ನವದೆಹಲಿ: ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ರಮ ವಲಸಿಗರ ವಿರುದ್ಧದ ತೆಗೆದುಕೊಳ್ಳುತ್ತಿರುವ ಕ್ರಮದ ಭಾಗವಾಗಿ 10 ದಿನಗಳ ಅವಧಿಯಲ್ಲಿ ಅಮೆರಿಕದಿಂದ ಗಡೀಪಾರು ಮಾಡಲಾದ 112 ಭಾರತೀಯರನ್ನು ಹೊತ್ತ ಮೂರನೇ ವಿಮಾನವು ಭಾನುವಾರ ರಾತ್ರಿ ಅಮೃತಸರಕ್ಕೆ ಬಂದಿಳಿದಿದೆ.
ಮೂಲಗಳ ಪ್ರಕಾರ ಅಮೆರಿಕ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ವಿಮಾನವು ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 10:03 ರ ಸುಮಾರಿಗೆ ಬಂದಿಳಿದಿದೆ.
ಒಟ್ಟು ಗಡೀಪಾರು ಮಾಡಿದವರಲ್ಲಿ ಪಂಜಾಬ್‌ನಿಂದ 31, ಹರಿಯಾಣದಿಂದ 44, ಗುಜರಾತ್‌ನಿಂದ 33, ಉತ್ತರ ಪ್ರದೇಶದ ಇಬ್ಬರು ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಿಂದ ತಲಾ ಒಬ್ಬರು ಇದ್ದಾರೆ. ಕೆಲವರ ಕುಟುಂಬಗಳು ಅವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದವು.
ವಲಸೆ, ತಪಾಸಣೆ ಮತ್ತು ಅವರ ಹಿನ್ನೆಲೆಯ ಪರಿಶೀಲನೆ ಸೇರಿದಂತೆ ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಗಡೀಪಾರು ಮಾಡಿದವರಿಗೆ ಅವರ ಮನೆಗಳಿಗೆ ಹೋಗಲು ಅನುಮತಿಸಲಾಗುತ್ತದೆ. ಗಡೀಪಾರು ಮಾಡಿದವರನ್ನು ಅವರ ಗಮ್ಯಸ್ಥಾನಕ್ಕೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಸುತ್ತಿನ ಗಡೀಪಾರಿನಲ್ಲಿ 104 ಭಾರತೀಯರನ್ನು ಫೆಬ್ರವರಿ 5 ರಂದು ಅಮೃತಸರಕ್ಕೆ ಅಮೆರಿಕದ ಮಿಲಿಟರಿಹೊತ್ತು ತಂದಿತು. 116 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಶನಿವಾರ ಲ್ಯಾಂಡ್ ಆಗಿದೆ.
ಮೊದಲ ಸುತ್ತಿನ ಗಡೀಪಾರು ಸಮಯದಲ್ಲಿ, ಜನರು ವಿಮಾನದ ಉದ್ದಕ್ಕೂ ಸಂಕೋಲೆಯಿಂದ ಬಂಧಿಸಲ್ಪಟ್ಟರು ಮತ್ತು ಭಾರತಕ್ಕೆ ಬಂದ ನಂತರ ಅವರನ್ನು ಮುಕ್ತಗೊಳಿಸಲಾಯಿತು – ಇದು ಭಾರತದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿತು ಮತ್ತು ಆಗ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಶನಿವಾರ ಹಿಂದಿರುಗಿದವರಿಂದ ಕೂಡ ಇದೇ ರೀತಿಯ ವರ್ತನೆಯ ಆರೋಪಗಳನ್ನು ಮಾಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ