ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಕುಟುಂಬದವರನ್ನು ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ಮೋದಿ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾದರು. ಈ ವೇಳೆ ರಿಷಿ ಸುನಕ್ ಅವರನ್ನು ಭಾರತದ ದೊಡ್ಡ ಸ್ನೇಹಿತ ಎಂದು ಮೋದಿ ಬಣ್ಣಿಸಿದ್ದಾರೆ. ಭೇಟಿಯ ವೇಳೆ ಇಬ್ಬರು ನಾಯಕರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ, ಅವರ ಪುತ್ರಿಯರಾದ ಕೃಷ್ಣ ಮತ್ತು ಅನುಷ್ಕಾ ಮತ್ತು ರಾಜ್ಯಸಭೆಯ ಸಂಸತ್ ಸದಸ್ಯರೂ ಆಗಿರುವ ರಿಷಿ ಸುನಕ್ ಅವರ ಅತ್ತೆ ಸುಧಾ ಮೂರ್ತಿ ಕೂಡ ಈ ವೇಳೆ ಜೊತೆಗಿದ್ದರು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಕುಟುಂಬವನ್ನು ಭೇಟಿಯಾಗಿ ಸಂತೋಷವಾಯಿತು! ನಾವು ಅನೇಕ ವಿಷಯಗಳ ಕುರಿತು ಅದ್ಭುತ ಸಂಭಾಷಣೆ ನಡೆಸಿದ್ದೇವೆ. ರಿಷಿ ಸುನಕ್ ಭಾರತದ ಉತ್ತಮ ಸ್ನೇಹಿತ. ಅವರು ಇನ್ನೂ ಬಲವಾದ ಭಾರತ-ಯುಕೆ ಸಂಬಂಧಗಳ ಬಗ್ಗೆ ಉತ್ಸುಕರಾಗಿದ್ದಾರೆ.” ಎಂದು ಹೇಳಿದ್ದಾರೆ.
ರಿಷಿ ಸುನಕ್ ಕುಟುಂಬ ತಮ್ಮ ಭಾರತ ಪ್ರವಾಸದಲ್ಲಿ ಶನಿವಾರ ತಾಜ್ ಮಹಲ್, ಫತೇಪುರ್ ಸಿಕ್ರಿ ಮತ್ತು ಜೈಪುರಕ್ಕೆ ಭೇಟಿ ನೀಡಿದ್ದರು.
, ರಿಷಿ ಸುನಕ್ ಕುಟುಂಬವು ಆಗ್ರಾದಲ್ಲಿರುವ ತಾಜ್ ಮಹಲ್‌ಗೆ ಭೇಟಿ ನೀಡಿತ್ತು. ಈ ವೇಳೆ ಯುಕೆ ಮಾಜಿ ಪ್ರಧಾನಿ ಮತ್ತು ಅವರ ಕುಟುಂಬವನ್ನು ನೋಡಲು ಸಂದರ್ಶಕರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು ನೆರೆದಿದ್ದ ಜನರತ್ತ ಕೈ ಬೀಸಿದ್ದರು. ರಿಷಿ ಸುನಕ್ ಭಾನುವಾರ ತಮ್ಮ ಕುಟುಂಬದೊಂದಿಗೆ ಐಕಾನಿಕ್ ಫತೇಪುರ್ ಸಿಕ್ರಿ ಸ್ಮಾರಕಕ್ಕೂ ಭೇಟಿ ನೀಡಿದರು. ಸುನಕ್ ಜೈಪುರ ಸಾಹಿತ್ಯ ಉತ್ಸವ ಮತ್ತು ಮುಂಬೈನ ಐಕಾನಿಕ್ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಅಂತಿಮ T20I ಪಂದ್ಯವನ್ನು ವೀಕ್ಷಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ