿಂದ ವಾಷಿಂಗ್ಟನ್ ಡಿಸಿಗೆ ತೆರಳುತ್ತಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್‌ನಲ್ಲಿ ಮೂವರು ಸೈನಿಕರು ಇದ್ದರು, ಆದರೆ ಅದರಲ್ಲಿ ಯಾವುದೇ ಹಿರಿಯ ಅಧಿಕಾರಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಡರಲ್ ಏವಿಯೇಷನ್ ಅಥಾರಿಟಿ (ಎಫ್‌ಎಎ) ಪಿಎಸ್‌ಎ ಏರ್‌ಲೈನ್ಸ್ ನಿರ್ವಹಿಸುವ ವಿಮಾನವು ಸ್ಥಳೀಯ ಕಾಲಮಾನ ರಾತ್ರಿ 9 ಗಂಟೆಗೆ (0200 ಜಿಎಂಟಿ) ಲ್ಯಾಂಡಿಂಗ್ ಮಾಡಲು ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿರುವಾಗ ಸಿಕೋರ್ಸ್ಕಿ ಯುಹೆಚ್ -60 ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ.
ಅಮೇರಿಕನ್ ಏರ್‌ಲೈನ್ಸ್ ಹೇಳಿಕೆಯಲ್ಲಿ, “ನಮ್ಮ ಕಾಳಜಿಯು ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಸಂಬಂಧಿಸಿದೆ. ನಾವು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ತುರ್ತು ಪ್ರಯತ್ನಗಳಿಗೆ ಸಹಾಯ ಮಾಡುತ್ತಿದ್ದೇವೆ ಎಂದು ತಿಳಿಸಿದೆ.
ಅಮೆರಿಕನ್ ಏರ್‌ಲೈನ್ಸ್ ಅಂಗಸಂಸ್ಥೆ PSA ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಬೊಂಬಾರ್ಡಿಯರ್ ಪ್ರಾದೇಶಿಕ ಜೆಟ್ ರಾತ್ರಿ 9:00 ಗಂಟೆಗೆ (0200 GMT) ರೇಗನ್ ನಿಲ್ದಾಣದಲ್ಲಿ ಇಳಿಯಲು ಸಮೀಪಿಸುತ್ತಿದ್ದಾಗ ಆಗಸದಲ್ಲಿ ಸಿಕೋರ್ಸ್ಕಿ UH-60 ಹೆಲಿಕಾಪ್ಟರ್ ಡಿಕ್ಕಿ ಹೊಡೆದಿದೆ” ಎಂದು ಫೆಡರಲ್ ಏವಿಯೇಷನ್ ಅಥಾರಿಟಿ (FAA) ಹೇಳಿದೆ. ಇದು ಕನ್ಸಾಸ್‌ನ ವಿಚಿತಾದಿಂದ ಹೊರಟಿತ್ತು.
ಡಿಕ್ಕಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಫ್ಲೈಟ್‌ನ ರೇಡಿಯೋ ಟ್ರಾನ್ಸ್‌ಪಾಂಡರ್‌ನ ಡೇಟಾವು ವಿಮಾನವು ಸುಮಾರು 400 ಅಡಿ ಎತ್ತರದಲ್ಲಿತ್ತು ಗಂಟೆಗೆ ಸುಮಾರು 140 ಮೈಲುಗಳ ವೇಗದಲ್ಲಿತ್ತು ಎಂದು ತೋರಿಸುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ