ವೀಡಿಯೊಗಳು…| ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್‌..! ಮಹಾಕುಂಭದಿಂದ 300 ಕಿಮೀ ವರೆಗೆ ಟ್ರಾಫಿಕ್ ಜಾಮ್ ; ಪ್ರಯಾಗರಾಜ್‌ ವಾಹನಗಳ ಸಮುದ್ರ…!!

ಮಹಾಕುಂಭಮೇಳ 2025 ಕ್ಕೆ ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ಲಕ್ಷಾಂತರ ಭಕ್ತರು ಹರಿದುಬರುತ್ತಿರುವುದರಿಂದ, ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಅಭೂತಪೂರ್ವಸಂಚಾರ ದಟ್ಟಣೆಗೆ ಸಾಕ್ಷಿಯಾಗುತ್ತಿದೆ,
ಸುಮಾರು 300 ಕಿಲೋಮೀಟರ್ ದೂರದ ವರೆಗೆ ಟ್ರಾಫಿಕ್ ಜಾಮ್‌ ಉಂಟಾಗಿದೆ. ಪ್ರಯಾಗರಾಜ್ ಮಹಾಕುಂಭಮೇಳ ವಾಹನಗಳ ಸಮುದ್ರದಂತೆ ಭಾಸವಾಗುತ್ತಿದ್ದು, ಲಕ್ಷಾಂತರ ಜನರು ಟ್ರಾಫಿಕ್‌ರು ಜಾಮ್‌ಗಳಲ್ಲಿ ಭಾನುವಾರ ಸಿಲುಕಿಕೊಂಡಿದ್ದಾರೆ.
ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಭಕ್ತರು ನಗರಕ್ಕೆ ಬರುತ್ತಿದ್ದಾರೆ. ಟ್ರಾಫಿಕ್‌ ಜಾಮ್‌ನಿಂದಾಗಿ ವಿಶ್ವದ ಅತಿ ದೊಡ್ಡ ಧಾರ್ಮಿಕ ಸಭೆಯತ್ತ ಸಾಗುತ್ತಿರುವವರು ತಮ್ಮ ಗಮ್ಯಸ್ಥಾನದಿಂದ ಮೈಲುಗಳಷ್ಟು ದೂರದಲ್ಲಿಯೇ ತಮ್ಮ ವಾಹನಗಳಲ್ಲಿ ಸಿಕ್ಕಿಬಿದ್ದಿದ್ದಾರೆ.

ಭಾನುವಾರ ಸಾವಿರಾರು ವಾಹನಗಳು ಬೃಹತ್ ಜಾಮ್‌ನಲ್ಲಿ ಸಿಲುಕಿಕೊಂಡವು, ವಾಹನಗಳಿಗೆ ಒಂದು ಇಂಚು ಚಲಿಸುವುದು ಕಷ್ಟವಾಯಿತು ಮತ್ತು ಕೇವಲ ಬಸವನಹುಳುವಿನ ವೇಗದಲ್ಲಿ ಚಲಿಸಿದವು. ಟ್ರಾಫಿಕ್ ಜಾಮ್ 200 ರಿಂದ 300 ಕಿಲೋಮೀಟರ್ ದೂರದ ವರೆಗೆ ವರೆಗೆ ವ್ಯಾಪಿಸಿದ್ದರಿಂದ ಪ್ರಯಾಗರಾಜ್‌ ಕಡೆಗೆ ಚಲಿಸುವುದು ಅಸಾಧ್ಯ ಎಂದು ಮಧ್ಯಪ್ರದೇಶದ ಮೈಹಾರ್ ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ರೇವಾದ ಚಕ್‌ಘಾಟ್‌ನಲ್ಲಿ ಕಟ್ನಿಯಿಂದ ಮಧ್ಯಪ್ರದೇಶ-ಉತ್ತರ ಪ್ರದೇಶ ಗಡಿಯವರೆಗಿನ 250 ಕಿ.ಮೀ ವ್ಯಾಪ್ತಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
“ಜಬಲಪುರದಿಂದ ಮೊದಲು 15 ಕಿಮೀ ಟ್ರಾಫಿಕ್ ಜಾಮ್ ಆಗಿದೆ… ಪ್ರಯಾಗರಾಜ್‌ಗೆ ಇನ್ನೂ 400 ಕಿಮೀ. ದೂರವಿದೆ. ಮಹಾಕುಂಭಕ್ಕೆ ಬರುವ ಮೊದಲು ದಯವಿಟ್ಟು ಟ್ರಾಫಿಕ್ ಪರಿಸ್ಥಿತಿಯನ್ನು ಓದಿ ” ಎಂದು ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವಾಹನ ದಟ್ಟಣೆಯ ಬಗ್ಗೆ ಬರೆದಿದ್ದಾರೆ.

ಭಾರಿ ದಟ್ಟಣೆ ಮತ್ತು ಜನದಟ್ಟಣೆಯನ್ನು ತಪ್ಪಿಸಲು ಮಧ್ಯಪ್ರದೇಶದ ವಿವಿಧ ಪ್ರದೇಶಗಳಲ್ಲಿ ಪ್ರಯಾಗರಾಜ್‌ಗೆ ಹೋಗುವ ನೂರಾರು ವಾಹನಗಳನ್ನು ನಿಲ್ಲಿಸಲಾಯಿತು. ಮಧ್ಯಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ವಾಹನ ಸಂಚಾರವನ್ನು ನಿಲ್ಲಿಸಿದ ಪೊಲೀಸರು ಸುರಕ್ಷಿತ ತಾಣ ಹುಡುಕುವಂತೆ ಜನರಿಗೆ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿನ ಹಲವಾರು ವೀಡಿಯೊಗಳು ಮಧ್ಯಪ್ರದೇಶದ ಕಟ್ನಿ, ಜಬಲಪುರ, ಮೈಹಾರ್ ಮತ್ತು ರೇವಾ ಜಿಲ್ಲೆಗಳಾದ್ಯಂತ ರಸ್ತೆಗಳಲ್ಲಿ ಲಕ್ಷಾಂತರ ಕಾರುಗಳು ಮತ್ತು ಟ್ರಕ್‌ಗಳ ಬೃಹತ್ ಸರತಿ ಸಾಲುಗಳನ್ನು ತೋರಿಸುತ್ತವೆ.

ಕಟ್ನಿ ಜಿಲ್ಲೆಯ ಪೊಲೀಸ್ ವಾಹನಗಳು ಸೋಮವಾರದವರೆಗೆ ವಾಹನ ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಘೋಷಿಸಿದ್ದಾರೆ. ಮೈಹಾರ್ ಪೊಲೀಸರು ವಾಹನಗಳಿಗೆ ಕಟ್ನಿ ಮತ್ತು ಜಬಲ್‌ಪುರ ಕಡೆಗೆ ಹಿಂತಿರುಗಿ ಎಂದು ಹೇಳಿದ್ದು, ಅಲ್ಲಿಯೇ ಇರುವಂತೆ ಸೂಚಿಸಿದ್ದಾರೆ.
“ಕುಂಭದಲ್ಲಿ ಬಹುಶಃ ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್‌ನಲ್ಲಿ (15-20 ಕಿಮೀ) ಸಿಕ್ಕಿಬಿದ್ದಿದ್ದೇವೆ.. ಪ್ರಯಾಗರಾಜ್‌ ಸಂಪೂರ್ಣವಾಗಿ ಗ್ರಿಡ್ಲಾಕ್ ಆಗಿದೆ” ಎಂದು ಸೋಮವಾರ ಮುಂಜಾನೆ ಪೋಸ್ಟ್‌ನಲ್ಲಿ ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.
ಜನವರಿ 13 ರಂದು ಧಾರ್ಮಿಕ ಸಭೆ ಪ್ರಾರಂಭವಾದಾಗಿನಿಂದ 43 ಕೋಟಿಗೂ ಹೆಚ್ಚು ಭಕ್ತರು ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಕಾರ್ಯಕ್ರಮವು ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿದೆ.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement