ವೀಡಿಯೊ…| ಸತ್ತ ಹೆಬ್ಬಾವನ್ನು ಹಿಡಿದುಕೊಂಡು ಸ್ಕಿಪ್ಪಿಂಗ್‌ ಆಡಿದ ಮಕ್ಕಳು : ತನಿಖೆಗೆ ಆದೇಶ

ಮಕ್ಕಳು ಸತ್ತ ಹಾವನ್ನು ಸ್ಕಿಪ್ಪಿಂಗ್ ಆಟವಾಡಲು ಹಗ್ಗವಾಗಿ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೆಂಟ್ರಲ್ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ರಾಕ್‌ಹ್ಯಾಂಪ್ಟನ್‌ನಿಂದ ಸುಮಾರು ಎರಡು ಗಂಟೆಗಳ ಪ್ರಯಾಣದಷ್ಟು ದೂರ ಇರುವ ವೂರಬಿಂದಾದ ಈ ವೀಡಿಯೊದಲ್ಲಿ ಮಕ್ಕಳು ಸತ್ತ ಹಾವನ್ನು ಸ್ಕಿಪ್ಪಿಂಗ್‌ ಹಗ್ಗವಾಗಿ ಬಳಿಸಿಕೊಂಡು ಸ್ಕಿಪ್ಪಿಂಗ್‌ ಆಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
“ಅದನ್ನು ನನಗೆ ತೋರಿಸು, ಅದು ಏನೆಂದು ನನಗೆ ತೋರಿಸು” ಎಂದು ಮಹಿಳೆ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತದೆ. ಮಕ್ಕಳು ಜಿಗಿಯುತ್ತ ನಗುತ್ತಿದ್ದಾಗ ಒಬ್ಬ ಹುಡುಗ ಇದು ಕಪ್ಪು ತಲೆಯ ಹೆಬ್ಬಾವು ಎಂದು ಹೇಳಿದ್ದಾನೆ.

ಮಕ್ಕಳು ಅದನ್ನು ಹಗ್ಗವಾಗಿ ಬಳಸಲು ಪ್ರಾರಂಭಿಸುವ ಮೊದಲು ಹೆಬ್ಬಾವು ಸತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ವೀಡಿಯೊ ವೈರಲ್ ಆಗುತ್ತಿದ್ದಂತೆ, ಪರಿಸರ, ಪ್ರವಾಸೋದ್ಯಮ, ವಿಜ್ಞಾನ ಇಲಾಖೆ ಎಚ್ಚರಿಕೆ ನೀಡಿದೆ. “ನಾವು ಈ ಅನುಚಿತ ವರ್ತನೆಯನ್ನು ಖಂಡಿಸುತ್ತೇವೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ” ಎಂದು ವಕ್ತಾರರು ತಿಳಿಸಿದ್ದಾರೆ.
“ಸ್ಥಳೀಯ ಪ್ರಾಣಿಗಳನ್ನು ಕೊಲ್ಲುವುದು ಅಥವಾ ಗಾಯಗೊಳಿಸುವುದನ್ನು ಪರಿಸರ, ವಿಜ್ಞಾನ, ಪ್ರವಾಸೋದ್ಯಮ ಮತ್ತು ನಾವೀನ್ಯತೆ ಇಲಾಖೆ ಅಥವಾ ಆರ್‌ಎಸ್‌ಪಿಸಿಎ(RSPCA)ಗೆ ವರದಿ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕಪ್ಪು ತಲೆಯ ಹೆಬ್ಬಾವನ್ನು ಕೊಲ್ಲುವ ಅಥವಾ ಗಾಯಗೊಳಿಸುವವರಿಗೆ ಗರಿಷ್ಠ ದಂಡ 6.9 ಲಕ್ಷ ರೂ ($7,952) ದಂಡ ವಿಧಿಸಲಾಗುತ್ತದೆ. ಕಪ್ಪು-ತಲೆಯ ಹೆಬ್ಬಾವುಗಳು ದೇಶದ ಅತಿದೊಡ್ಡ ಹಾವುಗಳಲ್ಲಿ ಒಂದಾಗಿದೆ ಮತ್ತು ಪ್ರಕೃತಿ ಸಂರಕ್ಷಣಾ ಕಾಯಿದೆ 1992 ರ ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ. ಅವು ವಿಷಕಾರಿಯಲ್ಲದ ಹಾವುಗಳ ಜಾತಿಗಳಾಗಿದ್ದು, 3.5 ಮೀಟರ್ ಉದ್ದದವರೆಗೆ ಬೆಳೆಯುತ್ತವೆ.

ಪ್ರಮುಖ ಸುದ್ದಿ :-   ವೀಡಿಯೊ...| : 21 ಕಿಮೀ ಅರ್ಧ ಮ್ಯಾರಥಾನ್‌ನಲ್ಲಿ ಮಾನವರ ಜೊತೆ ಓಡಿದ ಚೀನಾದ ಮಾನವರೂಪಿ ರೋಬೋಟ್‌ಗಳು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement