ಲುಧಿಯಾನ : ಆಪಾದಿತ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಯಾಲಯವು ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಲೂಧಿಯಾನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ರಮಣ್‌ಪ್ರೀತ್ ಕೌರ್ ಅವರು ವಾರಂಟ್ ಹೊರಡಿಸಿದ್ದಾರೆ.
ಮೋಹಿತ್ ಶುಕ್ಲಾ ಎಂಬಾತ ತನಗೆ 10 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಆರೋಪಿಸಿ ಲೂಧಿಯಾನ ವಕೀಲ ರಾಜೇಶ ಖನ್ನಾ ಅವರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂದ್‌ಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಶುಕ್ಲಾ ಅವರು ನಕಲಿ ರಿಜಿಕಾ ನಾಣ್ಯವನ್ನು ಹೂಡಿಕೆ ಮಾಡಲು ಆಮಿಷ ಒಡ್ಡಿದ್ದರು ಎಂದು ವಕೀಲ ಖನ್ನಾ ಆರೋಪಿಸಿದ್ದಾರೆ ಮತ್ತು ಈ ವಿಷಯದಲ್ಲಿ ನಟ ಸಾಕ್ಷಿಯಾಗಬೇಕಿತ್ತು.
ಬಾಲಿವುಡ್ ನಟ ಸೋನು ಸೂದ್‌ಗೆ ಲೂಧಿಯಾನ ನ್ಯಾಯಾಲಯವು ಗುರುವಾರ ವಂಚನೆ ಪ್ರಕರಣದಲ್ಲಿ ಸಾಕ್ಷ್ಯ ಹೇಳುವುದಕ್ಕೆ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.
ಸೋನು ಸೂದ್‌ಗೆ ಅನಕ ಬಾರಿ ಸಮನ್ಸ್ ನೀಡಿದರೂ ಅವರು ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಲಯವು ಬಂದನದ ವಾರಂಟ್ ಹೊರಡಿಸಿದೆ.
ಲೂಧಿಯಾನದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಮಣ್‌ಪ್ರೀತ್ ಕೌರ್ ಅವರು ವಾರಂಟ್ ಹೊರಡಿಸಿದ್ದಾರೆ. ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಓಶಿವಾರಾ ಪೊಲೀಸ್ ಠಾಣೆಗೆ ವಾರಂಟ್ ಕಳುಹಿಸಲಾಗಿದ್ದು, ಸೋನು ಸೂದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಲಾಗಿದೆ. ತನ್ನ ಆದೇಶದಲ್ಲಿ, ಲೂಧಿಯಾನ ನ್ಯಾಯಾಲಯವು ಸೋನು ಸೂದ್ ಅವರನ್ನು ಬಂಧಿಸುವಂತೆ ಮುಂಬೈನ ಅಂಧೇರಿ ಪಶ್ಚಿಮದ ಓಶಿವಾರಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಗೆ ಸೂಚಿಸಿದೆ.ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 10 ರಂದು ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ