ಮುಂಬೈ : ಸನ್ ಆಫ್ ಸರ್ದಾರ್ ಸಿನೆಮಾ ಖ್ಯಾತಿಯ ಬಹುಭಾಷಾ ನಟ ಮುಕುಲ್ ದೇವ್ (54) ನಿಧನರಾಗಿದ್ದಾರೆ. ಮುಕುಲ್ ಅವರ ಸಾವಿನ ಸುದ್ದಿಯನ್ನು ಅವರ ಸಹೋದರ ರಾಹುಲ್ ದೇವ್ (Rahul Dev) ಖಚಿತ ಪಡಿಸಿದ್ದಾರೆ
ಹಿಂದಿ, ಪಂಜಾಬಿ ಸೇರಿದಂತೆ ವಿವಿಧ ಭಾಷೆಗಳ ಸಿನೆಮಾಗಳು ಚಲನಚಿತ್ರಗಳು ಮತ್ತು ಕಿರುತೆರೆಯಲ್ಲಿ ನಟಿಸಿದ್ದ ಅವರು, ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕಳೆದ 8-10 ದಿನಗಳಿಂದ ದೆಹಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಅವರು ಕೆಲವು ಬಂಗಾಳಿ, ಮಲಯಾಳಂ, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದರು. ‘ಯಮ್ಲಾ ಪಗ್ಲಾ ದೀವಾನಾ’ ಚಿತ್ರದ ಅಭಿನಯಕ್ಕಾಗಿ, ಅವರಿಗೆ 7 ನೇ ಅಮರೀಶ್ ಪುರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ದೆಹಲಿಯಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಇವರು 1996 ರಲ್ಲಿ ವಿಜಯ ಪಾಂಡೆ ಪಾತ್ರದಲ್ಲಿ ‘ಮಮ್ಕಿನ್’ ಧಾರಾವಾಹಿಯೊಂದಿಗೆ ಟಿವಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ದೂರದರ್ಶನದ ‘ಏಕ್ ಸೆ ಬಾದ್ ಕರ್ ಏಕ್’ ಎಂಬ ಹಾಸ್ಯ ಕೌಂಟ್‌ಡೌನ್ ಶೋನಲ್ಲಿಯೂ ನಟಿಸಿದರು. ಅವರು ‘ಕಿಲಾ’ (1998), ‘ವಾಜೂದ್’ (1998), ‘ಕೊಹ್ರಾಮ್’ (1999) ಮತ್ತು ‘ಮುಝೆ ಮೇರಿ ಬಿವಿ ಸೆ ಬಚಾವೊ’ (2001), ಪಗ್ಲಾ ದೀವಾನಾ , ಸನ್ ಆಫ್ ಸರ್ದಾರ್ , ಆರ್… ರಾಜ್‌ಕುಮಾರ್ ಮತ್ತು ಜೈ ಹೋ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅವರು ಕನ್ನಡದಲ್ಲಿಯೂ ನಟಿಸಿದ್ದರು. 2009ರಲ್ಲಿ ‘ರಜನಿ’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಚಿತ್ರದಲ್ಲಿ ಖಳ ನಾಯಕನ ಪಾತ್ರ ಮಾಡಿದ್ದರು. 2016ರಲ್ಲಿ ‘ನಾಗರಹಾವು’ ಸಿನಿಮಾ ನಟಿಸಿದ್ದರು. 2022ರಲ್ಲಿ ರಿಲೀಸ್ ಆದ ‘ಅಂತ್ ದಿ ಎಂಡ್’ ಅವರು ನಟಿಸಿದ ಕೊನೆಯ ಸಿನಿಮಾ ಆಗಿದೆ. ಇದಲ್ಲದೆ, ಧಾರಾವಾಹಿ ಹಾಗೂ ವೆಬ್ ಸೀರಿಸ್ಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ