ಈಗಿನ ಕಾಲಘಟ್ಟದಲ್ಲಿ ಜನರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಏನಾದರೂ ವಿಚಿತ್ರವಾದದ್ದನ್ನು ಮಾಡಲು ಯೋಚಿಸುತ್ತಾರೆ. ಈಗ ಇದೇ ತರಹ ಕಾರಿಗೆ ಸಂಬಂಧಿಸಿದ ವಿಡಿಯೋವೊಂದು ಹೊರಬಿದ್ದಿದೆ. ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ಸಂಪೂರ್ಣ ಕಾರನ್ನು ಒಂದು ರೂ. ನಾಣ್ಯಗಳಿಂದ ಅಲಂಕರಿಸಿದ್ದಾರೆ.
ಒಂದು ರೂಪಾಯಿ ನಾಣ್ಯದಿಂದ ಅಲಂಕರಿಸಲಾದ ಈ ಕಾರಿನ ವಿನ್ಯಾಸವನ್ನು ನೋಡಿದ ಜನರು ಅಚ್ಚರಿಪಟ್ಟಿದ್ದಾರೆ, ಇದಕ್ಕೆ ಕಾರಣ ನಾಣ್ಯಗಳನ್ನು ಅಂಟಿಸಲು ಬೇಕಾದ ಶ್ರಮ. ಇದಕ್ಕಾಗಿಯೇ ಅವರು ಆಶ್ಚರ್ಯಪಟ್ಟಿದ್ದಾರೆ. ಈ ವೀಡಿಯೊ ಕ್ಲಿಪ್ ಅನ್ನು ವೀಡಿಯೋ ಕ್ರಿಯೇಟರ್ ಎಂಬವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಎಕ್ಸ್‌ಪರಿಮೆಂಟ್ ಕಿಂಗ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಅದು ಟ್ವಿಟರ್‌ನಲ್ಲಿಯೂ ವೈರಲ್ ಆಗಿದೆ. “ಪೈಸೆ ವಾಲಿ ಕಾರ್” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಆದರೆ, ಕಾರಿನ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ವೀಡಿಯೊದಲ್ಲಿ, ನಿರ್ಜನ ಸ್ಥಳದಲ್ಲಿ ಕಾರು ಏಕಾಂಗಿಯಾಗಿ ನಿಂತಿರುವುದನ್ನು ಕಾಣಬಹುದು, ಈ ಕಾರಿನ ನೋಟವು ಜನರನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ. ವೀಡಿಯೊ ಪ್ರಕಾರ, ಈ ಕಾರು ರಾಜಸ್ಥಾನದ ವ್ಯಕ್ತಿಗೆ ಸೇರಿದ್ದಂತೆ. ಅದರ ನಂಬರ್ ಪ್ಲೇಟ್ ಅಲ್ಲಿ ನೋಂದಾಯಿಸಲ್ಪಟ್ಟಿದೆ.
ಈ ಕಲಾತ್ಮಕ ಕೆಲಸದ ಹಿಂದೆ ಕೇವಲ 1 ರೂಪಾಯಿ ನಾಣ್ಯಗಳನ್ನು ಬಳಸಲಾಗಿದ್ದು, ಕಾರಿನ ಪ್ರತಿಯೊಂದು ಭಾಗಕ್ಕೂ ಎಚ್ಚರಿಕೆಯಿಂದ 1 ರೂಪಾಯಿ ನಾಣ್ಯಗಳನ್ನು ಅಂಟಿಸಲಾಗಿದೆ. ಕಾರಿನಲ್ಲಿ ನಾಣ್ಯಗಳನ್ನು ಅಂಟಿಸದ ಯಾವುದೇ ಭಾಗವಿರಲಿಲ್ಲ, ಕಾರಿನ ಸೈಡ್ ಮಿರರ್‌ಗಳಿಗೆ ಸಹ ನಾಣ್ಯಗಳನ್ನು ಅಂಟಿಸಲಾಗಿದೆ ಮತ್ತು ಇದರಿಂದಾಗಿ ಕಾರಿನ ಬಣ್ಣವು ನಾಣ್ಯಗಳ ಬಣ್ಣವಾಗಿ ಪರಿವರ್ತನೆಯಾಗಿದೆ. ಹಾಗೂ ಬೆಳ್ಳಿ ಕಾರಿನಂತೆ ಫಳಫಳ ಹೊಳೆಯುತ್ತದೆ.
ಮುಂಭಾಗ ಮತ್ತು ಹಿಂಭಾಗದ ನಂಬರ್ ಪ್ಲೇಟ್‌ಗಳನ್ನು ಹೊರತಪಡಿಸಿ ಕಾರಿನ ಸಂಪೂರ್ಣ ಹೊರಭಾಗ ಕೇವಲ ನಾಣ್ಯಗಳಿಂದಲೇ ಗೋಚರಿಸುತ್ತವೆ. ನಾಣ್ಯಗಳ ಕಾರಣ, ಕಾರಿನ ಉಳಿದ ಯಾವುದೇ ಭಾಗವು ಗೋಚರಿಸುವುದಿಲ್ಲ.
ವೀಡಿಯೋ ನೋಡಿದ ನಂತರ ಜನರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರನು “ಬುಲೆಟ್ ಪ್ರೂಫ್” ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬ ಬಳಕೆದಾರರು “ನಿರ್ಮಾಣ ಗುಣಮಟ್ಟವನ್ನು ಹೆಚ್ಚಿಸಿ” ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೇ ಬಳಕೆದಾರರು “ಚಿಲ್ಲರೆ ಕಾರ್” ಎಂದು ಬರೆದಿದ್ದಾರೆ. ಈ ವೀಡಿಯೊ ಇಲ್ಲಿಯವರೆಗೆ ೫೦ ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ