ವೀಡಿಯೊ…| ಬೃಹತ್‌ ತಿಮಿಂಗಿಲ ತನ್ನ ಮಗನನ್ನು ನುಂಗಿದ ಭಯಾನಕ ಕ್ಷಣ ವೀಡಿಯೊ ಮಾಡುತ್ತಿದ್ದ ತಂದೆ…! ಮುಂದಾಗಿದ್ದು ಮಾತ್ರ…..ವೀಕ್ಷಿಸಿ

ಚಿಲಿಯ ಬಹಿಯಾ ಎಲ್ ಅಗುಯಿಲಾ ಎಂಬಲ್ಲಿ 24 ವರ್ಷದ ವ್ಯಕ್ತಿ ತನ್ನ ತಂದೆಯೊಂದಿಗೆ ಕಯಾಕಿಂಗ್ ಮಾಡುತ್ತಿದ್ದಾಗ ಬೃಹತ್‌ ಹಂಪ್‌ಬ್ಯಾಕ್ ತಿಮಿಂಗಿಲವು ಆತನನ್ನು ಹಳದಿ ಬಣ್ಣದ ದೋಣಿ ಸಮೇತವಾಗಿ ನುಂಗಿದ್ದು, ನಂತರ ಹೊರಕ್ಕೆ ಉಗುಳಿದ ಅಪರೂಪದ ಘಟನೆ ನಡೆದಿದೆ. ಚಿಲಿಯ ದಕ್ಷಿಣದ ಪ್ಯಾಟಗೋನಿಯಾ ಪ್ರದೇಶದ ಮೆಗೆಲ್ಲನ್ ಜಲಸಂಧಿಯ ಸ್ಯಾನ್ ಇಸಿಡ್ರೊ ಲೈಟ್‌ಹೌಸ್ ಬಳಿ ಶನಿವಾರ ಈ ಘಟನೆ ನಡೆದಿದೆ. ದೈತ್ಯ ತಿಮಿಂಗಿಲವು ಕಯಾಕಿಂಗ್ ಮಾಡುತ್ತಿದ್ದ ಅಡ್ರಿಯನ್ ಸಿಮಾಂಕಾಸ್ ಎಂಬಾತನನ್ನು ನುಂಗಿದ ನಂತರ ಯಾವುದೇ ಹಾನಿ ಮಾಡದೆ ಆತನನ್ನು ಉಗುಳಿದ್ದು, ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದೆ.
ಮತ್ತೊಂದು ಕಯಾಕ್‌ನಿಂದ ಅವರ ತಂದೆ ಡೆಲ್ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಡೆಲ್ ಸಮೀಪಿಸುತ್ತಿರುವ ತಿಮಿಂಗಿಲವನ್ನು “ಸುಂದರ ಅಲೆಗಳು” ಎಂದು ತಪ್ಪಾಗಿ ಗ್ರಹಿಸುವುದನ್ನು ತೋರಿಸುತ್ತದೆ.

ಕೆಲವೇ ಸೆಕೆಂಡುಗಳಲ್ಲಿ ತಿಮಿಂಗಿಲವು ಅಡ್ರಿಯನ್ ಸಿಮಾಂಕಾಸ್ ಅವರನ್ನು ನುಂಗಿ ಉಗುಳಿದ ನಂತರ ಅವರು ತಮ್ಮ ಮಗನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಶಾಂತವಾಗು, ಶಾಂತವಾಗು ಎಂದು ಅವರು ಹೇಳುವುದನ್ನು ಕೇಳಬಹುದು.
ಆಡ್ರಿಯನ್ ಸಿಮಾನ್ಕಾಸ್ ಈ ಭಯಾನಕ ಕ್ಷಣದ ಬಗ್ಗೆ ವಿವರಿಸಿದ್ದಾರೆ ಮತ್ತು ಅವರು ತಿರುಗಿದಾಗ ಅವರ ಮುಖದ ಮೇಲೆ ಗಾಬರಿಯ ಚಿನ್ಹೆಗಳು ಮೂಡಿದವು. ಬೃಹತ್‌ ತಿಮಿಂಗಲವು ಅವರನ್ನು ನೀರಿನ ಸಮೇತ ನುಂಗುವ ಮೊದಲು ಅದು ತನ್ನ ಹಿಂದಿನಿಂದ ಸಮೀಪಿಸುತ್ತಿರುವುದನ್ನು ಅವರು ಗಮನಿಸಿದ್ದರು. ಕಡು ನೀಲಿ, ಬಿಳಿ, ಬಣ್ಣದ ಬೃಹತ್‌ ಆಗಿರುವ ಏನೋ ಹಿಂದಿನಿಂದ ಬರುತ್ತಿರುವುದನ್ನು ನಾನು ನೋಡಿದ್ದೆ. ಆ ಕ್ಷಣದಲ್ಲಿ ನತನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿತ್ತು ಮತ್ತು ನಾನು ಸಾಯುತ್ತೇನೆ ಎಂದು ಭಯಪಟ್ಟಿದ್ದೆ ಎಂದು ಹೇಳಿದರು.

“ಅದು ನನ್ನನ್ನು ನುಂಗಿ ತಿಂದು ಹಾಕುತ್ತದೆ ಎಂದು ನಾನು ಭಾವಿಸಿದೆ” ಎಂದು ಅವರು ಹೇಳಿದ್ದಾರೆ. ಘಟನೆಯ ನಂತರ ತಂದೆ ಮತ್ತು ಮಗ ಇಬ್ಬರೂ ಸುರಕ್ಷಿತವಾಗಿ ದಡಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ನಂತರ, ತಂದೆ-ಮಗ ಇಬ್ಬರೂ ಘಟನೆಯ ಹೊರತಾಗಿಯೂ ಕಯಾಕಿಂಗ್ ಅನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಹಂಪ್‌ಬ್ಯಾಕ್ ತಿಮಿಂಗಿಲವು ಆಡ್ರಿಯನ್ ಅವರನ್ನು ನುಂಗಲಿಲ್ಲ ಎಂದು ವನ್ಯಜೀವಿ ತಜ್ಞರು ನಂಬುತ್ತಾರೆ. ಅವು ಮಾನವ ಗಾತ್ರದ ಬೇಟೆಯನ್ನು ಗುರಿಯಾಗಿಸುವುದಿಲ್ಲ ಎಂದು ಹೇಳುತ್ತಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹಾಸಿಗೆ, ಶೌಚಾಲಯ, ಮೈಕ್ರೋವೇವ್ ಒಲೆ, ಆಹಾರ ತಯಾರಿಕೆ...: ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ ಹಾರುವ ಹೋಟೆಲ್ ಕೂಡ ಹೌದು..!

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement