ಕಾರವಾರ: ಕಳೆದ ವರ್ಷ ಮಳೆಗಾಲದ ಸಮಯದಲ್ಲಿ ಕೆಲಭಾಗ ಕುಸಿದುಬಿದ್ದಿದ್ದ ಕಾರವಾರದ ಕಾಳಿ ನದಿಯ ಹಳೆಯ ಕಾಳಿ ಸೇತುವೆ ಸೇತುವೆ ಕಂಬ ದಿಢೀರ್ ಕುಸಿದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸೇತುವೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ರಾತ್ರಿಹೊತ್ತು ಕಂಬ ಮುರಿದು ಬಿದ್ದಿದ್ದರಿಂದ ಬಾರಿ ಅನಾಹುತ ತಪ್ಪಿದೆ. ತಡರಾತ್ರಿ ಏಕಾಏಕಿಯಾಗಿ ಸೇತುವೆಯ ಪಿಲ್ಲರ್ ಕೆಳಭಾಗ ಅರ್ಧ ತುಂಡಾಗಿದೆ. ಪಿಲ್ಲರ್ ಒಂದು ಭಾಗ ಕುಸಿದು ಬಿದ್ದಿದ್ದು, ಸ್ಲ್ಯಾಬ್ ಮೇಲೆದ್ದಿದೆ.
ಸುಮಾರು 35-40 ಮೀಟರ್ ಉದ್ದದ ಸೇತುವೆಯ ಭಾಗ ಸೇತುವೆ ಮೇಲ್ಮುಖವಾಗಿ ವಾಲಿ ನಿಂತುಕೊಂಡಿದೆ. ಒಂದು ವೇಳೆ ಈಗ ಮುರಿದ ಸೇತುವೆಯ ಭಾಗ ಹೊಸ ಸೇತುವೆಗೆ ಅಪ್ಪಳಿಸಿದ್ದರೆ ಅದು ಹಾನಿಯಾಗುವ ಸಾಧ್ಯತೆಯಿತ್ತು ಎಂದು ಹೇಳಲಾಗಿದೆ.
ಕಳೆದ ವರ್ಷ ಆಗಷ್ಟ್ 7 ರಂದು ಕಾಳಿ ಸೇತುವೆ ಕುಸಿತಗೊಂಡು ಸೇತುವೆ ಮೇಲೆ ಚಲಿಸುತ್ತಿದ್ದ ಲಾರಿ ನದಿಯಲ್ಲಿ ಮುಳುಗಡೆಯಾಗಿತ್ತು. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಮುರಿದುಬಿದ್ದ ಸೇತುವೆಯ ತೆರವು ಮಾಡುವ ಕಾರ್ಯ ಕಳೆದ ನಾಲ್ಕೈದು ತಿಂಗಳಿಂದ ನಿರಂತರವಾಗಿ ನಡೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ