ಕದನ ವಿರಾಮದ ನಂತರ ಹಮಾಸ್‌ ಮೇಲೆ ಇಸ್ರೇಲ್‌ನ ಅತಿದೊಡ್ಡ ದಾಳಿ ; 200 ಕ್ಕೂ ಹೆಚ್ಚು ಜನರು ಸಾವು

ನವದೆಹಲಿ: ವಾರಗಳ ಕದನ ವಿರಾಮ ಮಾತುಕತೆಗಳು ಸ್ಥಗಿತಗೊಂಡ ನಂತರ ಇಸ್ರೇಲಿ ಮಿಲಿಟರಿಯು ಹಮಾಸ್ ಮೇಲೆ “ವಿಸ್ತೃತ ದಾಳಿ” ನಡೆಸಿದ್ದರಿಂದ ಮಂಗಳವಾರ ಗಾಜಾದಲ್ಲಿ ಕನಿಷ್ಠ 220 ಜನರು ಸಾವಿಗೀಡಾಗಿದ್ದಾರೆ.
ಇದು ಜನವರಿ 19 ರಂದು ಕದನ ವಿರಾಮ ಪ್ರಾರಂಭವಾದ ನಂತರದಲ್ಲಿ ಯುದ್ಧ ಪೀಡಿತ ಗಾಜಾದಲ್ಲಿ ನಡೆದ ಅತಿದೊಡ್ಡ ದಾಳಿಯಾಗಿದೆ. ರಂಜಾನ್ ತಿಂಗಳಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ “ಹೆಚ್ಚಾಗಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು” ಸಾವಿಗೀಡಾಗಿದ್ದಾರೆ ಮತ್ತು ಸುಮಾರು 150 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ. ಉತ್ತರ ಗಾಜಾ, ಗಾಜಾ ನಗರ ಮತ್ತು ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯ ದೇರ್ ಅಲ್-ಬಲಾಹ್, ಖಾನ್ ಯೂನಿಸ್ ಮತ್ತು ರಫಾ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸ್ಫೋಟಗಳು ಕೇಳಿಬಂದವು.
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (IDF), ಮಘಳವಾರ ಬೆಳಿಗ್ಗೆ X ನಲ್ಲಿ ಪೋಸ್ಟ್‌ನಲ್ಲಿ, “ರಾಜಕೀಯ ಎಚೆಲಾನ್” ಗೆ ಅನುಗುಣವಾಗಿ “ಗಾಜಾ ಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕ ಸಂಘಟನೆಗೆ ಸೇರಿದ ಭಯೋತ್ಪಾದಕ ಟಾರ್ಗೆಟ್‌ಗಳ ಮೇಲೆ ವ್ಯಾಪಕವಾದ ದಾಳಿಗಳನ್ನು ನಡೆಸಲಾಗುತ್ತಿದೆ” ಎಂದು ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಅಮೆರಿಕ ದಾಳಿಗೆ ಪ್ರತಿ ದಾಳಿ : ಕತಾರ್, ಇರಾಕಿನಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್‌

ಗಾಜಾದ ಪಕ್ಕದ ಪ್ರದೇಶಗಳಿಗೆ ಹತ್ತಿರವಿರುವ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಇಸ್ರೇಲ್ ಆದೇಶಿಸಿದೆ. “ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ನಿಂದ ಪದೇಪದೇ ನಿರಾಕರಣೆ ಮತ್ತು ಅಮೆರಿಕ ಅಧ್ಯಕ್ಷೀಯ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಇತರ ಸಂದಾನಕಾರರಿಂದ ಎಲ್ಲಾ ಪ್ರಸ್ತಾಪಗಳನ್ನು ಹಮಾಸ್‌ ತಿರಸ್ಕರಿಸಿದ ನಂತರ” ದಾಳಿಗೆ ಆದೇಶಿಸಲಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿದೆ.
“ಐಡಿಎಫ್ ಈ ಸಮಯದಲ್ಲಿ, ಯುದ್ಧದ ಉದ್ದೇಶಗಳನ್ನು ಸಾಧಿಸಲು ಗಾಜಾ ಪಟ್ಟಿಯಾದ್ಯಂತ ಹಮಾಸ್ ಭಯೋತ್ಪಾದಕ ಸಂಘಟನೆಯ ಗುರಿಗಳ ಮೇಲೆ ದಾಳಿ ಮಾಡುತ್ತಿದೆ, ಏಕೆಂದರೆ ನಮ್ಮ ಎಲ್ಲಾ ಒತ್ತೆಯಾಳುಗಳು, ಜೀವಂತ ಮತ್ತು ಸತ್ತವರ ಬಿಡುಗಡೆ ಸೇರಿದಂತೆ ರಾಜಕೀಯ ವಲಯದಿಂದ ಅವುಗಳನ್ನು ನಿರ್ಧರಿಸಲಾಗಿದೆ” ಎಂದು ಅದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

“ಯುದ್ಧವನ್ನು ಪುನರಾರಂಭಿಸುವ ನೆತನ್ಯಾಹು ಅವರ ನಿರ್ಧಾರವು ಒತ್ತೆಯಾಳುಗಳ ಜೀವವನ್ನೇ ಒತ್ತೆಯಿಟ್ಟಂತಾಗಿದೆ ಹಾಗೂ ಅವರಿಗೆ ಮರಣದಂಡನೆ ವಿಧಿಸುವ ನಿರ್ಧಾರವಾಗಿದೆ” ಎಂದು ಹಮಾಸ್ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಇಸ್ರೇಲಿ ನಾಯಕ ಆಂತರಿಕ ಬಿಕ್ಕಟ್ಟಿನಿಂದ ದೂರವಿರಲು ಹೋರಾಟವನ್ನು ರಾಜಕೀಯ “ಲೈಫ್ ಬೋಟ್” ಆಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದಾಳಿಗಳನ್ನು ನಡೆಸುವ ಮೊದಲು ಇಸ್ರೇಲ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವನ್ನು ಸಮಾಲೋಚಿಸಿದೆ ಎಂದು ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ.
ಅಕ್ಟೋಬರ್ 7, 2023 ರಂದು ಹಮಾಸ್ ದಕ್ಷಿಣ ಇಸ್ರೇಲ್‌ಗೆ ಗಡಿಯಾಚೆಗಿನ ದಾಳಿ ಮಾಡಿದ ನಂತರ ಗಾಜಾ ಯುದ್ಧವು ಪ್ರಾರಂಭವಾಯಿತು ಮತ್ತು ಈ ದಾಳಿಯಲ್ಲಿ ಸುಮಾರು 1,200 ಜನರನ್ನು ದಾಳಿಗೀಡಾದರು. ಅವರಲ್ಲಿ ಹೆಚ್ಚಿನವರು ನಾಗರಿಕರು. ಹಮಾಸ್‌ 251 ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ಗಾಜಾಕ್ಕೆ ಒಯ್ದರು.
ಅಂದಿನಿಂದ ಇಸ್ರೇಲ್‌ನ ಪ್ರತೀಕಾರದ ದಾಳಿಗಳು 48,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಕೊಂದಿವೆ ಮತ್ತು 1.12 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ವೀಡಿಯೊ...| ಹಾಸಿಗೆ, ಶೌಚಾಲಯ, ಮೈಕ್ರೋವೇವ್ ಒಲೆ, ಆಹಾರ ತಯಾರಿಕೆ...: ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ ಹಾರುವ ಹೋಟೆಲ್ ಕೂಡ ಹೌದು..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement