ಟೈಮ್ ಟ್ರಾವೆಲರ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು 2025ರ ವರ್ಷಕ್ಕೆ ಆತಂಕಕಾರಿ ಭವಿಷ್ಯವಾಣಿಗಳನ್ನು ಹೇಳಿದ್ದಾರೆ.
ಎಲ್ವಿಸ್ ಥಾಂಪ್ಸನ್ ಎಂಬ ವ್ಯಕ್ತಿ ಜನವರಿ 1 ರಂದು Instagram ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, 2025ರಲ್ಲಿ ಪ್ರಮುಖ ದುರಂತ ಘಟನೆಗಳು ಸಂಭವಿಸುತ್ತವೆ ಎಂದು ಅವರು ನಂಬುವ ಐದು ನಿರ್ದಿಷ್ಟ ದಿನಾಂಕಗಳ ಬಗ್ಗೆ ಹೇಳಿದ್ದಾರೆ.
ಅವರ ಹೇಳಿಕೆಗಳು ವೈರಲ್ ಆಗಿದ್ದು, ಕೋಲಾಹಲ ಎಬ್ಬಿಸಿವೆ. ಅವರ ಭವಿಷ್ಯವಾಣಿಗಳಲ್ಲಿ ಅಮೆರಿಕದ ಒಕ್ಲಹೋಮಾದಲ್ಲಿ ವಿನಾಶಕಾರಿ ಸುಂಟರಗಾಳಿ, ಅಮೆರಿಕಾದ ಅಂತರ್ಯುದ್ಧ, ಬೃಹತ್ ಸಮುದ್ರ ಜೀವಿಗಳ ಆವಿಷ್ಕಾರ, ಚಾಂಪಿಯನ್ ಎಂಬ ಅನ್ಯಗ್ರಹದ ಜೀವಿಯ ಆಗಮನ ಮತ್ತು ಅಮೆರಿಕಾದಲ್ಲಿ ಭಾರಿ ಬಿರುಗಾಳಿ ಬೀಸುವುದು ಸೇರಿದೆ.
ವೀಡಿಯೊದಲ್ಲಿ, ಭವಿಷ್ಯದಲ್ಲಿ ಪ್ರಯಾಣಿಸಿದ್ದೇನೆ ಎಂದು ಹೇಳಿಕೊಳ್ಳುವ ಥಾಂಪ್ಸನ್, ಏಪ್ರಿಲ್ 6 ರಂದು, ಪ್ರತಿ ಗಂಟೆಗೆ 1,046 ಕಿಲೋಮೀಟರ್ ವೇಗವಿರುವ ಹಾಗೂ 24 ಕಿಲೋಮೀಟರ್ ಅಗಲವಿರುವ ಸುಂಟರಗಾಳಿಯು ಅಮೆರಿಕದ ಒಕ್ಲಹೋಮಾವನ್ನು ಧ್ವಂಸಗೊಳಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಮೇ 27 ರಂದು, ಅಮೆರಿಕದಲ್ಲಿ ಎರಡನೇ ಅಂತರ್ಯುದ್ಧವು ಪ್ರಾರಂಭವಾಗಲಿದೆ. ಇದರ ಪರಿಣಾಮವಾಗಿ ಟೆಕ್ಸಾಸ್ ಪ್ರತ್ಯೇಕತೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡ ಜಾಗತಿಕ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದು ಅಂತಿಮವಾಗಿ ಅಮೆರಿಕವನ್ನು ನಾಶಪಡಿಸುತ್ತದೆ ಎಂದು ಅವರು ಮುನ್ಸೂಚಿಸಿದ್ದಾರೆ.
ಸೆಪ್ಟೆಂಬರ್ 1 ರಂದು, ಚಾಂಪಿಯನ್ ಎಂಬ ಅನ್ಯಗ್ರಹದ ಜೀವಿಯು 12,000 ಮಾನವರನ್ನು ಅವರ ಸುರಕ್ಷತೆಗಾಗಿ ಮತ್ತೊಂದು ಜನವಸತಿ ಗ್ರಹಕ್ಕೆ ಸಾಗಿಸುತ್ತದೆ ಎಂದು ಥಾಂಪ್ಸನ್ ಭವಿಷ್ಯ ನುಡಿದಿದ್ದಾರೆ. ಅವರು ಭೂಮಿಗೆ ಹಾನಿ ಮಾಡುವ ಉದ್ದೇಶದಿಂದ ಪ್ರತಿಕೂಲಕಾರವಾದ ಅನ್ಯಗ್ರಹ ಜೀವಿಯ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.
ನಂತರ, ಅವರು ಸೆಪ್ಟೆಂಬರ್ 19 ರಂದು ಅಮೆರಿಕದ ಪೂರ್ವ ಕರಾವಳಿಗೆ ಭಾರಿ ಚಂಡಮಾರುತ ಅಪ್ಪಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕೊನೆಯದಾಗಿ, ನವೆಂಬರ್ 3 ರಂದು, ನೀಲಿ ತಿಮಿಂಗಿಲ(blue whale)ಕ್ಕಿಂತ ಆರು ಪಟ್ಟು ದೊಡ್ಡದಾದ ಮತ್ತು ಸೆರೆನ್ ಕ್ರೌನ್ (Serene Crown) ಎಂದು ಹೆಸರಿಸಲಾದ ಬೃಹತ್ ಸಮುದ್ರ ಜೀವಿ ಪೆಸಿಫಿಕ್ ಸಾಗರದಲ್ಲಿ ಪತ್ತೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಥಾಮ್ಸನ್ ತಮ್ಮ ಭವಿಷ್ಯವಾಣಿಗಳನ್ನು ಹಂಚಿಕೊಂಡ ವೀಡಿಯೊ 2.6 ಕೋಟಿ ವೀಕ್ಷಣೆಗಳನ್ನು ಕಂಡಿದೆ. ಕಾಮೆಂಟ್ಗಳ ವಿಭಾಗದಲ್ಲಿ, ಕೆಲವು ವೀಕ್ಷಕರು ಸಂದೇಹ ವ್ಯಕ್ತಪಡಿಸಿದರೆ, ಇತರರು ಸ್ವಯಂ ಘೋಷಿತ ಟೈಮ್ ಟ್ರಾವೆಲ್ಲರ್ ಮುಂದಿನ ವಾರದ ಲಾಟರಿ ಸಂಖ್ಯೆಗಳನ್ನು ಸಹ ತಮ್ಮ ಭವಿಷ್ಯದಲ್ಲಿ ಪಡೆದಿರಬೇಕು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
“ನೀವು ಭವಿಷ್ಯತ್ತಿಗೆ ಹೋಗಿದ್ದೀರಿ ಈ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದೀರಿ, ಆದರೆ ಮುಂದಿನ ವಾರದ ಲಾಟರಿ ಸಂಖ್ಯೆಗಳೊಂದಿಗೆ ಭವಿಷ್ಯ ಹೇಳಲು ಸಾಧ್ಯವಾಗಲಿಲ್ಲವೇ? ಮ್ಯಾನ್ ಕಟ್ ದಿ ಬುಲ್,” ಒಬ್ಬ ಬಳಕೆದಾರರು ತಮಾಷೆಯಾಗಿ ಬರೆದಿದ್ದಾರೆ. “ನಾನು ಈ ವೀಡಿಯೊವನ್ನು ಉಳಿಸಲಿದ್ದೇನೆ ಮತ್ತು ಇವುಗಳಲ್ಲಿ ಒಂದಾದರೂ ತಪ್ಪಾಗಿದ್ದರೆ ನಾನು ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ಮೊಕದ್ದಮೆ ಹೂಡುತ್ತೇನೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ