ತಂದೆಗೆ ತಕ್ಕ ಪಾಠ ಕಲಿಸಲು ತನ್ನ ಮನೆಯಿಂದ 20 ಲಕ್ಷ ರೂ. ನಗದು, 80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಬಾಲಕ…!

ಕಾನ್ಪುರ: ತಂದೆಗೆ ತಕ್ಕ ಪಾಠ ಕಲಿಸಲು 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಆರು ಜನ ಸ್ನೇಹಿತರ ಜೊತೆ ಸೇರಿ ಕಾನ್ಪುರದ ತನ್ನ ಸ್ವಂತ ಮನೆಯಲ್ಲಿಯೇ 1 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ನಡೆದಿದೆ…! ತನ್ನ ತಂದೆ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿದ್ದಾಗಿ ಬಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ…!!
ಕಾನ್ಪುರದ ಉಪನಗರವಾದ ಪಂಕಿಯಲ್ಲಿ ಬಟ್ಟೆಗೆ ಬಣ್ಣ ಹಾಕುವ ಫ್ಯಾಕ್ಟರಿ ನಡೆಸುತ್ತಿರುವ ಉದ್ಯಮಿಯ ಮಗ ಈ ಕೃತ್ಯ ಎಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉದ್ಯಮಿಯ ಮಗ ಆ ಪ್ರದೇಶದ ಕೆಲವು ಅನಪೇಕ್ಷಿತ ಜನರ ಸಹವಾಸದಿಂದ ದಾರಿ ತಪ್ಪಲು ಪ್ರಾರಂಭಿಸಿದ್ದ, ನಂತರ ಉದ್ಯಮಿ ಮಗನನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿ ತನ್ನ ಆಸ್ತಿಯಲ್ಲಿ ಏನನ್ನೂ ಕೊಡುವುದಿಲ್ಲ ಎಂದು ಮಗನಿಗೆ ಹೆದರಿಸಿದ್ದಾರೆ.

ಇದರಿಂದ ಕೋಪಗೊಂಡ ಹುಡುಗ, ತನ್ನ ಆರು ಸ್ನೇಹಿತರ ಸಹಾಯದಿಂದ ತನ್ನ ಮನೆಯಲ್ಲಿಯೇ ಕಳ್ಳತನ ಮಾಡಿದ್ದಾನೆ. ಮಂಗಳವಾರ ತನ್ನದೇ ಮನೆಯಲ್ಲಿ 20 ಲಕ್ಷ ರೂಪಾಯಿ ನಗದು ಮತ್ತು 80 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದ್ದಿದ್ದಾನೆ. ನಂತರ ತಂದೆ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಬಾಲಕನನ್ನು ವಶಕ್ಕೆ ಪಡೆದು ನಾಲ್ವರನ್ನು ಗುರುವಾರ ಬಂಧಿಸಿದರು. ಅವರಿಂದ 4 ಲಕ್ಷ ರೂಪಾಯಿ ನಗದು, 165 ಗ್ರಾಂ ಚಿನ್ನಾಭರಣ ಹಾಗೂ 3 ಕೆ.ಜಿ.ಗೂ ಅಧಿಕ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಕ್ರಿಕೆಟರ್‌ ಯುಜ್ವೇಂದ್ರ ಚಾಹಲ್- ಧನಶ್ರೀ ವರ್ಮಾ ವಿಚ್ಛೇದನ ಈಗ ಅಧಿಕೃತ

ಇಬ್ಬರು ಸಹಚರರು ಪರಾರಿಯಾಗಿದ್ದು, ಇಬ್ಬರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ. ಕಳ್ಳತನದಲ್ಲಿ ಸಹಾಯ ಮಾಡಿದ ಈ ಆರು ಜನರಲ್ಲಿ ಈ ಇಬ್ಬರನ್ನು ಈ ಹಿಂದೆ ಕಳ್ಳತನದ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ವಿಜೇಂದ್ರ ದ್ವಿವೇದಿ ಹೇಳಿದ್ದಾರೆ.
ಕಳ್ಳತನದ ಕಾರಣವನ್ನು ಕೇಳಿದಾಗ, ಶ್ರೀ ದ್ವಿವೇದಿ ಹೇಳಿದರು, “ಹುಡುಗ ಕೆಟ್ಟ ಸಹವಾಸಕ್ಕೆ ಬಿದ್ದಿದ್ದಾನೆ. ಆತನ ತಂದೆ ತನ್ನ ಆಸ್ತಿಯಲ್ಲಿ ಬಿಡಿಗಾಸನ್ನೂ ಕೊಡುವುದಿಲ್ಲ ಎಂದು ಹೆಸರಿಸಿದ ನಂತರ ತಂದೆ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿದ್ದೆ ಎಂದು ಬಾಲಕ ತಿಳಿಸಿದ್ದಾನೆ ಎಂದು ದ್ವಿವೇದಿ ಹೇಳಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement