ಇಸ್ರೇಲಿ ದಾಳಿಯಲ್ಲಿ ಗಾಜಾದ ಹಮಾಸ್ ಸರ್ಕಾರದ ಮುಖ್ಯಸ್ಥ, ಇತರ ಉನ್ನತ ಅಧಿಕಾರಿಗಳು ಸಾವು

ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಗಾಜಾದ ಸರ್ಕಾರದ ಮುಖ್ಯಸ್ಥ ಇಸಾಮ್ ಅಲ್-ದಾಲಿಸ್ ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳು ಸತ್ತಿದ್ದಾರೆ ಎಂದು ಹಮಾಸ್ ದೃಢಪಡಿಸಿದೆ. ಈ ದಾಳಿಯಲ್ಲಿ ಆಂತರಿಕ ಸಚಿವಾಲಯದ ಮುಖ್ಯಸ್ಥ ಮಹ್ಮದ್ ಅಬು ವತ್ಫಾ ಮತ್ತು ಆಂತರಿಕ ಭದ್ರತಾ ಸೇವೆಯ ಮಹಾನಿರ್ದೇಶಕ ಬಹ್ಜತ್ ಅಬು ಸುಲ್ತಾನ್ ಸಹ ಸಾವಿಗೀಡಾಗಿದ್ದಾರೆ ಎಂದು ಹಮಾಸ್‌ ಹೇಳಿದೆ.
ಎಎಫ್‌ಪಿ (AFP) ವರದಿಯ ಪ್ರಕಾರ “ಈ ನಾಯಕರು, ಅವರ ಕುಟುಂಬಗಳೊಂದಿಗೆ, ಜಿಯೋನಿಸ್ಟ್ ಆಕ್ರಮಣ ಪಡೆಗಳ ವಿಮಾನದ ದಾಳಿಗೆ ಗುರಿಯಾದ ನಂತರ ಹುತಾತ್ಮರಾಗಿದ್ದಾರೆ” ಎಂದು ಹಮಾಸ್ ಹೇಳಿಕೆ ತಿಳಿಸಿದೆ.
ಇತ್ತೀಚಿನ ದಾಳಿಯು ಎರಡು ತಿಂಗಳ ಕದನ ವಿರಾಮವನ್ನು ಛಿದ್ರಗೊಳಿಸಿತು, ಹಮಾಸ್ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದ ನಂತರ ಮತ್ತು ಕದನ ವಿರಾಮ ಪ್ರಸ್ತಾಪಗಳನ್ನು ತಿರಸ್ಕರಿಸಿದ ನಂತರ ಇಸ್ರೇಲಿ ಪಡೆಗಳು ಮಿಲಿಟರಿ ಕಾರ್ಯಾಚರಣೆಗಳನ್ನು ಶುರು ಮಾಡಿವೆ.

ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ವಿರುದ್ಧ “ಬಲವಾದ ಕ್ರಮ” ತೆಗೆದುಕೊಳ್ಳಲು ಮಿಲಿಟರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. “ಇನ್ನು ಮುಂದೆ ಇಸ್ರೇಲ್ ಹೆಚ್ಚಿನ ಮಿಲಿಟರಿ ಬಲದೊಂದಿಗೆ ಹಮಾಸ್ ವಿರುದ್ಧ ಕಾರ್ಯನಿರ್ವಹಿಸುತ್ತದೆ” ಎಂದು ನೆತನ್ಯಾಹು ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲಿ ವಾಯು ದಾಳಿಯಲ್ಲಿ 326 ಜನರು ಸಾವಿಗೀಡಾಗಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ . ಅ
ಇಸ್ರೇಲಿ ಮಿಲಿಟರಿಯು ಡಜನ್‌ಗಟ್ಟಲೆ ಟಾರ್ಗೆಟ್‌ಗಳ ಮೇಲೆ ದಾಳಿ ಮಾಡಿದೆ ಎಂದು ಹೇಳಿದೆ ಮತ್ತು ಅಗತ್ಯವಿರುವವರೆಗೆ ಕಾರ್ಯಾಚರಣೆಗಳು ಮುಂದುವರಿಯುತ್ತದೆ ಎಂದು ಎಚ್ಚರಿಸಿದೆ, ಭೂ ಯುದ್ಧದ ಸಂಭಾವ್ಯ ಪುನರಾರಂಭದ ಬಗ್ಗೆ ಸುಳಿವು ನೀಡಿದೆ.
ಏತನ್ಮಧ್ಯೆ, ಜನವರಿಯಲ್ಲಿ ಒಪ್ಪಂದಕ್ಕೆ ಬರಲಾದ ಕದನ ವಿರಾಮವನ್ನು ಇಸ್ರೇಲ್ ಉಲ್ಲಂಘಿಸಿದೆ ಎಂದು ಹಮಾಸ್ ಆರೋಪಿಸಿದೆ ಹಾಗೂ ಗಾಜಾದಲ್ಲಿ ಉಳಿದಿರುವ 59 ಒತ್ತೆಯಾಳುಗಳ ಭವಿಷ್ಯವನ್ನು ಇದು ಅನಿಶ್ಚಿತಗೊಳಿಸಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement