ಆಪರೇಶನ್‌ ಸಿಂಧೂರ | ಪಾಕಿಸ್ತಾನ ಅಣ್ವಸ್ತ್ರ ಸಂಗ್ರಹ ಘಟಕಕ್ಕೆ ಹಾನಿಯಾಯ್ತೆ : ಈಜಿಪ್ಟಿನಿಂದ ಬೋರಾನ್‌ ಆಮದು..? ಏನಿದು ರಾಸಾಯನಿಕ…

ಇಸ್ಲಾಮಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ನಡೆದ ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿರುವ ಭಾರತ ಪಾಕಿಸ್ತಾನದ ಅಣ್ವಸ್ತ್ರ ಶೇಖರಣಾ ಕೇಂದ್ರಗಳ ಮೇಲೂ ಕ್ಷಿಪಣಿ ಮಾಡಿದೆ ಎಂದು ಕೆಲವು ವರದಿಗಳು ಹೇಳುತ್ತಿದ್ದು, ಈ ಪ್ರದೇಶದಲ್ಲಿ ವಿಕಿರಣ ಸೋರಿಕೆ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾದಲ್ಲಿರುವ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿದ್ದು, ಈ ವಾಯು ನೆಲೆ ಕಿರಾನಾ ಬೆಟ್ಟಗಳೊಂದಿಗೆ ಸಂಪರ್ಕ ಹೊಂದಿದೆ. ಕಿರಾನಾ ಬೆಟ್ಟದಲ್ಲಿ ಪಾಕ್‌ ಅಣ್ವಸ್ತ್ರ ನೆಲೆ ಇದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳ ಚರ್ಚೆಯಾಗುತ್ತಿವೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಪಾಕಿಸ್ತಾನದ ಕಿರಾನಾ ಬೆಟ್ಟದಲ್ಲಿರುವ ಅಣ್ವಸ್ತ್ರ ನೆಲೆ ಮೇಲೆ ಭಾರತ ದಾಳಿ ಮಾಡಿದೆ ಎಂಬ ವದಂತಿಗಳನ್ನು ತಳ್ಳಿ ಹಾಕಿದ್ದರು.
ಕಿರಾನಾ ಬೆಟ್ಟಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರ ನೆಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಗುರಿ ಉಗ್ರನೆಲೆಗಳು ಮಾತ್ರ ಆಗಿತ್ತು. ಅವುಗಳನ್ನು ಹೊಡೆದುರುಳಿಸಿದ್ದೇವೆ. ಕಿರಾನಾ ಬೆಟ್ಟಗಳ ಮೇಲೆ ನಾವು ದಾಳಿ ಮಾಡಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.

ಅಮೆರಿಕದಿಂದ ವಿಶೇಷ ವಿಮಾನಗಳ ಆಗಮನ..?
ಏತನ್ಮಧ್ಯೆ ಭಾರತೀಯ ಸೇನೆ ದಾಳಿ ಬಳಿಕ ಪಾಕಿಸ್ತಾನದ ಅಣ್ವಸ್ತ್ರ ಗೋದಾಮು ಇದೆ ಎಂದು ಹೇಳಲಾಗುತ್ತಿರುವ ಕಿರಾನಾ ಬೆಟ್ಟದಲ್ಲಿ ವಿಕಿರಣ ಸೋರಿಕೆಯಾಗುತ್ತಿದೆ ಎಂಬ ವದಂತಿಗಳ ನಡುವೆ ಅಮೆರಿಕ ಮತ್ತು ಈಜಿಪ್ಟ್ ನಿಂದ ಎರಡು ವಿಶೇಷ ವಿಮಾನಗಳು ಪಾಕಿಸ್ತಾನಕ್ಕೆ ಆಗಮಿಸಿದ್ದು, ಈ ವಿಶೇಷ ವಿಮಾನಗಳು ವಿಕಿರಣ ಸೋರಿಕೆ ಪತ್ತೆ ಹಚ್ಚಲಿವೆ ಎಂದು ಹೇಳಲಾಗಿದೆ. ಪಾಕಿಸ್ತಾನಕ್ಕೆ ಈಜಪ್ಟಿನಿಂದ ಅಪಾರ ಪ್ರಮಾಣದ ಬೋರಾನ್ ರಾಸಾಯನಿಕವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ವಿಕಿರಣ ಸೋರಿಕೆಯನ್ನು ತಟಸ್ಥಗೊಳಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಫ್ಲೈಟ್‌ರಾಡಾರ್ 24 ದತ್ತಾಂಶದ ಪ್ರಕಾರ, ಈಜಿಪ್ಟ್ ವಾಯುಪಡೆಯ ಸಾರಿಗೆ ವಿಮಾನ EGY1916, ಪಾಕಿಸ್ತಾನ ತಲುಪಿದೆ. ಸ್ಪೇಷಿಯಲ್ ಡಿಸ್ಟ್ರಿಬ್ಯೂಷನ್ ಇನ್ ಆನ್ ಏರಿಯಾ ಆಫ್ ನಾರ್ತ್ ನೈಲ್ ಡೆಲ್ಟಾ” ಎಂಬ ಇತ್ತೀಚಿನ ಅಧ್ಯಯನವು ಈ ಪ್ರದೇಶದಲ್ಲಿ ಮೆಟಾಲಾಯ್ಡ್‌ನ ಹೆಚ್ಚಿನ ಸಾಂದ್ರತೆಯನ್ನು ವರದಿ ಮಾಡಿದೆ. ಈಜಿಪ್ಟ್ ವಿಮಾನದ ಪಾಕಿಸ್ತಾನದ ಲ್ಯಾಂಡಿಂಗ್ ಈ ಅಂಶಕ್ಕೆ ಸಂಬಂಧಿಸಿರಬಹುದು ಎಂಬ ಊಹಾಪೋಹ ಹಬ್ಬಿದೆ.
ಈ ಬೋರಾನ್ ವಿಕಿರಣವನ್ನು ಹೀರಿಕೊಳ್ಳುವ ಗುಣಲಕ್ಷಣಗಳಿಗಾಗಿ ಪರಮಾಣು ಶಕ್ತಿ ವಲಯ ಸೇರಿದಂತೆ ವ್ಯಾಪಕ ಕೈಗಾರಿಕಾ ಬಳಕೆಯಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ.

ಪ್ರಮುಖ ಸುದ್ದಿ :-   ಭಯೋತ್ಪಾದಕರ ಅಂತ್ಯಕ್ರಿಯೆ ನೇತೃತ್ವ ವಹಿಸಿದ್ದ ಘೋಷಿತ ಭಯೋತ್ಪಾದಕನನ್ನು 'ಕೌಟುಂಬಿಕ ವ್ಯಕ್ತಿ'-'ಧರ್ಮ ಪ್ರಚಾರಕ' ಎಂದ ಪಾಕಿಸ್ತಾನ ಸೇನೆ...!

ಬೋರಾನ್ ವಿಶೇಷತೆ ಏನು ?
ಬೋರೇಟ್‌ಗಳು, ಅದರಲ್ಲಿಯೂ ವಿಶೇಷವಾಗಿ ಐಸೊಟೋಪ್ ಬೋರಾನ್-10, ಪರಮಾಣು ವಿದ್ಯುತ್ ಸ್ಥಾವರಗಳ ಸುರಕ್ಷಿತ ಕಾರ್ಯಾಚರಣೆಗೆ ಬೇಕಾಗುತ್ತದೆ. ಬೋರಾನ್ ಎಂಬುದು ವಿಶೇಷ ರಾಸಾಯನಿಕವಾಗಿದ್ದು, ಈ ಬೋರಾನ್ ಬಿ ಚಿಹ್ನೆ ಮತ್ತು ಪರಮಾಣು ಸಂಖ್ಯೆ 5 ಅನ್ನು ಹೊಂದಿದ್ದು, ಸ್ಫಟಿಕ ರೂಪದಲ್ಲಿ ದೊರೆಯುವ ಇದು ಸುಲಭವಾಗಿ, ಗಾಢವಾದ, ಹೊಳಪಿನ ಲೋಹವಾಗಿದೆ. ಇದರ ಪರಿಣಾಮವಾಗಿ ಬೋರಿಕ್ ಆಮ್ಲ, ಖನಿಜ ಸೋಡಿಯಂ ಬೋರೇಟ್ ಮತ್ತು ಬೋರಾನ್ ಕಾರ್ಬೈಡ್ ಮತ್ತು ಬೋರಾನ್ ನೈಟ್ರೈಡ್‌ನ ಅಲ್ಟ್ರಾ-ಹಾರ್ಡ್ ಸ್ಫಟಿಕಗಳಂತಹ ಅನೇಕ ಸಂಯುಕ್ತಗಳು ಉಂಟಾಗುತ್ತವೆ.
ಸಾಮಾನ್ಯವಾಗಿ ಇದನ್ನು ವಿಕಿರಣ ಸೋರಿಕೆಯಂತಹ ಕ್ಲಿಷ್ಠ ಪರಿಸ್ಥಿತಿಗಳಲ್ಲಿ ತಟಸ್ಛಗೊಳಿಸಲು ಬಳಸಲಾಗುತ್ತದೆ. ಈ ಹಿಂದೆ 1986ರ ಚೆರ್ನೋಬಿಲ್ ದುರಂತದ ಸಮಯದಲ್ಲಿ, ವಿಕಿರಣ ಹೊರಸೂಸುವಿಕೆಯನ್ನು ನಿಗ್ರಹಿಸಲು ಮರಳು, ಬೋರಾನ್ ಮತ್ತು ಸೀಸದ ಮಿಶ್ರಣವನ್ನು ತೆರೆದ ರಿಯಾಕ್ಟರ್ ಮೇಲೆ ಬಿಡಲಾಯಿತು. ಬಳಿಕ ಕ್ರಮೇಣ ಇಲ್ಲಿ ವಿಕಿರಣ ಪ್ರಭಾವ ಕಡಿಮೆಯಾಗಿತ್ತು ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಭಯೋತ್ಪಾದಕರ ಅಂತ್ಯಕ್ರಿಯೆ ನೇತೃತ್ವ ವಹಿಸಿದ್ದ ಘೋಷಿತ ಭಯೋತ್ಪಾದಕನನ್ನು 'ಕೌಟುಂಬಿಕ ವ್ಯಕ್ತಿ'-'ಧರ್ಮ ಪ್ರಚಾರಕ' ಎಂದ ಪಾಕಿಸ್ತಾನ ಸೇನೆ...!

4.6 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement