ಪಾಕಿಸ್ತಾನದಲ್ಲಿ ಹೈಜಾಕ್ ಮಾಡಿದ ರೈಲಿನಿಂದ 150 ಒತ್ತೆಯಾಳುಗಳ ರಕ್ಷಣೆ ; 27 ಬಂಡುಕೋರರ ಹತ್ಯೆ

ಇಸ್ಲಾಮಾಬಾದ್‌ : ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನ್ ಪ್ರದೇಶದಲ್ಲಿ 400 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಕ್ಸ್‌ಪ್ರೆಸ್‌ ರೈಲನ್ನು ಸಶಸ್ತ್ರ ಬಂಡುಕೋರರು ಅಪಹರಿಸಿದ ನಂತರ ಈವರೆಗೆ 150 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಪಾಕಿಸ್ತಾನ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಕನಿಷ್ಠ 27 ಬಂಡುಕೋರರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಗಳು ಸೂಚಿಸಿವೆ.
ಬಂಡುಕೋರರೊಂದಿಗಿನ ಗುಂಡಿನ ಚಕಮಕಿಯ ನಂತರ ಭದ್ರತಾ ಪಡೆಗಳು 155 ಒತ್ತೆಯಾಳುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದವು. ರಕ್ಷಿಸಲ್ಪಟ್ಟ ಪ್ರಯಾಣಿಕರಲ್ಲಿ 58 ಪುರುಷರು, 31 ಮಹಿಳೆಯರು ಮತ್ತು 15 ಮಕ್ಕಳು ಸೇರಿದ್ದಾರೆ.
ಈ ಹಿಂದೆ, ಭದ್ರತಾ ಪಡೆಗಳು 26 ಮಹಿಳೆಯರು ಮತ್ತು 11 ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ್ದವು. ಇವರನ್ನು ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಲಾದ ಹತ್ತಿರದ ಪಟ್ಟಣವಾದ ಮ್ಯಾಚ್‌ಗೆ ಕರೆದೊಯ್ಯಲಾಯಿತು.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಬಂಡುಕೋರರು ಮತ್ತು ಪಾಕಿಸ್ತಾನಿ ಪಡೆಗಳ ನಡುವಿನ ಗುಂಡಿನ ಚಕಮಕಿ ರಾತ್ರಿಯಿಡೀ ಮುಂದುವರೆಯಿತು. ಜಾಫರ್ ಎಕ್ಸ್‌ಪ್ರೆಸ್‌ನಲ್ಲಿ ಎಷ್ಟು ಒತ್ತೆಯಾಳುಗಳು ಉಳಿದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಬಿಎಲ್‌ಎ ಯಾವುದೇ ಸಾವುನೋವುಗಳನ್ನು ನಿರಾಕರಿಸಿದೆ ಮತ್ತು 30 ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಇದನ್ನು ಅಧಿಕಾರಿಗಳು ದೃಢೀಕರಿಸಿಲ್ಲ.

ಬಂಡುಕೋರರ ಗುಂಪು ಕೆಲವು ಒತ್ತೆಯಾಳುಗಳನ್ನು ಪರ್ವತಗಳಿಗೆ ಕೊಂಡೊಯ್ದಿವೆ ಎಂದು ನಂಬಲಾಗಿದೆ ಮತ್ತು ಭದ್ರತಾ ಪಡೆಗಳು ಅವರನ್ನು ಹಿಂಬಾಲಿಸುತ್ತಿವೆ. ಉಳಿದ ಬಂಡುಕೋರರ ಗುಂಪು ಹೈಜಾಕ್‌ ಮಾಡಿದ ರೈಲಿನಲ್ಲಿ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದ್ದಾರೆ.
ಬಂಡುಕೋರರು ಕತ್ತಲೆಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಲು ಸಣ್ಣ ಗುಂಪುಗಳಾಗಿ ವಿಂಗಡನೆಯಾಗಿದ್ದರು ಎಂದು ವರದಿಗಳು ಸೂಚಿಸಿವೆ, ಮಿಲಿಟರಿ ಪಡೆಗಳು ಅವರು ಸುರಂಗವನ್ನು ಸುತ್ತುವರೆದಿವೆ. ಪರ್ವತ ಪ್ರದೇಶವು ಭದ್ರತಾ ಕಾರ್ಯಾಚರಣೆಗೆ ಕಷ್ಟಕರವಾಗಿದೆ ಎಂದು ಹೇಳಿದರು.
ಜಾಫರ್ ಎಕ್ಸ್‌ಪ್ರೆಸ್ ಅನ್ನು ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುವ ಮಾರ್ಗದಲ್ಲಿ ಸುರಂಗ ಮಾರ್ಗದಲ್ಲಿ ಶಸ್ತ್ರಸಜ್ಜಿತ ದಾಳಿಕೋರರು ತಡೆದರು. ಅದರ ಒಂಬತ್ತು ಬೋಗಿಗಳಲ್ಲಿ ಕನಿಷ್ಠ 400 ಪ್ರಯಾಣಿಕರಿದ್ದರು. ಒಂದು ತಿಂಗಳು ಕಾಲ ಬಂದ್‌ ಆಗಿದ್ದ ಈ ಮಾರ್ಗವನ್ನು ಇತ್ತೀಚಿಗಷ್ಟೇ ಕಾರ್ಯಗತಗೊಳಿಸಲಾಗಿತ್ತು.

ಬಲೂಚಿಸ್ತಾನ್‌ಗೆ ಸ್ವಾತಂತ್ರ್ಯವನ್ನು ಬಯಸುತ್ತಿರುವ ಪ್ರದೇಶದ ಪ್ರಬಲ ಪ್ರತ್ಯೇಕತಾವಾದಿ ಗುಂಪು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ರೈಲು ಹೈಜಾಕ್‌ ಮಾಡಿದ ಹೊಣೆ ಹೊತ್ತುಕೊಂಡಿದೆ. ಅವರು ಹಳಿಗಳನ್ನು ಸ್ಫೋಟಿಸುವ ಮೂಲಕ ಸುರಂಗದಲ್ಲಿ ರೈಲನ್ನು ನಿಲ್ಲಿವಂತೆ ಮಾಡಿದರು. ನಂತರ ಲೊಕೊಮೊಟಿವ್ ಚಾಲಕನನ್ನು ಸಹ ಕೊಂದರು.
ಪಾಕಿಸ್ತಾನ ಮಿಲಿಟರಿಯಿಂದ ಅಪಹರಿಸಲಾದ ಬಲೂಚ್ ರಾಜಕೀಯ ಕೈದಿಗಳು ಮತ್ತು ನಾಪತ್ತೆಯಾದ ವ್ಯಕ್ತಿಗಳನ್ನು 48 ಗಂಟೆಗಳ ಒಳಗೆ ಬಿಡುಗಡೆ ಮಾಡಬೇಕು ಎಂದು ಬಿಎಲ್‌ಎ (BLA) ಒತ್ತಾಯಿಸಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ, ರೈಲನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಬೆದರಿಕೆ ಹಾಕಿದೆ. ಅಲ್ಲದೆ, . ಸೇನಾ ಕಾರ್ಯಾಚರಣೆಗೆ ಪ್ರತಿಕ್ರಿಯೆಯಾಗಿ ಬಂಡುಕೋರ ಗುಂಪು 10 ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ.
ಬಂಡುಕೋರರಿಂದ ಒತ್ತೆಯಾಳಾಗಿಸಿಕೊಂಡಿರುವ ಪ್ರಯಾಣಿಕರ ಸಂಬಂಧಿಕರಿಗೆ ಸಹಾಯ ಮಾಡಲು ಪೇಶಾವರ ಮತ್ತು ಕ್ವೆಟ್ಟಾ ರೈಲು ನಿಲ್ದಾಣಗಳಲ್ಲಿ ತುರ್ತು ಡೆಸ್ಕ್‌ಗಳನ್ನು ಸ್ಥಾಪಿಸಲಾಗಿದೆ.

ರಂಜಾನ್ ಉಪವಾಸದ ಸಂದರ್ಭದಲ್ಲಿ ನಡೆದ “ಹೇಡಿತನದ” ದಾಳಿಯನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಖಂಡಿಸಿದ್ದಾರೆ. “ಭಯೋತ್ಪಾದನೆಯ ಪೆಡಂಭೂತವನ್ನು ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ನಾವು ಅದರ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇವೆ. ಪಾಕಿಸ್ತಾನದಲ್ಲಿ ಅಶಾಂತಿ ಮತ್ತು ಅವ್ಯವಸ್ಥೆಯನ್ನು ಹರಡುವ ಪ್ರತಿಯೊಂದು ಪಿತೂರಿಯನ್ನು ನಾವು ವಿಫಲಗೊಳಿಸುತ್ತೇವೆ” ಎಂದು ಪಾಕಿಸ್ತಾನದ ಪಿಎಂಒ ಹಂಚಿಕೊಂಡ ಹೇಳಿಕೆ ತಿಳಿಸಿದೆ.
ಬಲೂಚಿಸ್ತಾನವು ಕಳೆದ ಕೆಲವು ತಿಂಗಳುಗಳಲ್ಲಿ ಮಾರಣಾಂತಿಕ ಘರ್ಷಣೆಗಳನ್ನು ಕಂಡಿದೆ, ಜೊತೆಗೆ ಸರ್ಕಾರಿ ಪಡೆಗಳು ನಾಗರಿಕರನ್ನು ಬಲವಂತದ ನಾಪತ್ತೆ ಮಾಡಿವೆ ಎಂಬ ಆರೋಗಳೂ ಇವೆ. ಕಳೆದ ನವೆಂಬರ್‌ನಲ್ಲಿ ಕ್ವೆಟ್ಟಾ ರೈಲ್ವೇ ನಿಲ್ದಾಣದಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ 26 ಮಂದಿ ಮೃತಪಟ್ಟಿದ್ದರು ಹಾಗೂ 62 ಮಂದಿ ಗಾಯಗೊಂಡಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement