ಟ್ರಂಪ್‌ಗೆ ಕ್ಸಿ ಟಕ್ಕರ್‌ ; ಅಮೆರಿಕದ ಸರಕುಗಳ ಮೇಲೆ ಶೇ 125% ತೆರಿಗೆ ವಿಧಿಸಿದ ಚೀನಾ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಪ್ರಾರಂಭಿಸಿದ ಸುಂಕ ಸಮರ ಮುಗಿಯುವ ಹಾಗೆ ಕಾಣುತ್ತಿಲ್ಲ.
ಅದಿ ಈಗ ಅಮೆರಿಕ ಹಾಗೂ ಚೀನಾ ನಡುವಿನ ವ್ಯಾಪಾರ ಸಮರವಾಗಿ ಮಾರ್ಪಟ್ಟಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್‌ ಚೀನಾದ (China) ಮೇಲೆ ವಿಧಿಸಿದ ತೆರಿಗೆಯ ಪ್ರತೀಕಾರವಾಗಿ ಈಗ ಅಮೆರಿಕದ ಸರಕುಗಳ ಮೇಲೆ ಚೀನಾ 125%ರಷ್ಟು ಸುಂಕ ವಿಧಿಸಿದೆ.
ಅದು ಮೂರು ದಿನಗಳ ಹಿಂದೆ ಅಮೆರಿಕದ ಸರಕುಗಳ ಮೇಲೆ ವಿಧಿಸಿದ್ದ ಸುಂಕವನ್ನು 84% ರಿಂದ 125%ಕ್ಕೆ ಹೆಚ್ಚಿಸಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ. ಯುರೋಪಿಯನ್‌ ಒಕ್ಕೂಟದಿಂದ ಬಂದ ಬೆಂಬಲದ ಬಳಿಕ ಅಧ್ಯಕ್ಷರಿಂದ ಈ ಹೇಳಿಕೆಗಳು ಬಂದಿವೆ. ಗುರುವಾರ ಟ್ರಂಪ್‌ ಸುಂಕ ವಿರಾಮವನ್ನು ಘೋಷಿಸಿದ್ದು, ಚೀನಾ ಬಿಟ್ಟು ಉಳಿದ ರಾಷ್ಟ್ರಗಳಿಗೆ 90 ದಿನಗಳ ಸುಂಕ ವಿರಾಮ ನೀಡಿದ್ದರು. ಚೀನಾವನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ಮಾತ್ರ ಅಲ್ಲದೇ ಸುಂಕವನ್ನು ಶೇ.125 ರಿಂದ ಶೇ.145 ಕ್ಕೆ ಏರಿಸಿದೆ.

ಈಗ ಇದಕ್ಕೆ ಪ್ರತಿಯಾಗಿ ಚೀನಾವು ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇಕಡಾ 84 ರಿಂದ 125 ಕ್ಕೆ ಹೆಚ್ಚಿಸುವುದಾಗಿ ಹೇಳಿದೆ. ಚೀನಾದ ಮೇಲೆ ಅಮೆರಿಕವು ಅಸಹಜವಾಗಿ ಹೆಚ್ಚಿನ ಸುಂಕಗಳನ್ನು ವಿಧಿಸುವುದು ಅಂತಾರಾಷ್ಟ್ರೀಯ ವ್ಯಾಪಾರ ನಿಯಮಗಳು, ಮೂಲಭೂತ ಆರ್ಥಿಕ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದು ಬೀಜಿಂಗ್‌ನ ಸ್ಟೇಟ್ ಕೌನ್ಸಿಲ್ ಸುಂಕ ಆಯೋಗವು ಹಣಕಾಸು ಸಚಿವಾಲಯ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾವೋ ನಿಂಗ್‌ ದೇಶದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ”ಅಮೆರಿಕದ ಬೆದರಿಕೆಗಳಿಗೆ ಚೀನಾ ಹೆರುವುದಿಲ್ಲ ಎಂದು ಹೇಳಿದ್ದಾರೆ. ಅವರು 72 ವರ್ಷಗಳಷ್ಟು ಹಳೆಯ ವೀಡಿಯೊ ಹಂಚಿಕೊಂಡಿದ್ದು, ಅಮೆರಿಕದ ಸುಂಕ ಹೇರಿಕೆಗೆ ಟಾಂಗ್‌ ಕೊಟ್ಟಿದ್ದಾರೆ. 1953, ಅಮೆರಿಕದ ಜೊತೆಗೆ ಚೀನಾ ಸಂಘರ್ಷಕ್ಕೆ ಇಳಿದಿದ್ದ ಸಮಯ. ಆಗ ಚೀನಾದ ಮುಂಚೂಣಿ ನಾಯಕನಾಗಿದ್ದ ಮಾವೋ ಜಿದಾಂಗ್‌, ದೇಶ ಮತ್ತು ದೇಶದ ಜನರ ಹೋರಾಟದ ಬಗ್ಗೆ ಮಾತನಾಡಿದ್ದರು. ಅಮೆರಿಕದ ಬೆದರಿಕೆಗಳಿಗೆ ಯಾವತ್ತಿಗೂ ಹೆದರೋದಿಲ್ಲ, ಕೊನೆಯ ಕ್ಷಣದವರೆಗೂ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದರು.
ಅಮೆರಿಕದ ನಡೆಯನ್ನು ವಿರೋಧಿಸಲು ಚೀನಾ ಹಲವು ರಾಷ್ಟ್ರಗಳ ಬಳಿ ಬೆಂಬಲವನ್ನು ಕೋರಿದೆ. ಯುರೋಪಿಯನ್‌ ಒಕ್ಕೂಟ, ಏಷಿಯಾನ್‌ ರಾಷ್ಟ್ರಗಳನ್ನು ಸಂಪರ್ಕಿಸುತ್ತಿರುವ ಚೀನಾ, ಅಮೆರಿಕದ ಸುಂಕದ ವಿರುದ್ಧ ಜೊತೆಯಾಗಿ ಹೋರಾಡಲು ಸಹಕಾರ ನೀಡುವಂತೆ ಕೋರುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹಾಸಿಗೆ, ಶೌಚಾಲಯ, ಮೈಕ್ರೋವೇವ್ ಒಲೆ, ಆಹಾರ ತಯಾರಿಕೆ...: ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ ಹಾರುವ ಹೋಟೆಲ್ ಕೂಡ ಹೌದು..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement