ಉಕ್ರೇನ್ ಸಂಘರ್ಷಕ್ಕೆ ಇತಿಶ್ರೀ ಹಾಡಲು ಪ್ರಯತ್ನಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ರಷ್ಯಾ ಅಧ್ಯಕ್ಷ

ಮಾಸ್ಕೋ/ನವದೆಹಲಿ: ಉಕ್ರೇನ್‌ನಲ್ಲಿ 30 ದಿನಗಳ ಕದನ ವಿರಾಮಕ್ಕಾಗಿ ವಾಷಿಂಗ್ಟನ್‌ನ ಯೋಜನೆಯ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಗುರುವಾರ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ರಾಷ್ಟ್ರಗಳ ಮುಖ್ಯಸ್ಥರು ಉಕ್ರೇನ್ ಸಂಘರ್ಷದ ಬಗ್ಗೆ ಗಮನ ಹರಿಸಿದ್ದಕ್ಕಾಗಿ “ಕೃತಜ್ಞತೆ” ಸಲ್ಲಿಸಿದ್ದಾರೆ.
“ಮೊದಲನೆಯದಾಗಿ, ಉಕ್ರೇನ್ ಬಗ್ಗೆ ಹೆಚ್ಚು ಗಮನ ಹರಿಸಿದ್ದಕ್ಕಾಗಿ ನಾನು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರಿಗೆ ಮಾಡಲು ಅವರ ಕೆಲಸಗಳೇ ಸಾಕಷ್ಟಿದ್ದರೂ ಹಗೆತನ ನಿಲ್ಲಿಸುವುದು ಮತ್ತು ಸಾವುನೋವುಗಳನ್ನು ತಡೆಯುವುದರ ಬಗ್ಗೆ ಪ್ರಯತ್ನಿಸಿದ್ದಕ್ಕಾಗಿ ಚೀನಾ ಅಧ್ಯಕ್ಷರು, ಭಾರತದ ಪ್ರಧಾನಿ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಗಣರಾಜ್ಯಗಳ ಅಧ್ಯಕ್ಷರು ಈ ಬಗ್ಗೆ ಗಮನಹರಿಸಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಕಳೆದ ತಿಂಗಳು ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ, ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಬಗ್ಗೆ “ಭಾರತ ತಟಸ್ಥವಾಗಿಲ್ಲ” ಎಂದು ಒತ್ತಿ ಹೇಳಿದರು. “ಭಾರತ ತಟಸ್ಥವಾಗಿಲ್ಲ. ಭಾರತವು ಶಾಂತಿಯ ಪರವಾಗಿ ನಿಂತಿದೆ. ಇದು ಯುದ್ಧದ ಯುಗವಲ್ಲ ಎಂದು ನಾನು ಈಗಾಗಲೇ ಅಧ್ಯಕ್ಷ ಪುತಿನ್ ಅವರಿಗೆ ಹೇಳಿದ್ದೇನೆ. ಅಧ್ಯಕ್ಷ ಟ್ರಂಪ್ ಅವರ ಪ್ರಯತ್ನಗಳನ್ನು ನಾನು ಬೆಂಬಲಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದರು.
ಇದು “ಯುದ್ಧದ ಯುಗವಲ್ಲ, ಇದು ರಾಜತಾಂತ್ರಿಕತೆಯ ಯುಗ” ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಒತ್ತಿ ಹೇಳುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಸಂಘರ್ಷ ಪ್ರಾರಂಭವಾದಾಗಿನಿಂದ, ಪ್ರಧಾನಿ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಹಲವಾರು ಬಾರಿ ಮಾತನಾಡಿದ್ದಾರೆ.

ಇದೇ ವೇಳೆ ಯಾವುದೇ ಷರತ್ತುಗಳಿಲ್ಲದೆ ಕದನ ವಿರಾಮ ಪ್ರಸ್ತಾವಕ್ಕೆ ರಷ್ಯಾ ಒಪ್ಪಿಗೆ ಸೂಚಿಸುವಂತೆ ಅಮೆರಿಕ ಕರೆ ನೀಡಿದೆ.
ಆದಾಗ್ಯೂ, ಪುಟಿನ್ ಅವರು ಉದ್ದೇಶಿತ ಕದನ ವಿರಾಮದ ಪರ ಇದ್ದರೂ “ಸೂಕ್ಷ್ಮತೆಗಳಿವೆ” ಎಂದು ಹೇಳಿದ್ದಾರೆ. ಮತ್ತು ಅದು ಹೇಗೆ ಕಾರ್ಯಸಾಧುವಾಗುತ್ತದೆ ಎಂಬುದರ ಕುರಿತು “ಗಂಭೀರ ಪ್ರಶ್ನೆಗಳಿವೆ ಎಂದು ಹೇಳಿದ್ದಾರೆ. “ಹಗೆತನವನ್ನು ನಿಲ್ಲಿಸುವ ಪ್ರಸ್ತಾಪಗಳನ್ನು ನಾವು ಒಪ್ಪುತ್ತೇವೆ ಆದರೆ ಈ ಕದನ ವಿರಾಮವು ದೀರ್ಘಾವಧಿಯ ಶಾಂತಿಗೆ ಕಾರಣವಾಗಬಹುದು ಮತ್ತು ಈ ಬಿಕ್ಕಟ್ಟಿನ ಮೂಲ ಕಾರಣಗಳನ್ನು ತೊಡೆದುಹಾಕಬೇಕು ಎಂಬ ಊಹೆಯಿಂದ ಮುಂದುವರಿಯುತ್ತೇವೆ ಎಂದು ಅವರು ಹೇಳಿದ್ದಾರೆ.
ಪುತಿನ್ ಅವರ ಹೇಳಿಕೆಯು “ಭರವಸೆ”ದಾಯಕವಾಗಿದೆ. ಆದರೆ “ಸಂಪೂರ್ಣವಾಗಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ. ಫೆಬ್ರವರಿ 28 ರಂದು ಓವಲ್ ಕಚೇರಿಯಲ್ಲಿ ಟ್ರಂಪ್ ಮತ್ತು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಮಾತುಕತೆಯ ನಂತರ ಒತ್ತಡಕ್ಕೆ ಮಣಿದ ಉಕ್ರೇನ್ ಈ ವಾರ ಸೌದಿ ಅರೇಬಿಯಾದಲ್ಲಿ ನಡೆದ ಮಾತುಕತೆಯಲ್ಲಿ 30 ದಿನಗಳ ಕದನ ವಿರಾಮದ ಅಮೆರಿಕದ ಪ್ರಸ್ತಾಪವನ್ನು ಒಪ್ಪಿಕೊಂಡಿದೆ.
ಫೆಬ್ರವರಿ 2022 ರಲ್ಲಿ ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣವನ್ನು ಪ್ರಾರಂಭಿಸಿತು, ನೂರಾರು ಸಾವಿರ ಜನರು ಸತ್ತರು ಮತ್ತು ಗಾಯಗೊಂಡರು, ಲಕ್ಷಾಂತರ ಜನರನ್ನು ಸ್ಥಳಾಂತರಿಸಿಲ್ಪಟ್ಟರು. ಪಟ್ಟಣಗಳು ಅವಶೇಷಗಳಾಗಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement