ಟ್ರಂಪ್‌-ಮೋದಿ ಭೇಟಿ | 5ನೇ ಜನರೇಷನ್‌ ಜೆಟ್‌, ಮಿಷನ್‌ 500…; ಭಾರತ-ಅಮೆರಿಕದ ಮಧ್ಯೆ ಹಲವಾರು ಒಪ್ಪಂದಗಳು…

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಭೇಟಿಯಾಗಿ ರಕ್ಷಣೆ, ವ್ಯಾಪಾರ, ತಂತ್ರಜ್ಞಾನ ಮತ್ತು ಇಂಧನಕ್ಕೆ ಸಂಬಂಧಿಸಿದ ವಿಷಯಗಳ ಉನ್ನತ ಮಟ್ಟದ ಚರ್ಚೆ ನಡೆಸಿದರು.
ಭಾರತ ಸೇರಿದಂತೆ ಅಮೆರಿಕದ ಎಲ್ಲಾ ವ್ಯಾಪಾರ ಪಾಲುದಾರರನ್ನು ಗುರಿಯಾಗಿಸಿಕೊಂಡು ಅಧ್ಯಕ್ಷ ಟ್ರಂಪ್ ಹೊಸ ಪರಸ್ಪರ ಸುಂಕ ನೀತಿಯನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ ಉಭಯ ನಾಯಕರ ಸಭೆ ನಡೆಯಿತು.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರ ಸಭೆಯಲ್ಲಿ ರಕ್ಷಣೆ, ಹೂಡಿಕೆ, ವ್ಯಾಪಾರ, ಇಂಧನ, ನಾವೀನ್ಯತೆ ಮತ್ತು ಬಹುಪಕ್ಷೀಯ ಪಾಲುದಾರಿಕೆಗಳ ಕುರಿತು ದ್ವಿಪಕ್ಷೀಯ ಸಹಕಾರದ ಗುರಿಯನ್ನು ಹೊಂದಿರುವ ಇದಕ್ಕೆ ಕ್ಯಾಂಪಾಕ್ಟ್‌ (ಮಿಲಿಟರಿ ಪಾಲುದಾರಿಕೆ, ವೇಗವರ್ಧಿತ ವಾಣಿಜ್ಯ ಮತ್ತು ತಂತ್ರಜ್ಞಾನಕ್ಕಾಗಿ 21 ನೇ ಶತಮಾನಕ್ಕೆ ವೇಗವರ್ಧಕ ಅವಕಾಶಗಳು) ಎಂದು ಹೆಸರಿಸಲಾಗಿದೆ.
ಪ್ರಧಾನಿ ಮೋದಿ-ಟ್ರಂಪ್ ಭೇಟಿಯ ಪ್ರಮುಖ ಘೋಷಣೆಗಳು
ರಕ್ಷಣೆ :
ಅಮೆರಿಕಾ ಭಾರತ ನಡುವಿನ ಪ್ರಮುಖ ರಕ್ಷಣಾ ಭಾಗೀದಾರಿಕೆಗೆ ಈ ವರ್ಷದ ಕೊನೆಯಲ್ಲಿ ಹತ್ತು ವರ್ಷಗಳ ಕಾರ್ಯಸೂಚಿಗೆ ಸಹಿ ಹಾಕಲಾಗುತ್ತದೆ.
ತಂತ್ರಜ್ಞಾನಗಳ ವಿನಿಮಯ ಮತ್ತು ರಕ್ಷಣಾ ಬಿಡಿ ಭಾಗಗಳ ಪೂರೈಕೆ ನಿಯಮಗಳ ಇನ್ನಷ್ಟು ಸಡಿಲಿಕೆಗಾಗಿ, ಶಸ್ತ್ರಾಸ್ತ್ರಗಳ ನಿಯಂತ್ರಣಗಳ ಅಂತಾರಾಷ್ಟ್ರೀಯ ಸಾಗಾಟ (ಐಟಿಎಆರ್) ವನ್ನು ಪುನರ್ ಪರಿಶೀಲಿಸಲಾಗುತ್ತದೆ.
ಬಾಹ್ಯಾಕಾಶ, ಏರ್ ಡಿಫೆನ್ಸ್, ಕ್ಷಿಪಣಿ ನೌಕೆಗಳು ಮತ್ತು ಸಾಗರದಾಳದ ಯುದ್ಧ ನೌಕೆಗಳ ತಂತ್ರಜ್ಞಾನ ವಿನಿಮಯ ಮತ್ತು ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡುವುದು.
ಸಾಗರದಾಳ ಕ್ಷೇತ್ರದ ಅರಿವಿನ ವಿಚಾರದಲ್ಲಿ ಕೈಗಾರಿಕಾ ಭಾಗೀದಾರಿಕೆ ತಂತ್ರಜ್ಞಾನ ಅಭಿವೃದ್ಧಿಗಾಗಿ ಭಾರತ ಮತ್ತು ಅಮೆರಿಕಾ ಕೈಗಾರಿಕಾ ಮೈತ್ರಿಗೆ ಸ್ವಾಯತ್ತ ವ್ಯವಸ್ಥೆ (ಎ.ಎಸ್.ಐ.ಎ)ಯನ್ನು ಪ್ರಾರಂಭಿಸಲು ಸಮ್ಮತಿ ಸೂಚಿಸಲಾಗಿದೆ. ಯುಡಿಎ ತಂತ್ರಜ್ಞಾನಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ವಿಚಾರದಲ್ಲಿ ಅಮೆರಿಕಾದೊಂದಿಗೆ ಕೈಜೋಡಿಸಲಿರುವ ಏಕೈಕ ದೇಶ ಭಾರತವಾಗಲಿದೆ.
ಸಾಗರ ಗಸ್ತು ಸ್ವಾಯತ್ತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಹಾಗೂ ಉತ್ಪಾದಿಸಲು ಎರಡೂ ದೇಶಗಳ ನಡುವೆ ಚರ್ಚೆ ಪ್ರಗತಿಯಲ್ಲಿದೆ. ಬಾಹ್ಯಾಕಾಶ, ವಾಯು ರಕ್ಷಣೆ, ಕ್ಷಿಪಣಿ, ಕಡಲ ಮತ್ತು ಸಮುದ್ರದೊಳಗಿನ ರಕ್ಷಣಾ ತಂತ್ರಜ್ಞಾನದ ಸಹಯೋಗದ ವೇಗವರ್ಧನೆ, ಐದನೇ ತಲೆಮಾರಿನ ಫೈಟರ್ ಜೆಟ್‌ಗಳು ಮತ್ತು ಸಮುದ್ರದೊಳಗಿನ ಯುದ್ಧ ವ್ಯವಸ್ಥೆಗಳನ್ನು ಭಾರತಕ್ಕೆ ನೀಡುವ ನೀತಿ ನಿರೂಪಣೆಯನ್ನು ಅಮೆರಿಕ ಘೋಷಿಸಿತು.

ಪ್ರಮುಖ ಸುದ್ದಿ :-   ಚಿನ್ನ ಕಳ್ಳಸಾಗಣೆ ಪ್ರಕರಣ : ಕಸ್ಟಡಿಯಲ್ಲಿ ನನಗೆ ಚಿತ್ರಹಿಂಸೆ, 10-15 ಬಾರಿ ಕಪಾಳಮೋಕ್ಷ ; ರನ್ಯಾ ರಾವ್ ಆರೋಪ

ವ್ಯಾಪಾರ
ಉಭಯ ನಾಯಕರು 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು $500 ಶತಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಇದಕ್ಕೆ “ಮಿಷನ್ 500” — ಎಂದು ಹೆಸರಿಡಲಾಗಿದೆ.
ಹಲವಾರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ವ್ಯವಹಾರ ಒಪ್ಪಂದಕ್ಕೆ ಬರಲಾಗಿದೆ. ಇದು ಟ್ರಂಪ್‌ ಅವರ ವಿವಾದಾತ್ಮಕ ಸುಂಕ ನೀತಿಯೂ ಒಳಗೊಂಡಿದೆ.
ಅಮೆರಿಕಾದಲ್ಲಿ 7.355 ಬಿಲಿಯನ್ ಡಾಲರ್ ಗಳ ಭಾರತದ ಹೂಡಿಕೆಯಿಂದ 3 ಸಾವಿರ ಉನ್ನತ ಮಟ್ಟದ ಕೆಲಸಗಳಿಗೂ ಇದು ಸಹಕಾರಿಯಾಗಲಿದೆ.
ಕೆಲವು ಪ್ರಮುಖ ಆರ್ಥಿಕ ಒಪ್ಪಂದಗಳು 2025 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (BTA) ಆಗಿದ್ದು, ಬಹು ವಲಯಗಳನ್ನು ಒಳಗೊಳ್ಳುತ್ತವೆ ಮತ್ತು ವಿವಾದಾತ್ಮಕ ಪರಸ್ಪರ ಸುಂಕಗಳು ಸೇರಿದಂತೆ ವ್ಯಾಪಾರ ಅಡೆತಡೆಗಳನ್ನು ನಿವಾರಿಸುವ ಉದ್ದೇಶವನ್ನು ಹೊಂದಿವೆ.
ಜಾಗತಿಕ ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಟ್ರಂಪ್ ವಿಧಿಸಿರುವ ಶೇಕಡಾ 25 ರಷ್ಟು ಸುಂಕದ ಹಿನ್ನೆಲೆಯಲ್ಲಿ ವ್ಯಾಪಾರದ ಚರ್ಚೆಗಳು ನಡೆದವು, ಯಾಕೆಂದರೆ ಇದು ಭಾರತೀಯ ರಫ್ತುಗಳ ಮೇಲೆ ಪರಿಣಾಮ ಬೀರಬಹುದಾಗಿದೆ.
ತಂತ್ರಜ್ಞಾನ
ಭಾರತ ಮತ್ತು ಅಮೆರಿಕಾ ಟ್ರಸ್ಟ್ (ಟ್ರಾನ್ಸ್‌ಫಾರ್ಮಿಂಗ್ ದಿ ರಿಲೇಶನ್‌ಶಿಪ್ ಯುಟಿಲೈಸಿಂಗ್ ಸ್ಟ್ರಾಟೆಜಿಕ್ ಟೆಕ್ನಾಲಜಿ”)’ ಎಂಬ ಹೆಸರಿನಲ್ಲಿ ಉಪಕ್ರಮವನ್ನು ಘೋಷಣೆ ಮಾಡಿದ್ದು, ಇದರಡಿಯಲ್ಲಿ ಸರಕಾರಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಖಾಸಗಿ ವಲಯದಲ್ಲಿ ಸಂಕೀರ್ಣ ಮತ್ತು ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಎರಡೂ ರಾಷ್ಟ್ರಗಳು ಭಾಗೀದಾರಿಕೆ ವಹಿಸಿಕೊಳ್ಳಲಿವೆ.
ಈ ವರ್ಷದ ಕೊನೆಯಲ್ಲಿ ಭಾರತ-ಅಮೆರಿಕ ನಡುವೆ ಎಐ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಪಿಳಿಗೆಯ ಮಾಹಿತಿ ಕೇಂದ್ರಗಳು ಮತ್ತು ಎಐ ಆಧಾರಿತ ಭಾಗೀದಾರಿಕೆಯನ್ನೂ ಸಹ ಘೋಷಿಸಲಾಗಿದೆ.
ಬಾಹ್ಯಾಕಾಶ, ಶಕ್ತಿ ಮತ್ತು ಬಯೋಟೆಕ್ನಾಲಜಿಯಲ್ಲಿ ಇಂಡಸ್ಟ್ರಿ-ಅಕಾಡಮಿಕ್ ಭಾಗೀದಾರಿಕೆಯನ್ನು ಅಭಿವೃದ್ಧಿಪಡಿಸಲು ಇಂಡಸ್ ಇನ್ನೋವೇಶನ್ ಎಂಬ ನೀತಿಯನ್ನು ಜಾರಿಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.
ಅಲ್ಲದೆ, ಇಂಧನ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತ ಅಮೆರಿಕ ಪಾಲುದಾರಿಕೆಯಲ್ಲಿ ಹಲವಾರು ಯೊಜನೆ ಮತ್ತು ಪ್ರಾಜೆಕ್ಟ್ ಗಳನ್ನು ಹಂತಹಂತವಾಗಿ ಕಾರ್ಯಗತಗೊಳಿಸಲು ಈ ಉಭಯ ನಾಯಕರ ಭೇಟಿಯ ವೇಳೆ ಮಾತುಕತೆ ನಡೆದಿದೆ.
ಅಮೆರಿಕದಲ್ಲಿ ಭಾರತೀಯ ಔಷಧೀಯ ತಯಾರಿಕೆಯ ವಿಸ್ತರಣೆ, ವಿಶೇಷವಾಗಿ ನಿರ್ಣಾಯಕ ಔಷಧಿಗಳ ತಯಾರಿಗೆ ಒತ್ತು ನೀಡಲು ನಿರ್ಧರಿಸಲಾಯಿತು.
ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಂಶೋಧನಾ ಸಹಯೋಗವನ್ನು ಹೆಚ್ಚಿಸಲು US ನ್ಯಾಷನಲ್ ಸೈನ್ಸ್ ಫೌಂಡೇಶನ್ (NSF) ಮತ್ತು ಭಾರತದ ಅನುಸಂಧಾನ್‌ ನ್ಯಾಷನಲ್ ರಿಸರ್ಚ್ ಫೌಂಡೇಶನ್ (ANRF) ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಪ್ರಮುಖ ಸುದ್ದಿ :-   ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ಶಕ್ತಿ
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರು ಭಾರತ-ಅಮೆರಿಕದ ಎನರ್ಜಿ ಸೆಕ್ಯುರಿಟಿ ಸಹಭಾಗಿತ್ವಕ್ಕೆ ಮರು ಬದ್ಧತೆ ತೋರಿದ್ದಾರೆ, ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿಯಲ್ಲಿ (ಐಇಎ) ಭಾರತದ ಪೂರ್ಣ ಸದಸ್ಯತ್ವವನ್ನು ಬೆಂಬಲಿಸುವ ಯೋಜನೆ ಇದೆ.
ಭಾರತದಲ್ಲಿ ಅಮೆರಿಕವು-ವಿನ್ಯಾಸಗೊಳಿಸಿದ ಪರಮಾಣು ರಿಯಾಕ್ಟರ್‌ಗಳನ್ನು ಸಕ್ರಿಯಗೊಳಿಸುವ ಮೂಲಕ ಭಾರತ-ಯುಎಸ್ 123 ನಾಗರಿಕ ಪರಮಾಣು ಒಪ್ಪಂದ ಮುಂದುವರಿಯಲಿದೆ. ಪರಮಾಣು ಶಕ್ತಿ ಉತ್ಪಾದನೆಯನ್ನು ಹೆಚ್ಚಿಸಲು ಸುಧಾರಿತ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳಲ್ಲಿ ಸಹಭಾಗಿತ್ವದ ಬಗ್ಗೆ ಚರ್ಚೆ ನಡೆದಿದೆ.
ವಲಸಿಗ ಭಾರತೀಯರ ಬಗ್ಗೆ ಒಪ್ಪಂದ 
ಅಮೆರಿಕದಲ್ಲಿರುವ 3,00,000ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿ ಸಮುದಾಯವು ಆರ್ಥಿಕತೆಗೆ ವಾರ್ಷಿಕವಾಗಿ $8 ಶತಕೋಟಿಗೂ ಹೆಚ್ಚು ಕೊಡುಗೆ ನೀಡುತ್ತದೆ.
ಅಕ್ರಮ ವಲಸೆ ಮತ್ತು ಮಾನವ ಕಳ್ಳಸಾಗಣೆಯನ್ನು ತಡೆಯಲು ಕಠಿಣ ಕ್ರಮ.
ಸಂಘಟಿತ ಅಪರಾಧ, ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಕಾನೂನು ಜಾರಿ ಸಂಬಂಧಗಳನ್ನು ಬಲಪಡಿಸುವುದು.
ಬಹುಪಕ್ಷೀಯ ಸಹಕಾರ
ಭಯೋತ್ಪಾದನಾ ನಿಗ್ರಹದ ಕುರಿತು, ಭಯೋತ್ಪಾದಕ ಜಾಲಗಳ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನ ವಿಫಲವಾಗಿರುವುದನ್ನು ಎರಡೂ ದೇಶಗಳು ಖಂಡಿಸಿವೆ.
26/11 ಅಪರಾಧಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಲಾಗಿದೆ ಎಂದು ಅಧ್ಯಕ್ಷ ಟ್ರಂಪ್ ಪ್ರಕಟಿಸಿದ್ದಾರೆ.
ಟೆಕ್ ದೈತ್ಯ ಮೆಟಾದ 50,000 ಕಿಮೀ ಸಮುದ್ರದೊಳಗಿನ ಕೇಬಲ್ ಯೋಜನೆ ಪ್ರಕಟಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement