ನವದೆಹಲಿ : ತೆಹ್ರಾನ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಇರಾನಿನ ಹಲವಾರು ಮಿಲಿಟರಿ ಪ್ರಮುಖರು ಮತ್ತು ಪರಮಾಣು ವಿಜ್ಞಾನಿಗಳು “ಹುತಾತ್ಮರಾಗಿದ್ದಾರೆ” ಎಂದು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ದೃಢಪಡಿಸಿದ್ದಾರೆ.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನಿನ 78 ಜನರು ಮೃತಪಟ್ಟಿದ್ದು, 329 ಮಂದಿ ಗಾಯಗೊಂಡಿದ್ದಾರೆ. ದಾಳಿಯ ಸಮಯದಲ್ಲಿ, ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ನ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ ಜನರಲ್ ಹಾಜಿಜಾದೆ ಹತ್ಯೆಯಾಗಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇರಾನ್ ಈ ಹಿಂದೆ ಈ ಹೇಳಿಕೆಯನ್ನು ನಿರಾಕರಿಸಿತ್ತು. ಆದರೆ ಈಗ ಅದನ್ನು ದೃಢಪಡಿಸಿದೆ. ಈ ದಾಳಿಯ ಸಮಯದಲ್ಲಿ 6 ಪ್ರಮುಖ ಪರಮಾಣು ವಿಜ್ಞಾನಿಗಳು ಮತ್ತು ಹಲವಾರು ಹಿರಿಯ ಮಿಲಿಟರಿ ನಾಯಕರು ಸಹ ಸಾವವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ ನಾಲ್ಕು ಸೇನಾ ಜನರಲ್‌ಗಳು ಹಾಗೂ ಇರಾನ್‌ನ ಪರಮಾಣು ಇಂಧನ ಸಂಸ್ಥೆಯ ಮಾಜಿ ಮುಖ್ಯಸ್ಥ ಫೆರೆದೌನ್ ಅಬ್ಬಾಸಿ ಸೇರಿದಂತೆ 6 ಪರಮಾಣು ವಿಜ್ಞಾನಿಗಳು ಸಹ ಸೇರಿದ್ದಾರೆ.
ಶುಕ್ರವಾರ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಉನ್ನತ ಮಿಲಿಟರಿ ಅಧಿಕಾರಿ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಬಾಘೇರಿ ಸಾವಿಗೀಡಾಗಿದ್ದಾರೆ. ಅವರಲ್ಲದೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ಕಮಾಂಡರ್-ಇನ್-ಚೀಫ್ ಮೇಜರ್ ಜನರಲ್ ಹೊಸೇನ್ ಸಲಾಮಿ, ಖತಮ್-ಅಲ್ ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಕಮಾಂಡರ್ ಮೇಜರ್ ಜನರಲ್ ಘೋಲಮ್ ಅಲಿ ರಶೀದ್ ಅವರು ಮೃತಪಟ್ಟಿದ್ದಾರೆ. ಇನ್ನು ತನ್ನ ದಾಳಿಯ ಸಮಯದಲ್ಲಿ, ಇರಾನಿನ ಕ್ರಾಂತಿಕಾರಿ ಗಾರ್ಡ್‌ನ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ ಜನರಲ್ ಅಮೀರ್ ಅಲಿ ಹಾಜಿಜಾದೆ ಕೊಲ್ಲಲ್ಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ ಇರಾನ್ ಈ ಹಿಂದೆ ಈ ಹೇಳಿಕೆಯನ್ನು ನಿರಾಕರಿಸಿತ್ತು ಆದರೆ ಈಗ ಅದನ್ನು ದೃಢಪಡಿಸಿದೆ.
ಅಲ್ಲದೆ ಕೊಲ್ಲಲ್ಪಟ್ಟವರಲ್ಲಿ ಇರಾನಿನ ಆರು ಪ್ರಮುಖ ಪರಮಾಣು ವಿಜ್ಞಾನಿಗಳು ಸಹ ಸೇರಿದ್ದಾರೆ.
ಕೊಲ್ಲಲ್ಪಟ್ಟ ಪ್ರಮುಖ ಪರಮಾಣು ವಿಜ್ಞಾನಿಗಳು
ಫೆರೆದೌನ್ ಅಬ್ಬಾಸಿ – ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯ ಮಾಜಿ ಮುಖ್ಯಸ್ಥ ಮತ್ತು ಸಂಸತ್ತಿನ ಸದಸ್ಯ.
ಮೊಹಮ್ಮದ್ ಮೆಹದಿ ತೆಹ್ರಾನ್ಚಿ – ಸೈದ್ಧಾಂತಿಕ ಭೌತಶಾಸ್ತ್ರಜ್ಞ ಮತ್ತು ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯದ ಮಾಜಿ ಡೈರೆಕ್ಟರ್.
ಅಬ್ದುಲ್ಹಮಿದ್ ಮಿನೌಚೆರ್ – ಪರಮಾಣು ವಿಜ್ಞಾನಿ.
ಅಹ್ಮದ್ರೆಜಾ ಜೊಲ್ಫಾಘರಿ – ಪರಮಾಣು ವಿಜ್ಞಾನಿ.
ಸೆಯ್ಯದ್ ಅಮಿರ್ಹೊಸೇನ್ ಫಖಿ – ಪರಮಾಣು ವಿಜ್ಞಾನಿ.
ಮೊತ್ಲಾಬಿಜಾದೆ – ಪರಮಾಣು ವಿಜ್ಞಾನಿ.
ಇಸ್ರೇಲ್ ಇರಾನ್‌ನಾದ್ಯಂತ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಪರಮಾಣು ಸೌಲಭ್ಯಗಳು ಮತ್ತು ಮಿಲಿಟರಿ ನಾಯಕತ್ವವನ್ನು ಕೇಂದ್ರೀಕರಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ