ಹೈದರಾಬಾದ್ ; 86 ವರ್ಷದ ಹೈದರಾಬಾದ್ ಮೂಲದ ಉದ್ಯಮಿ ವೆಲಮಟಿ ಸಿ. ಜನಾರ್ದನ ರಾವ್ ಅವರನ್ನು ಅವರ ಬೇಗಂಪೇಟೆ ನಿವಾಸದಲ್ಲಿ ಅವರ ಮೊಮ್ಮಗನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅವರ ಪಿತ್ರಾರ್ಜಿತ ಆಸ್ತಿಗಾಗಿ ಈ ಹತ್ಯೆ ನಡೆದಿದೆ.
ಕಿಲಾರು ಕೀರ್ತಿ ತೇಜ (೨೯) ಫೆಬ್ರವರಿ 6 ರಂದು ರಾತ್ರಿ ತನ್ನ ಅಜ್ಜನಿಗೆ ಚಾಕುವಿನಿಂದ ಇರಿದಿದ್ದಾನೆ. ಫೆಬ್ರವರಿ 8ರ ಶನಿವಾರದಂದು ತೇಜಾನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಏಲೂರು ಮೂಲದ ಜನಾರ್ದನ ರಾವ್ ಅವರು ವೆಲ್ಜನ್ ಗ್ರೂಪ್ ಆಫ್ ಕಂಪನಿಗಳ ಮುಖ್ಯಸ್ಥರಾಗಿದ್ದರು. ವರದಿಗಳ ಪ್ರಕಾರ, ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ವಾದ ವಿವಾದದ ನಂತರ ಅವರ ಮೊಮ್ಮಗ ತೇಜ ಚಾಕುವಿನಿಂದ ಅವರನ್ನು 73 ಬಾರಿ ಇರಿದಿದ್ದಾನೆ. ಮರಣೋತ್ತರ ಪರೀಕ್ಷೆ (PME) ನಂತರ ಎಷ್ಟು ಬಾರಿ ಇರದಿದ್ದಾನೆ ಎಂಬುದು ನಿಖರವಾಗಿ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತನ್ನ ತಾಯಿಯೊಂದಿಗೆ ಅಜ್ಜನ ಮನೆಗೆ ಹೋಗಿದ್ದ. ಆತ ತನ್ನ ತಾಯಿಗೂ ಗಾಯಗೊಳಿಸಿದ್ದಾನೆ. ತಾಯಿ ಹಲ್ಲೆಯನ್ನು ತಡೆಯಲು ಮುಂದಾದಾಗ ತೇಜ ತಾಯಿಗೂ ಚಾಕುವಿನಿಂದ ಇರಿದಿದ್ದಾನೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಂಜಗುಟ್ಟ ಪೊಲೀಸರು ತಿಳಿಸಿದ್ದಾರೆ.
ಆಸ್ತಿ ವಿವಾದ
ನಗರದ ಇನ್ನೊಂದು ಭಾಗದಲ್ಲಿ ನೆಲೆಸಿರುವ ತೇಜ ಮತ್ತು ಆತನ ತಾಯಿ ಗುರುವಾರ ಸೋಮಾಜಿಗುಡದಲ್ಲಿರುವ ಜನಾರ್ದನ ರಾವ್ ಮನೆಗೆ ಭೇಟಿ ನೀಡಿದ್ದರು. ತಾಯಿ ಕಾಫಿ ಕುಡಿಯಲು ಹೋದಾಗ ತೇಜ ಮತ್ತು ರಾವ್ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಜಗಳ ನಡೆದಿದೆ.
ಮೊಮ್ಮಗ ಚಾಕು ತೆಗೆದುಕೊಂಡು ತನ್ನ ಅಜ್ಜನ ಮೇಲೆ ‘ಆಕ್ರಮಣ’ ಮಾಡಿದ್ದಾನೆ, ಬಾಲ್ಯದಿಂದಲೂ ತನ್ನ ಬಗ್ಗೆ ಅಸಡ್ಡೆ ತೋರಿದ್ದಾರೆ ಮತ್ತು ಆಸ್ತಿಯನ್ನು ತನಗೆ ಹಂಚಲು ನಿರಾಕರಿಸಿದ್ದಾರೆ ಎಂದು ತೇಜ ಆರೋಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಇತ್ತೀಚೆಗಷ್ಟೇ ಸ್ನಾತಕೋತ್ತರ ಪದವಿ ಮುಗಿಸಿ ಅಮೆರಿಕದಿಂದ ಹೈದರಾಬಾದ್‌ಗೆ ಮರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
1965 ರಲ್ಲಿ ಸ್ಥಾಪಿತವಾದ ವೆಲ್ಜಾನ್ ಕಂಪನಿಯ ವೆಬ್‌ಸೈಟ್ ಅದು ಪ್ರಕಾರ ಹಡಗು ನಿರ್ಮಾಣ, ಇಂಧನ, ಮೊಬೈಲ್ ಮತ್ತು ಕೈಗಾರಿಕಾ ವಿಭಾಗಗಳು ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳಿಗೆ ಸಂಪೂರ್ಣ ಪರಿಹಾರಗಳನ್ನು ಒದಗಿಸುವಲ್ಲಿ ಪರಿಣತಿಯನ್ನು ಹೊಂದಿದೆ. “ಭಾರತದ ಹೈದರಾಬಾದ್‌ನಲ್ಲಿ ಮತ್ತು ಸಮೀಪದಲ್ಲಿರುವ ವಿವಿಧ ಉತ್ಪಾದನಾ ಘಟಕಗಳಲ್ಲಿ ಐದು ದಶಕಗಳಿಂದೀಚೆಗೆ ವ್ಯಾಪಕ ಶ್ರೇಣಿಯ ನ್ಯೂಮ್ಯಾಟಿಕ್ ಮತ್ತು ಹೈಡ್ರಾಲಿಕ್ ಉತ್ಪನ್ನಗಳು, ಘಟಕಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ತಯಾರಿಸುವಲ್ಲಿ ವೆಲ್ಜನ್ ಕಂಪನಿ ಅಪಾರ ಅನುಭವ ಹೊಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ