ಜಮ್ಮು: ಪಾಕಿಸ್ತಾನ’ ಮತ್ತೆ ಜಮ್ಮು ಸೇರಿದಂತೆ ವಿವಿಧೆಡೆ ದಾಳಿ ನಡೆಸಿದೆ. ಶುಕ್ರವಾರ ಸಂಜೆ ದಕ್ಷಿಣ ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣ ಮತ್ತು ಆವಂತಿಪೋರಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ.
ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ನಾದ್ಯಂತ 20 ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಡ್ರೋನ್ಗಳು ಸತತ ಎರಡನೇ ದಿನವೂ ದಾಳಿ ನಡೆಸಿವೆ. ಅವಂತಿಪೋರಾದ ವಾಯುನೆಲೆಯ ಮೇಲೆ ಗುರಿಯಿಟ್ಟು ನಡೆಸಲಾದ ದಾಳಿಯನ್ನು ಭಾರತ ವಿಫಲಗೊಳಿಸಿದೆ.ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ಉತ್ತರದ ಭಾಗದ ಬಾರಾಮುಲ್ಲಾದಿಂದ ದಕ್ಷಿಣದ ಭುಜ್ವರೆಗಿನ ಅಂತಾರಾಷ್ಟ್ರೀಯ ಗಡಿ ಮತ್ತು ಪಾಕಿಸ್ತಾನದ ನಿಯಂತ್ರಣ ರೇಖೆಯ ಉದ್ದಕ್ಕೂ 26 ಸ್ಥಳಗಳಲ್ಲಿ ಡ್ರೋನ್ಗಳನ್ನು ನೋಡಲಾಗಿದೆ. ಇವುಗಳಲ್ಲಿ ಶಂಕಿತ ಶಸ್ತ್ರಸಜ್ಜಿತ ಡ್ರೋನ್ಗಳು ಸೇರಿವೆ . ನಾಗರಿಕ ಮತ್ತು ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಸೇನೆ ಹೇಳಿಕೆಯೊಂದು ತಿಳಿಸಿದೆ.
ಬಾರಾಮುಲ್ಲಾ, ಶ್ರೀನಗರ, ಅವಂತಿಪೋರಾ, ನಗ್ರೋಟಾ, ಜಮ್ಮು, ಫಿರೋಜ್ಪುರ, ಪಠಾಣ್ಕೋಟ್, ಫಾಜಿಲ್ಕಾ, ಲಾಲ್ಗಢ್ ಜಟ್ಟಾ, ಜೈಸಲ್ಮೇರ್, ಬಾರ್ಮರ್, ಭುಜ್, ಕ್ವಾರ್ಬೆಟ್ ಮತ್ತು ಲಖಿ ನಾಲಾ ಸ್ಥಳಗಳಲ್ಲಿ ಪಾಕಿಸ್ತಾನದ ಡ್ರೋನ್ ದಾಳಿ ನಡೆದಿದೆ. ಅಲ್ಲದೆ, ಸಾಂಬಾ, ಪಠಾಣ್ ಕೋಟ್ ಮತ್ತು ಜಮ್ಮುವಿನಲ್ಲಿ ಡ್ರೋನ್ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಶ್ರೀನಗರ ವಿಮಾನ ನಿಲ್ದಾಣವು ಡ್ರೋನ್ ದಾಳಿಗೆ ಒಳಗಾಗಿದ್ದು, ಈಗ ಅದನ್ನು ಪುನರಾರಂಭಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಪಂಜಾಬಿನ ಫಿರೋಜ್ ಪುರದಲ್ಲಿ ಮನೆಯೊಂದರ ಮೇಲೆ ಪಾಕಿಸ್ತಾನದ ಡ್ರೋನ್ ಒಂದು ಅಪ್ಪಳಿಸಿದ್ದು,ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಪಂಜಾಬ್, ರಾಜಸ್ಥಾನ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸುತ್ತಿದೆ. S-400 ಭಾರತದ ವಾಯು ರಕ್ಷಣಾ ವ್ಯವಸ್ಥೆಯಿಂದ ಎಲ್ಲಾ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ.
ಗುರುವಾರ ರಾತ್ರಿ ಪಾಕ್ ಸೇನೆಯು ಎಲ್ಒಸಿ ಉದ್ದಕ್ಕೂ ಭಾರೀ ಕ್ಯಾಲಿಬರ್ ಶಸ್ತ್ರಾಸ್ತ್ರಗಳೊಂದಿಗೆ ಶೆಲ್ ದಾಳಿ ನಡೆಸಿತು. ಲೇಹ್ನಿಂದ ಸರ್ ಕ್ರೀಕ್ವರೆಗಿನ ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ 36 ಸ್ಥಳಗಳಲ್ಲಿ 300-400 ಡ್ರೋನ್ಗಳನ್ನು ಬಳಸಿಕೊಂಡು ದಾಳಿ ನಡೆಸಿತ್ತು. ಎಲ್ಲವನ್ನೂ ಹೊಡೆದುರುಳಿಸಿದ್ದೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಜಮ್ಮು ಮತ್ತು ಅದರ ಸುತ್ತಮುತ್ತಲಿನ ಪ್ರತಿಯೊಬ್ಬರು ಮುಂದಿನ ಕೆಲವು ಗಂಟೆಗಳ ಕಾಲ ದಯವಿಟ್ಟುಮನೆಯಲ್ಲಿರಿ ಅಥವಾ ನಿಮಗೆ ಆರಾಮದಾಯಕ ಸ್ಥಳದಲ್ಲಿಯೇ ಇರಿ. ವದಂತಿಗಳನ್ನು ನಿರಾಕರಿಸಿ, ಆಧಾರರಹಿತ ಅಥವಾ ದೃಢೀಕರಿಸದ ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ