ವೀಡಿಯೊ | ಮದುವೆ ಮನೆಯಲ್ಲಿ ಕೂಲರ್ ವಿಚಾರಕ್ಕೆ ಮಾರಾಮಾರಿ…!

ಲಕ್ನೋ : ಮದುವೆ ಮನೆಯಲ್ಲಿ ಕೂಲರ್ (Cooler) ವಿಚಾರಕ್ಕೆ ಉಂಟಾದ ಜಗಳ ವಿಕೋಪಕ್ಕೆ ಹೋಗಿ ಹೊಡೆದಾಟ ನಡೆದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ (Jhansi) ನಡೆದಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ. ಕೂಲರ್ ವಿಚಾರವಾಗಿ ವಧು ಮತ್ತು ವರನ ಕಡೆಯವರ ಮಧ್ಯೆ ವಾಗ್ವಾದ ಪ್ರಾರಂಭವಾಗಿ ಅದು ಹಿಂಸೆಗೆ ತಿರುಗಿದೆ. ಘಟನೆ ಸಿಪ್ರಿ ಬಜಾರ್‌ನಲ್ಲಿ ಮೇ 28ರಂದು ನಡೆದಿದೆ.
ಕೂಲರ್ ಬಗ್ಗೆ ವಧು ಮತ್ತು ವರನ ಕುಟುಂಬ ಸದಸ್ಯರು ಜಗಳ ನಡೆದು ಹಿಂಸೆಗೆ ತಿರುಗಿದೆ. ಇದರಿಂದ ಮದುವೆ ಮನೆ ರಣಾಂಗಣವಾಗಿ ಮಾರ್ಪಟ್ಟಿದೆ.

ಸಿಪ್ರಿ ಬಜಾರ್‌ನಲ್ಲಿ ವಿವಾಹ ವಿಧಿವಿಧಾನಗಳು ಸುಗಮವಾಗಿ ನಡೆಯುತ್ತಿತ್ತು. ನವವಿವಾಹಿತರಿಗಾಗಿ ಕೂಲರ್ ಇರಿಸಲಾಗಿತ್ತು. ವರನ ಕಡೆಯ ಕೆಲವು ಸದಸ್ಯರು ಕೂಲರ್‌ನ ಮುಂದೆ ನೇರವಾಗಿ ಕುಳಿತು ಗಾಳಿಯ ಹರಿವನ್ನು ತಡೆಯುತ್ತಿದ್ದರು. ಇದಕ್ಕೆ ವಧುವಿನ ಕಡೆಯ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಬೇರೆ ಕಡೆ ಅವರನ್ನು ಕುಳಿತುಕೊಳ್ಳಲು ಹೇಳಿದ್ದು ಮಾತಿನ ಚಕಮಕಿಗೆ ಕಾರಣವಾಯಿತು. ಇದು ವಿಕೋಪಕ್ಕೆ ಹೋಗಿ ಅತಿಥಿಗಳು ಪರಸ್ಪರ ಪ್ಲಾಸ್ಟಿಕ್ ಕುರ್ಚಿ, ಪಾತ್ರೆಗಳಲ್ಲಿ ಹೊಡೆದಾಡಿಕೊಂಡರು. ಇದಕ್ಕೆ ಪುರುಷರು, ಮಹಿಳೆಯರು ಎಲ್ಲರೂ ಸೇರಿದರು. ಕೆಲವರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸಿದರು. ಬಳಿಕ ವರನ ಕಡೆಯವರು ಊಟವನ್ನು ಬಿಟ್ಟು ಮದುವೆ ಮಂಟಪದಿಂದ ಹೊರನಡೆದರು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಪೊಲೀಸರಿಗೆ ವಧುವಿನ ಕಡೆಯವರು ವೀಡಿಯೊ ಸಾಕ್ಷಿಯನ್ನು ನೀಡಿ ಬಳಿಕ ಎಸ್‌ಎಸ್‌ಪಿ ಕಚೇರಿಗೆ ಆಗಮಿಸಿ ಔಪಚಾರಿಕವಾಗಿ ದೂರು ದಾಖಲಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ವಧುವಿನ ಸಹೋದರ, ನಾವು ಊಟ ಬಡಿಸುತ್ತಿದ್ದಾಗ ಕೆಲವು ಹುಡುಗರು ಕೂಲರ್ ಮುಂದೆ ಕುಳಿತಿದ್ದರು. ದಂಪತಿಗೆ ಸ್ವಲ್ಪ ಗಾಳಿ ಸಿಗುವಂತೆ ನಾವು ಅವರನ್ನು ಬೇರೆ ಕಡೆ ಕುಳಿತುಕೊಳ್ಳಲು ಹೇಳಿದೆವು. ಆದರೆ ಅವರು ನಮ್ಮೊಂದಿಗೆ ಜಗಳವಾಡಲು ಪ್ರಾರಂಭಿಸಿದರು ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಚ್ಚಿಬೀಳಿಸುವ ವೀಡಿಯೊ | ಇನ್‌ಸ್ಟಾಗ್ರಾಂನಲ್ಲಿ ಜಗಳ...ರಸ್ತೆಯಲ್ಲಿ ಹೊಡೆದಾಟ ; ನಂತರ ಕೋಪದಲ್ಲಿ ಯುವಕನಿಗೆ ವಾಹನ ಗುದ್ದಿಸಿ ಪರಾರಿ

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement