ವೈದ್ಯೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಸಿನೆಮಾ ನಟ ಡಾಲಿ ಧನಂಜಯ

ಮೈಸೂರು : ಕನ್ನಡ ಸಿನೆಮಾ ನಟ ಡಾಲಿ ಧನಂಜಯ ಮತ್ತು ವೈದ್ಯೆ​ ಧನ್ಯತಾ ಭಾನುವಾರ ಸಪ್ತಪದಿ ತುಳಿದಿದ್ದಾರೆ. ಭಾನುವಾರ ಬೆಳಿಗ್ಗೆ 9:10 ರಿಂದ 10:10ರ ವರೆಗಿನ, ಸಂಕಷ್ಟ ಚತುರ್ದರ್ಶಿಯ ಶುಭ ಲಗ್ನದಲ್ಲಿ ಅವರು ವಿವಾಹವಾಗಿದ್ದಾರೆ.
ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಡಾಲಿ ಧನಂಜಯ ಹಾಗೂ ಧನ್ಯತಾ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಬೆಳಗ್ಗೆಯಿಂದಲೇ ಮದುವೆಯ ವಿಧಿವಿಧಾನಗಳು ಆರಂಭವಾದವು.

ಮೊದಲು ಮಂಟಪಕ್ಕೆ ದೇವತಾ ಪ್ರವೇಶ ನಂತರ ನವ ಪ್ರಧಾನ ಕಳಸ ಪೂಜೆ, ಕನ್ಯಾದಾನ, ಮಾಲೆ ಅರ್ಪಣೆ ಶಾಸ್ತ್ರ ನೆರವೇರಿತು. ನವಜೋಡಿಗೆ ಸಿನಿತಾರೆಯರು, ಗಣ್ಯರು, ಆಪ್ತರು, ಅಭಿಮಾನಿಗಳು ಶುಭಹಾರೈಸಿದರು. ಮದುವೆಯಲ್ಲಿ ನಟ ಶಿವರಾಜಕುಮಾಜ, ನಟಿ ರಮ್ಯಾ, ನಟರಾದ ವಸಿಷ್ಠ ಸಿಂಹ, ಯುವರಾಜಕುಮಾರ, ಸಪ್ತಮಿ ಗೌಡ, ವಿನಜರಾಜಮೊದಲಾದ ಸಿನಿಮಾ ತಾರೆಯರು ಪಾಲ್ಗೊಂಡಿದ್ದರು.
ಶನಿವಾರ ತಡರಾತ್ರಿ 11 ಗಂಟೆಯವರೆಗೂ ಆರತಕ್ಷತೆ ನೆರವೇರಿದ್ದು. ಸಾಕಷ್ಟು ಜನ ಗಣ್ಯರು ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಇಂದು ಸಹ ಅನೇಕ ಗಣ್ಯರು ಭಾಗವಹಿಸಿ ಆರ್ಶೀವಾದಿಸಿದ್ದಾರೆ.

ಪ್ರಮುಖ ಸುದ್ದಿ :-   48 ನಾಯಕರ ಹನಿಟ್ರ್ಯಾಪ್ ಸಿಡಿ ಇದೆ, ನನ್ನ ಮೇಲೂ ಯತ್ನ; ಸಚಿವ ಕೆ.ಎನ್. ರಾಜಣ್ಣ ಸ್ಫೋಟಕ ಮಾಹಿತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement