ಅಮೆರಿಕದ ಅಧ್ಯಕ್ಷ ಟ್ರಂಪ್‌ ಹತ್ಯೆ ಮಾಡಲು ಪೋಷಕರನ್ನೇ ಕೊಂದ 17 ವರ್ಷದ ವಿದ್ಯಾರ್ಥಿ…!

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇರೆಗೆ ವಿಸ್ಕಾನ್ಸಿನ್‌ನ 17 ವರ್ಷದ ನಿಕಿತಾ ಕಾಸಾಪ್ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಿ ಸರ್ಕಾರವನ್ನು ಉರುಳಿಸುವ ಸಲುವಾಗಿ ತನ್ನ ಪೋಷಕರನ್ನೇ ಕೊಂದಿದ್ದಾನೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಟ್ರಂಪ್ ಹತ್ಯೆ ಮಾಡುವ ತನ್ನ ಯೋಜನೆ ಕಾರ್ಯಗತಗೊಳಿಸುವ ಸಲುವಾಗಿ ಹಣ ಕೂಡಿಸಲು 17 ವರ್ಷದ ಅಪ್ರಾಪ್ತ ತನ್ನ ಪೋಷಕರನ್ನೇ ಹತ್ಯೆ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.ಫೆಬ್ರವರಿ 11 ರಂದು ನಿಕಿತಾ ಕಾಸಾಪ್ ತನ್ನ ತಾಯಿ ಟಟಿಯಾನಾ ಕಾಸಾಪ್ (35) ಮತ್ತು ಮಲತಂದೆ ಡೊನಾಲ್ಡ್ ಮೇಯರ್ (51) ಅವರನ್ನು ಮನೆಯಲ್ಲಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಳೆದ ಮಾರ್ಚ್‍ನಲ್ಲಿ ನಿಕಿಟಾ ಕಸಪ್ ಎಂಬ ವಿದ್ಯಾರ್ಥಿಯನ್ನು ವೂಕೇಶಾದಲ್ಲಿರುವ ಆತನ ಮನೆಯಿಂದಲೇ ಪೊಲೀಸರು ಬಂಧಿಸಿದ್ದರು. ವಿಚಾರಣೆಯಲ್ಲಿ ಆತ ಟ್ರಂಪ್‌ ಹತ್ಯೆಗೆ ಯೋಜನೆ ರೂಪಿಸಿದ್ದಾಗಿ ತಿಳಿಸಿದ್ದಾನೆ. ಅಷ್ಟೇ ಅಲ್ಲದೆ ಇದಕ್ಕಾಗಿ ಸಂಚು ರೂಪಿಸಲು “ಹಣ ಪಡೆಯಲು ಪೋಷಕರನ್ನೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ರಾಜಕೀಯ ಮುಖಂಡರನ್ನು ಹತ್ಯೆ ಮಾಡಿ ಅರಾಜಕತೆ ಸೃಷ್ಟಿಸುವ ಯೋಜನೆ, ಯುವಕನ ಬಳಿ ಪತ್ತೆಯಾದ ಮೂರು ಪುಟಗಳ ದಾಖಲೆಯಿಂದ ಪತ್ತೆಯಾಗಿದೆ. “ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಹತ್ಯೆ ಮಾಡುವ ಮೂಲಕ ಟ್ರಂಪ್‌ ಸರ್ಕಾರವನ್ನು ಕಿತ್ತು ಹಾಕಿ ಅರಾಜಕತೆ ಸೃಷ್ಟಿಸುವ ಯೋಜನೆಯು ಈತನ ಬಳಿ ಪತ್ತೆಯಾದ ಮೂರು ಪುಟಗಳ ದಾಖಲೆಯಿಂದ ಪತ್ತೆಯಾಗಿದೆ.

ಫೆಬ್ರುವರಿ 11ರಂದು ಈತ ಪೋಷಕರನ್ನು ಹತ್ಯೆ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ. ಯುವಕ ಅಡುಗೆಮನೆಯ ಬಳಿ ಹೊದಿಕೆಗಳ ರಾಶಿಯಲ್ಲಿ ಮೃತದೇಹಗಳನ್ನು ಹುದುಗಿಸಿ ಇಟ್ಟಿದ್ದ.
ಹದಿನೇಳು ವರ್ಷದ ಪ್ರೌಢಶಾಲಾ ವಿದ್ಯಾರ್ಥಿ ನಿಕಿತಾ ಕಾಸಾಪ್ ವಿರುದ್ಧ ವೌಕೇಶಾ ಕೌಂಟಿಯಲ್ಲಿ ಒಂಬತ್ತು ಅಪರಾಧಗಳ ಆರೋಪವಿದೆ. ಇದರಲ್ಲಿ ಎರಡು ಉದ್ದೇಶಪೂರ್ವಕ ನರಹತ್ಯೆ, ಎರಡು ಶವವನ್ನು ಮರೆಮಾಡಿದ್ದಕ್ಕಾಗಿ, ಹಾಗೆಯೇ 10,000 ಡಾಲರ್ (ಸುಮಾರು ₹ 8.6 ಲಕ್ಷ) ಗಿಂತ ಹೆಚ್ಚಿನ ಕಳ್ಳತನದ ಆರೋಪಗಳು ಸೇರಿವೆ. ಏಪ್ರಿಲ್ 9 ರಂದು ಪ್ರಾಥಮಿಕ ವಿಚಾರಣೆಗಾಗಿ ನಿಕಿತಾ ಕಾಸಾಪ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮತ್ತು 1 ಮಿಲಿಯನ್ ಯುಎಸ್ ಡಾಲರ್ (ಸುಮಾರು ರೂ. 8.6 ಕೋಟಿ) ಬಾಂಡ್ ಮೇಲೆ ಬಂಧನದಲ್ಲಿದ್ದಾನೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement