ವೀಡಿಯೊ..| ಒಳಗೆ ನುಗ್ಗಿ ಹೊಡೀತಿದ್ದಾರೆ, ದೇವರೇ ನಮ್ಮನ್ನು ಕಾಪಾಡಬೇಕು : ಭಾರತದ ದಾಳಿ ನಂತ್ರ ಸಂಸತ್ತಿಲ್ಲಿ ಕಣ್ಣೀರಿಟ್ಟ ಪಾಕ್‌ ಸಂಸದ-ವೀಕ್ಷಿಸಿ

ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಪಾಕಿಸ್ತಾನದ ಸಂಸತ್ತಿನಲ್ಲಿಯೂ ಭಾರತದ ದಾಳಿಯ ಭೀತಿ ಪ್ರತಿಧ್ವನಿಸಿದೆ.
ಭಾರತವು ಪಾಕಿಸ್ತಾನದ ಸಂಸತ್ತಿನ ಅಧಿವೇಶನದಲ್ಲಿ, ಸಂಸದ ಮತ್ತು ಮಾಜಿ ಸೇನಾ ಮೇಜರ್ ತಹೀರ್ ಇಕ್ಬಾಲ್ ಕಣ್ಣೀರಿಟ್ಟರು. ಅದು ಈಗ ವೈರಲ್‌ ಆಗುತ್ತಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತ ಸೇನೆಯ ನಿಖರ ದಾಳಿಯಿಂದ ಪಾಕಿಸ್ತಾನ ತತ್ತರಿಸಿದೆ, ಅಲ್ಲಿ ಭಯ ಆವರಿಸಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಭಾರತದ ದಾಳಿಯಿಂದ ಪಾಕಿಸ್ತಾನವನ್ನು ರಕ್ಷಿಸುವಂತೆ ಅವರು ಪಾಕಿಸ್ತಾನದ ಸಂಸತ್ತಿನಲ್ಲಿ ಕಣ್ಣೀರು ಹಾಕುತ್ತ ಮನವಿ ಮಾಡಿರುವುದು ಕಂಡುಬಂದಿದೆ.

ಭಾರತದವರು ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯುತ್ತಿದ್ದು, ನಮ್ಮನ್ನು ದೇವರೇ ಕಾಪಾಡಬೇಕು’ ಎಂದು ಅವರು ಸಂಸತ್ತಿನಲ್ಲಿ ಕಣ್ಣೀರು ಹಾಕಿದ್ದಾರೆ. “ಓ ದೇವರೇ, ನಮ್ಮನ್ನು ಕಾಪಾಡು ” ದೇವರು ನಮ್ಮ ದೇಶವನ್ನು ರಕ್ಷಿಸಲಿ ಮತ್ತು ನಮ್ಮನ್ನು ಒಗ್ಗಟ್ಟಿನಿಂದ ಇಡಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದು ಸಂಸದರಾದ ಮಾಜಿ ಸೇನಾ ಮೇಜರ್ ತಹೀರ್ ಇಕ್ಬಾಲ್ ಸಂಸತ್ತಿನಲ್ಲಿ ಗದ್ಗದಿತರಾಗಿ ಮಾತನಾಡಿರುವ ವೀಡಿಯೊ ಎಲ್ಲೆಡೆ ವೈರಲ್ ಆಗತೊಡಗಿದೆ. ಮತ್ತೊಬ್ಬ ಮಹಿಳಾ ಸಂಸದೆಯೂ ಭಾರತದ ದಾಳಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಜನರನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.

ಬುಧವಾರ ರಾತ್ರಿ ಪಾಕಿಸ್ತಾನ ಭಾರತದ 15 ನಗರಗಳನ್ನು ಗುರಿಯಾಗಿಸಿಕೊಂಡು ಡ್ರೋಣ್‌ ಹಾಗೂ ಕ್ಷಿಪಣಿ ದಾಳಿ ನಡೆಸಿತ್ತು. ರಾತ್ರಿ 1 ಗಂಟೆಯ ಸುಮಾರಿಗೆ ಪಾಕಿಸ್ತಾನ ಡ್ರೋನ್‌ಗಳೊಂದಿಗೆ ದಾಳಿ ಮಾಡಿತು ಮತ್ತು ಕ್ಷಿಪಣಿಗಳನ್ನು ಹಾರಿಸಿತು. ಆದರೆ ಪಾಕಿಸ್ತಾನದ ಪ್ರತಿಯೊಂದು ದಾಳಿಯನ್ನು ಭಾರತ ವಿಫಲಗೊಳಿಸಿದೆ. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಭಾರತ ಲಾಹೋರ್ ನಲ್ಲಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ನ್ನು ನಾಶ ಮಾಡಿ ಅದಕ್ಕೆ ಬಲವಾದ ಹೊಡೆತ ನೀಡಿದೆ. ಅಲ್ಲದೆ ಪಾಕಿಸ್ತಾನದ ರಾಜಧಾನಿ ಇಸ್ಲಾಬಾಬಾದ್‌, ಸಿಯಾಲ್‌ಕೋಟ್‌ ಹಾಗೂ ಇತರ ನಗರಗಳ ಮೇಲೆಯೂ ವೈಮಾನಿಕ ದಾಳಿ ನಡೆಸಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಅಮೆರಿಕ ದಾಳಿಗೆ ಪ್ರತಿ ದಾಳಿ : ಕತಾರ್, ಇರಾಕಿನಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement