ಲಕ್ನೋ : ಉತ್ತರ ಪ್ರದೇಶದ ಗೊಂಡಾದಲ್ಲಿ ನವವಿವಾಹಿತ ಮಹಿಳೆಯೊಬ್ಬಳು ಮದುವೆಯಾಗಿ ಐದು ದಿನಗಳ ನಂತರ ಗಂಡನ ಮನೆಯಿಂದ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾದ ಘಟನೆ ನಡೆದಿದೆ.
ಗೊಂಡಾದ ಬಸೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದರೋಡೆ ನಡೆದ ರಾತ್ರಿ ನವವಿವಾಹಿತೆ ತನ್ನ ಅತ್ತೆ ಮಾವನಿಗೆ ಚಹಾ ನೀಡಿದ್ದಾಳೆ. ಮರುದಿನ ಬೆಳಿಗ್ಗೆ, ಮನೆಯಿಂದ 3.15 ಲಕ್ಷ ರೂ. ನಗದು ಮತ್ತು ಚಿನ್ನ ಮತ್ತು ಬೆಳ್ಳಿ ಆಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ವೇಳೆ ನವ ವಿವಾಹಿತೆ ಕೂಡ ಮನೆಯಿಂದ ನಾಪತ್ತೆಯಾಗಿದ್ದಳು. ಹೀಗಾಗಿ ವರನ ಕುಟುಂಬವು ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಮದುವೆಯ ಸೋಗಿನಲ್ಲಿ ಮಹಿಳೆ ಕಳ್ಳತನ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಓಡಿ ಹೋದ ವಧು ಮತ್ತು ಅವಳಿಗೆ ಸಹಾಯ ಮಾಡಿದ್ದ ಸಹಚರರನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ