ಇರಾನ್ ವಿರುದ್ಧ ದಾಳಿ: “ನಾನು ಅದನ್ನು ಮಾಡಬಹುದು, ಮಾಡದೆಯೂ ಇರಬಹುದು ಎಂದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ ಡಿಸಿ: ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದ್ದಕ್ಕಾಗಿ ಅಮೆರಿಕ ಮತ್ತು ಅದರ ಅಧ್ಯಕ್ಷರಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಭರಿಸಲಾಗದ ಹಾನಿಯನ್ನು ಅನುಭವಿಸುತ್ತದೆ” ಎಂದು ಎಚ್ಚರಿಕೆ ನೀಡಿದ ಕೆಲವು ಗಂಟೆಗಳ ನಂತರ, ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಅಮೆರಿಕವು ಇರಾನ್ ಮೇಲೆ ದಾಳಿ ಮಾಡಬಹುದು ಅಥವಾ ಮಾಡದಿರಬಹುದು ಎಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸದಂತೆ ನೋಡಿಕೊಳ್ಳಲು ಅದರ ವಿರುದ್ಧದ ಮಿಲಿಟರಿ ದಾಳಿಯಲ್ಲಿ ಅಮೆರಿಕವು ಇಸ್ರೇಲ್ ಜೊತೆ ಸೇರುತ್ತದೆಯೇ ಎಂಬುದರ ಕುರಿತು ಮಾತನಾಡಿದರು. ಎರಡೂ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಂಡು ಹೇಳಿಕೆ ನೀಡಿದ ಅವರು, “ನಾನು ಅದನ್ನು ಮಾಡಬಹುದು, ನಾನು ಅದನ್ನು ಮಾಡದಿರಬಹುದು – ನಾನು ಏನು ಮಾಡಲಿದ್ದೇನೆಂದು ಯಾರಿಗೂ ತಿಳಿದಿಲ್ಲ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಕೆಲವು ಗಂಟೆಗಳ ಹಿಂದೆ, ಇರಾನ್‌ನ ಸರ್ವೋಚ್ಚ ನಾಯಕ ಇರಾನ್ “ಎಂದಿಗೂ ಶರಣಾಗುವುದಿಲ್ಲ” ಎಂದು ಹೇಳಿದ್ದರು. ಇರಾನ್‌ನ “ಬೇಷರತ್ತಾದ ಶರಣಾಗತಿ”ಗಾಗಿ ಡೊನಾಲ್ಡ್ ಟ್ರಂಪ್ ನೀಡಿದ ಕರೆಗೆ ಅವರು ಪ್ರತಿಕ್ರಿಯಿಸಿದ್ದರು.
ಮಂಗಳವಾರ, ಡೊನಾಲ್ಡ್ ಟ್ರಂಪ್, “ಅಯತೊಲ್ಲಾ ಅಲಿ ಖಮೇನಿ ಎಲ್ಲಿ ಅಡಗಿದ್ದಾರೆಂದು ನಮಗೆ ತಿಳಿದಿದೆ. ಅವರು (ಖಮೇನಿ) ಸುಲಭವಾದ ಗುರಿ, ಆದರೆ ಅಲ್ಲಿ ಸುರಕ್ಷಿತ – ನಾವು ಅವರನ್ನು ಹೊರಗೆ ಕರೆದೊಯ್ಯುವುದಿಲ್ಲ (ಕೊಲ್ಲಲು!), ಕನಿಷ್ಠ ಈಗ ಮಾಡುವುದಿಲ್ಲ. ಆದರೆ ಅವರು ನಾಗರಿಕರು ಅಥವಾ ಅಮೇರಿಕನ್ ಸೈನಿಕರ ಮೇಲೆ ಕ್ಷಿಪಣಿಗಳನ್ನು ಹಾರಿಸುವುದನ್ನೂ ನಾವು ಬಯಸುವುದಿಲ್ಲ” ಎಂದು ಹೇಳಿದ್ದರು. ಆದರೆ ಟ್ರಂಪ್ “ತಾಳ್ಮೆ ಕ್ಷೀಣಿಸುತ್ತಿದೆ” ಎಂದು ಎಚ್ಚರಿಸಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement